Hardik Pandya: ಟೂರ್ನಿಯಿಂದ ಔಟಾದ ಅವಮಾನದ ನಡುವೆ ಕುಣಿದು-ಕುಪ್ಪಳಿಸಿ ಪಾರ್ಟಿ ಮಾಡಿದ ಹಾರ್ದಿಕ್ ಪಾಂಡ್ಯ
Kieron Pollard Birthday Celebration: ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2024 ರಲ್ಲಿ ತೀರಾ ಕಳಪೆ ಪ್ರದರ್ಶನ ತೋರಿ ಟೂರ್ನಿಯಿಂದ ಹೊರಬಿದ್ದಾಗಿದೆ. ಈ ನೋವಿನ ನಡುವೆಯೂ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸಖತ್ ಪಾರ್ಟಿಯಲ್ಲಿ ಮುಳುಗಿದ್ದಾರೆ. ಕೀರನ್ ಪೊಲಾರ್ಡ್ ಅವರ ಬರ್ತ್ ಡೇ ಸೆಲೆಬ್ರೇಷನ್ನಲ್ಲಿ ಪಾಂಡ್ಯ ಕುಣಿದು ಮಸ್ತ್ ಮಜಾ ಮಾಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ 17ನೇ ಸೀಸನ್ ಮುಂಬೈ ಇಂಡಿಯನ್ಸ್‌ಗೆ ತುಂಬಾ ಕೆಟ್ಟದಾಗಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡವಾಯಿತು. ಐಪಿಎಲ್ 2024 ರಲ್ಲಿ ಮುಂಬೈ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಮೈದಾನಕ್ಕಿಳಿಯಿತು. ಈ ಋತುವಿನಲ್ಲಿ ತಂಡವು ಇದುವರೆಗೆ ಒಟ್ಟು 13 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಕೇವಲ 4 ಪಂದ್ಯಗಳನ್ನಷ್ಟೆ ಗೆದ್ದಿದೆ. ಇಷ್ಟಾದರೂ ನಾಯಕ ಹಾರ್ದಿಕ್ ಪಾಂಡ್ಯಗೆ ಯಾವುದೇ ಟೆನ್ಷನ್ ಇಲ್ಲ. ತಂಡದ ನಿರಾಶಾದಾಯಕ ಪ್ರದರ್ಶನದ ಹೊರತಾಗಿಯೂ, ಹಾರ್ದಿಕ್ ಸಖತ್ ಪಾರ್ಟಿಯಲ್ಲಿ ಮುಳುಗಿದ್ದಾರೆ.
ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್ ಅವರ ಜನ್ಮದಿನದಂದು ಈ ಘಟನೆ ನಡೆದಿದೆ. ಪೊಲಾರ್ಡ್ ಮುಂಬೈ ಇಂಡಿಯನ್ಸ್ ಆಟಗಾರರೊಂದಿಗೆ ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಹಾರ್ದಿಕ್ ಪಾಂಡ್ಯ ಕೂಡ ಜೊತೆಗಿದ್ದರು. ಹಾರ್ದಿಕ್ ಅವರು ಪೊಲಾರ್ಡ್ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಿದ್ದು, ಕುಣಿದು ಮಸ್ತ್ ಮಜಾ ಮಾಡಿದ್ದಾರೆ. ಈ ವಿಶೇಷ ಸಂದರ್ಭದ ವಿಡಿಯೋ ಮತ್ತು ಫೋಟೋವನ್ನು ಮುಂಬೈ ಇಂಡಿಯನ್ಸ್ ತಂಡವು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.
ಸತತ 5ನೇ ಜಯ: ಪೋಸ್ಟ್ ಮ್ಯಾಚ್ ವೇಳೆ ಖುಷಿಯಲ್ಲಿ ಆರ್ಸಿಬಿ ನಾಯಕ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ
ಕೀರನ್ ಪೊಲಾರ್ಡ್ ಬರ್ತ್ ಡೇ ಸೆಲೆಬ್ರೇಷನ್ನಲ್ಲಿ ಹಾರ್ದಿಕ್ ಪಾಂಡ್ಯ:
Big man 🤝 Big celebration 🥳 #MumbaiMeriJaan #MumbaiIndians | @KieronPollard55 pic.twitter.com/b4RGvB3Zvb
— Mumbai Indians (@mipaltan) May 12, 2024
🎂 Here’s to another year of greatness & swagger, Polly! 💙#MumbaiMeriJaan #MumbaiIndians | @KieronPollard55 pic.twitter.com/CsV77LpQb7
— Mumbai Indians (@mipaltan) May 12, 2024
ಪೊಲಾರ್ಡ್ ಹುಟ್ಟುಹಬ್ಬದಂದು ಮುಂಬೈ ಇಂಡಿಯನ್ಸ್ ಹಂಚಿಕೊಂಡ ವೀಡಿಯೊದಲ್ಲಿ, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಹಿರಿಯ ಆಟಗಾರರು ಕಾಣಿಸಿಕೊಂಡಿಲ್ಲ. ಪೊಲಾರ್ಡ್ ಸ್ವತಃ ಆಟಗಾರನಾಗಿ ಮುಂಬೈ ಇಂಡಿಯನ್ಸ್‌ಗಾಗಿ ದೀರ್ಘಕಾಲ ಆಡಿದ್ದಾರೆ. ಅನೇಕ ಸಂದರ್ಭಗಳಲ್ಲಿ, ಅವರು ಮುಂಬೈ ಸೋಲುವ ಪಂದ್ಯವನ್ನು ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಗೆಲ್ಲಿಸಿ ಕೊಟ್ಟಿದ್ದಾರೆ. ಅವರು ತಂಡದ ಬಹುತೇಕ ಎಲ್ಲ ಆಟಗಾರರ ಜೊತೆ ಸಲುಗೆಯಲ್ಲಿದ್ದಾರೆ. ಆದರೆ, ಪ್ರಸಕ್ತ ಋತುವಿನಲ್ಲಿ ತಂಡ ತೋರಿದ ಪ್ರದರ್ಶನದಿಂದ ಡ್ರೆಸ್ಸಿಂಗ್ ರೂಂನಲ್ಲಿ ವಾತಾವರಣ ಕೊಂಚ ಗಂಭೀರವಾಗಿದೆ ಎಂಬುದು ಸ್ಪಷ್ಟವಾಗಿದೆ.
ಹಾರ್ದಿಕ್ ಗುಜರಾತ್ ಟೈಟಾನ್ಸ್‌ನಿಂದ ಐಪಿಎಲ್ 2024ಕ್ಕೆ ಮುಂಬೈ ಸೇರಿಕೊಂಡಿದ್ದರು, ಇವರು ತಮ್ಮ ಐಪಿಎಲ್ ವೃತ್ತಿಜೀವನವನ್ನು ಮುಂಬೈ ಇಂಡಿಯನ್ಸ್‌ನೊಂದಿಗೆ ಪ್ರಾರಂಭಿಸಿದರು. ಆದರೆ 2022 ರಲ್ಲಿ ಪಾಂಡ್ಯ ಈ ಫ್ರಾಂಚೈಸಿಯನ್ನು ತೊರೆದು ಗುಜರಾತ್ ಟೈಟಾನ್ಸ್‌ಗೆ ಹೋದರು. ಅವರು ಈ ತಂಡದೊಂದಿಗೆ ಎರಡು ವರ್ಷಗಳ ಕಾಲ ಇದ್ದರು, ಇದರಲ್ಲಿ ಫ್ರಾಂಚೈಸ್ ಒಮ್ಮೆ ಚಾಂಪಿಯನ್ ಕೂಡ ಆಯಿತು ಮತ್ತು ಎರಡನೇ ಬಾರಿಗೆ ಫೈನಲ್ ತಲುಪಿತು. ಆದಾಗ್ಯೂ, ಎರಡು ಯಶಸ್ವಿ ಋತುಗಳ ಹೊರತಾಗಿಯೂ, ಹಾರ್ದಿಕ್ ಇದ್ದಕ್ಕಿದ್ದಂತೆ ಮುಂಬೈ ಇಂಡಿಯನ್ಸ್‌ಗೆ ಮರಳಲು ನಿರ್ಧರಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
