
ವಿರಾಟ್ ಕೊಹ್ಲಿ (Virat Kohli) ಮತ್ತು ಇಶಾಂತ್ ಶರ್ಮಾ ಅತ್ಯುತ್ತಮ ಸ್ನೇಹಿತರು. ಇಬ್ಬರೂ ದೆಹಲಿ ಪರ ಬಾಲ್ಯದಿಂದಲೂ ಒಟ್ಟಿಗೆ ದೇಶೀಯ ಕ್ರಿಕೆಟ್ ಆಡುತ್ತಾ ಬೆಳೆದವರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಇಶಾಂತ್ ಶರ್ಮಾ ಅವರೇ ಹೇಳಿದ್ದರು. ವಿರಾಟ್ ಹಾಗೂ ಇಶಾಂತ್ ಈಗಲೂ ಉತ್ತಮ ಸ್ನೇಹಿತರಾಗಿದ್ದಾರೆ. ಐಪಿಎಲ್ 2024ರ ಪಂದ್ಯದಲ್ಲಿ ಇಬ್ಬರು ಹಳೆಯ ಸ್ನೇಹಿತರು ಪರಸ್ಪರ ಮುಖಾಮುಖಿಯಾದರು. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದಲ್ಲಿ ಇವರಿಬ್ಬರು ಎದುರಾಳಿಯಾಗಿ ಆಡಿದರು. ಈ ಸಂದರ್ಭ ವಿಶೇಷ ಘಟನೆಯೊಂದು ಸಂಭವಿಸಿದೆ.
ಈ ಪಂದ್ಯದಲ್ಲಿ ಇಶಾಂತ್ ಶರ್ಮಾ ಅವರು ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದರು. ಐಪಿಎಲ್ 2024 ರಲ್ಲಿ ವಿರಾಟ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಅವರು ಅತ್ಯುತ್ತಮ ಆರಂಭವನ್ನು ಪಡೆದರು. ಆದರೆ 4ನೇ ಓವರ್‌ನ ಇಶಾಂತ್ ಬೌಲಿಂಗ್ನಲ್ಲಿ ಆಫ್ ಸ್ಟಂಪ್ ನಿಂದ ಹೊರಗೆ ಹೋಗುತ್ತಿದ್ದ ಚೆಂಡನ್ನು ಟಚ್ ಮಾಡಲು ಹೋಗಿ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ಗೆ ಸುಲಭವಾಗಿ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಬೇಕಾಯಿತು. ಇಶಾಂತ್ ಇದೇ ಮೊದಲ ಬಾರಿಗೆ ಟಿ20ಯಲ್ಲಿ ವಿರಾಟ್ ಅವರನ್ನು ಔಟ್ ಮಾಡಿದರು.
ಟೂರ್ನಿಯಿಂದ ಔಟಾದ ಅವಮಾನದ ನಡುವೆ ಕುಣಿದು-ಕುಪ್ಪಳಿಸಿ ಪಾರ್ಟಿ ಮಾಡಿದ ಹಾರ್ದಿಕ್ ಪಾಂಡ್ಯ
ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ನಂತರ ಇಶಾಂತ್ ಶರ್ಮಾ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಗೆಳೆಯನಿಗೆ ಚುಡಾಯಿಸುವ ಅವಕಾಶ ಸಿಕ್ಕಿರುವುದಕ್ಕಿಂತ ಸಂತೋಷ ಮತ್ತೇನು?, ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಳ್ಳದ ಇಶಾಂತ್, ವಿರಾಟ್ ಬಳಿ ಬಂದು ಅವರನ್ನು ತಳ್ಳಿದರು. ಇತರರು ಹೀಗೆ ಮಾಡಿದ್ದರೆ ಅಲ್ಲಿ ದೊಡ್ಡ ಜಗಳವೇ ನಡೆಯುತ್ತಿತ್ತು. ಇಶಾಂತ್ ಹೀಗೆ ಮಾಡಿದ ತಕ್ಷಣ ಕೊಹ್ಲಿ ಏನು ಮಾಡಿಬಿಡುತ್ತಾರೋ ಎಂದು ಒಂದು ಕ್ಷಣ ಅಭಿಮಾನಿಗಳು ಕೂಡ ಆತಂಕಕ್ಕೆ ಒಳಗಾದರು. ಆದರೆ, ಇತರರಿಗೆ ಕಣ್ಣು ಹಾಯಿಸುತ್ತಿದ್ದ ವಿರಾಟ್ ಕೊಹ್ಲಿ ಇಲ್ಲಿ ಇಶಾಂತ್ ತಳ್ಳಿದ ನಂತರವೂ ಕೆಳಗೆ ನೋಡುತ್ತಾ ನಗುತ್ತಾ ಪೆವಿಲಿಯನ್‌ಗೆ ಮರಳಿದರು. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
— Reeze-bubbly fan club (@ClubReeze21946) May 12, 2024
ಔಟಾಗುವ ಮುನ್ನ ವಿರಾಟ್ ಕೊಹ್ಲಿ ಕೂಡ ಇಶಾಂತ್ ಶರ್ಮಾ ಅವರನ್ನು ಚುಡಾಯಿಸಿದ್ದರು. ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಇಶಾಂತ್ ವಿರುದ್ಧ ವಿರಾಟ್ ಸಿಕ್ಸರ್ ಬಾರಿಸಿದರು. ಇದಾದ ನಂತರ ಇಶಾಂತ್ ಬಳಿ ಹೋಗಿ ಏನೋ ಹೇಳಿದರು. ನಂತರ ಔಟಾದ ಓವರ್‌ನ ಮೊದಲ ಎಸೆತದಲ್ಲಿ ವಿರಾಟ್ ಬೌಂಡರಿ ಬಾರಿಸಿದರು. ಆದರೆ ಅಂತಿಮವಾಗಿ, ಇಶಾಂತ್ ಶರ್ಮಾ ಅವರು ಕೊಹ್ಲಿಯನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು.
ಸತತ 5ನೇ ಜಯ: ಪೋಸ್ಟ್ ಮ್ಯಾಚ್ ವೇಳೆ ಖುಷಿಯಲ್ಲಿ ಆರ್ಸಿಬಿ ನಾಯಕ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ
ಪಂದ್ಯದುದ್ದಕ್ಕೂ ಇವರಿಬ್ಬರ ನಡುವಣ ತಮಾಷೆ ನಡೆಯುತ್ತಲೇ ಇತ್ತು. ಇಶಾಂತ್ ಬ್ಯಾಟಿಂಗ್ಗೆ ಬಂದಾಗ ಫೀಲ್ಡ್ನಲ್ಲಿದ್ದ ಕೊಹ್ಲಿ ತಮಾಷೆ ಮಾಡುತ್ತಿರುವುದು ಕಂಡುಬಂತು. ಇಬ್ಬರೂ ನಗುತ್ತಾ ಮಾತನಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ.
Kohli – Ishant moment. 😄👌
– When 2 West Delhi Boys meet each other….!!!! pic.twitter.com/ZX751RwrlR
— Johns. (@CricCrazyJohns) May 13, 2024
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತು. ರಜತ್ ಪಾಟಿದರ್ 52, ವಿಲ್ ಜ್ಯಾಕ್ಸ್ 41 ಹಾಗೂ ಕ್ಯಾಮ್ರೋನ್ ಗ್ರೀನ್ ಅಜೇಯ 32 ರನ್ ಗಳಿಸಿದರು. ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಪವರ್ ಪ್ಲೇನಲ್ಲೇ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. 19.1 ಓವರ್ಗಳಲ್ಲಿ 140 ರನ್ಸ್ಗೆ ಆಲೌಟ್ ಆಯಿತು. ತಂಡದ ಪರ ನಾಯಕ ಅಕ್ಷರ್ ಪಟೇಲ್ 57 ರನ್ ಗಳಿಸಿದ್ದು ಗರಿಷ್ಠ ಸ್ಕೋರ್. 47 ರನ್ಗಳ ಜಯದ ಮೂಲಕ ಆರ್ಸಿಬಿ ತಂಡದ ಪ್ಲೇ ಆಫ್ ಕನಸು ಜೀವಂತವಾಗಿದೆ. ಮುಂದಿನ ಹಾಗೂ ಕೊನೆಯ ಲೀಗ್ ಪಂದ್ಯವನ್ನು ಆರ್ಸಿಬಿ, ಚೆನ್ನೈ ವಿರುದ್ಧ ಮೇ 18ಕ್ಕೆ ಆಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ