Ishan Kishan: ವಿಶ್ವದಾಖಲೆಯ ದ್ವಿಶತಕ ಸಿಡಿಸಿ ಬೇಸರ ಹೊರಹಾಕಿದ ಇಶಾನ್ ಕಿಶನ್..!

Ishan Kishan: ನಾನು ಔಟಾಗುವಾಗ, ಭಾರತದ ಇನ್ನಿಂಗ್ಸ್​ನಲ್ಲಿ ಇನ್ನೂ 15 ಓವರ್‌ಗಳು (14.1 ಓವರ್‌ಗಳು) ಬಾಕಿ ಉಳಿದಿದ್ದವು. ಹೀಗಾಗಿ ನನಗೆ 300 ರನ್ ಗಳಿಸುವ ಅವಕಾಶವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಇಶಾನ್ ತಮ್ಮ ವಿಷಾದವನ್ನು ಹೊರಹಾಕಿದ್ದಾರೆ.

Ishan Kishan: ವಿಶ್ವದಾಖಲೆಯ ದ್ವಿಶತಕ ಸಿಡಿಸಿ ಬೇಸರ ಹೊರಹಾಕಿದ ಇಶಾನ್ ಕಿಶನ್..!
Ishan Kishan
Follow us
TV9 Web
| Updated By: ಪೃಥ್ವಿಶಂಕರ

Updated on:Dec 11, 2022 | 12:28 PM

ಶನಿವಾರ ಬಾಂಗ್ಲಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ (India vs Bangladesh) ವಿಶ್ವ ದಾಖಲೆಯ ದ್ವಿಶತಕ ಸಿಡಿಸಿದ್ದ ಭಾರತದ ಯುವ ಆಟಗಾರ ಇಶಾನ್ ಕಿಶನ್ (Ishan Kishan) ಇಡೀ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗದ ದ್ವಿಶತಕವನ್ನು ಬಾರಿಸಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ದಾಖಲೆಯೊಂದಿಗೆ ಹತ್ತು ಹಲವು ದಾಖಲೆಗಳನ್ನು ಬರೆದಿರುವ ಕಿಶನ್​ಗೆ, ಕ್ರಿಕೆಟ್​ ಲೆಜೆಂಡ್​ಗಳು ಶಹಬ್ಬಾಸ್​ಗಿರಿ ನೀಡಿದ್ದಾರೆ. ತಮ್ಮ ಏಕದಿನ ವೃತ್ತಿಜೀವನದ ಮೊದಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದ ಕಿಶನ್​ಗೆ ಈ ದ್ವಿಶತಕ ಅಷ್ಟು ತೃಪ್ತಿ ನೀಡಿಲ್ಲ. ಸ್ವತಃ ಈ ಮಾತನ್ನು ಕಿಶನ್ ಅವರೇ ಹೇಳಿದ್ದು, ನಾನು ನನ್ನ ದ್ವಿಶತಕವನ್ನು ತ್ರಿಶತಕವನ್ನಾಗಿ ಪರಿವರ್ತಿಸದಿರುವುದು ನನಗೆ ಬೇಸರ ತಂದಿದೆ ಎಂದಿದ್ದಾರೆ.

ತಂಡದಿಂದ ಕೈಬಿಡಲಾಗಿತ್ತು

ಒಂದೂವರೆ ವರ್ಷದ ಹಿಂದೆ ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕಿಶನ್​ಗೆ ಆರಂಭದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಹೀಗಾಗಿ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಬಳಿಕ ತಂಡದಿಂದ ಕೈಬಿಡಲಾಗಿತ್ತು. ಈ ಸರಣಿಯಲ್ಲೂ ಕಿಶನ್​ಗೆ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿರಲಿಲ್ಲ. ಆದರೆ ನಾಯಕ ರೋಹಿತ್ ಇಂಜುರಿಯಿಂದ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡ ಕಿಶನ್, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಇದರೊಂದಿಗೆ ಎಡಗೈ ಬ್ಯಾಟರ್ ಆಗಿರುವ ಕಿಶನ್, ಧವನ್ ಬದಲಿಗೆ ನಾನು ಓಪನರ್ ಆಗಲು ಸಿದ್ದನಿದ್ದೇನೆ ಎಂಬ ಸಂದೇಶವನ್ನು ಬಿಸಿಸಿಐಗೆ ನೀಡಿದ್ದಾರೆ.

ಬಿಹಾರದಲ್ಲಿ ಕಿಶನ್ ದ್ವಿಶತಕದ ಸಂಭ್ರಮ; ‘ಮಗ ಪ್ರಬುದ್ಧನಾಗಿದ್ದಾನೆ’ ಎಂದ ಅಪ್ಪ, ಸಿಎಂ ನಿತೀಶ್ ಅಭಿನಂದನೆ

ಧವನ್ ಬದಲಿಯಾಗಿ ಕಿಶನ್?

ವಾಸ್ತವವಾಗಿ, ಬಿಸಿಸಿಐ ಮುಂದಿನ ವರ್ಷ ನಡೆಯಲ್ಲಿರುವ ಏಕದಿನ ವಿಶ್ವಕಪ್​ಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದು, ತಂಡವನ್ನು ಪೂರ್ಣವಾಗಿ ಬಲಿಷ್ಠಗೊಳಿಸುವ ಕಸರತ್ತು ನಡೆಸುತ್ತಿದೆ. ಆದರೆ ಆರಂಭಿಕ ಆಯ್ಕೆಯಾಗಿರುವ ಧವನ್ ಕಳಪೆ ಫಾರ್ಮ್​ನಿಂದ ಬಳಲುತ್ತಿರುವುದು ಬಿಸಿಸಿಐಗೆ ತಲೆನೋವಾಗಿತ್ತು. ಆದರೀಗ ಇಶಾನ್ ಕಿಶನ್ ದಾಖಲೆಯ ದ್ವಿಶತಕ ಸಿಡಿಸಿರುವುದು ಬಿಸಿಸಿಐಗೆ ಧವನ್ ಬದಲಿಯ ಆಯ್ಕೆಯನ್ನು ಸುಲಭಗೊಳಿಸಿದೆ.

ದ್ವಿಶತಕವನ್ನು ತ್ರಿಶತಕವನ್ನಾಗಿ ಪರಿವರ್ತಿಸುವ ಸಾಧ್ಯತೆ ಇತ್ತು

ಶನಿವಾರ ನಡೆದ ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ ಮೊದಲ ಬ್ಯಾಟಿಂಗ್ ಮಾಡಿ ರನ್ ಮಳೆ ಸುರಿಸಿತು. ಇದರಲ್ಲಿ ಇಶಾನ್ ಕಿಶನ್ ಆಟವೇ ಇಡೀ ಪಂದ್ಯದ ಹೈಲೇಟ್ಸ್ ಆಗಿತ್ತು. ಶತಕ ಬಾರಿಸುವವರೆಗೂ ತಾಳ್ಮೆಯಲ್ಲಿದ್ದ ಕಿಶನ್, ಶತಕದ ಬಳಿಕ ರೌದ್ರವತಾರ ತಾಳಿದರು. 85 ಎಸೆತಗಳಲ್ಲಿ ಶತಕ ಪೂರೈಸಿದ ಕಿಶನ್, ಆ ಬಳಿಕ ಕೇವಲ 103 ಎಸೆತಗಳಲ್ಲಿ 150 ರನ್ ಪೂರೈಸಿ, ಅತ್ಯಂತ ವೇಗವಾಗಿ 150 ರನ್ ಪೂರೈಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದರು. ಅನಂತರ ಮತ್ತಷ್ಟು ಸ್ಫೋಟಕ ಆಟ ಆಡಿದ ಕಿಶನ್, ಒಟ್ಟು 131 ಎಸೆತಗಳಲ್ಲಿ 210 ರನ್ ಬಾರಿಸಿ ತಮ್ಮ ವಿಕೆಟ್ ಒಪ್ಪಿಸಿದರು.

ಕಿಶನ್ ಔಟದಾಗ ಭಾರತದ ಇನಿಂಗ್ಸ್‌ನ 36ನೇ ಓವರ್‌ ನಡೆಯುತ್ತಿತ್ತು. ಹೀಗಾಗಿ ಇನ್ನೂ 14 ಓವರ್‌ಗಳ ಆಟ ಬಾಕಿ ಇತ್ತು. ಇಂತಹ ಪರಿಸ್ಥಿತಿಯಲ್ಲಿ ವಿಕೆಟ್ ಕಳೆದುಕೊಳ್ಳದೇ ಇದ್ದಿದ್ದರೆ ಇನ್ನಷ್ಟು ರನ್ ಗಳಿಸಿ ದ್ವಿಶತಕವನ್ನು ತ್ರಿಶತಕವನ್ನಾಗಿ ಪರಿವರ್ತಿಸುವ ಸಾಧ್ಯತೆಯೂ ಇತ್ತು. ಹೀಗಾಗಿ ಪಂದ್ಯ ಮುಗಿದ ಬಳಿಕ ಮಾತನಾಡಿದ ಕಿಶನ್, ನಾನು ಔಟಾಗುವಾಗ, ಭಾರತದ ಇನ್ನಿಂಗ್ಸ್​ನಲ್ಲಿ ಇನ್ನೂ 15 ಓವರ್‌ಗಳು (14.1 ಓವರ್‌ಗಳು) ಬಾಕಿ ಉಳಿದಿದ್ದವು. ಹೀಗಾಗಿ ನನಗೆ 300 ರನ್ ಗಳಿಸುವ ಅವಕಾಶವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಇಶಾನ್ ತಮ್ಮ ವಿಷಾದವನ್ನು ಹೊರಹಾಕಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:25 pm, Sun, 11 December 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ