RCB vs DC: ಸತತ 5ನೇ ಜಯ: ಪೋಸ್ಟ್ ಮ್ಯಾಚ್ ವೇಳೆ ಖುಷಿಯಲ್ಲಿ ಆರ್ಸಿಬಿ ನಾಯಕ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ
Faf Du Plessis Post Match Presentation, RCB vs DC: ರಾಯಲ್ ಚಾಲೆಂಜರ್ಸ್ ಬೆಂಗಳೂರು, ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದ್ದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಖುಷಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs DC) 47 ರನ್ಗಳ ಅಮೋಘ ಜಯ ಸಾಧಿಸುವ ಮೂಲಕ ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಂಡಿದೆ. ರಜತ್ ಪಾಟಿದಾರ್, ವಿಲ್ ಜ್ಯಾಕ್ಸ್ ಹಾಗೂ ಕ್ಯಾಮ್ರೊನ್ ಗ್ರೀನ್ ಅವರ ಅದ್ಭುತ ಬ್ಯಾಟಿಂಗ್ ಮತ್ತು ಸಂಘಟಿತ ಬೌಲಿಂಗ್ ನೆರವಿನಿಂದ ಆರ್ಸಿಬಿ 47 ರನ್ಗಳ ಜಯ ಕಂಡಿತು. ಈ ಗೆಲುವಿನೊಂದಿಗೆ ಫಾಫ್ ಪಡೆ ಟೂರ್ನಿಯಲ್ಲಿ ಸತತ 5ನೇ ಪಂದ್ಯ ಗೆದ್ದ ಸಾಧನೆ ಮಾಡಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಖುಷಿ ಹಂಚಿಕೊಂಡಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಫಾಫ್ ಡುಪ್ಲೆಸಿಸ್, ”ಅದ್ಭುತ, ನಾವು ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದೇವೆ, ನಿಜವಾಗಿಯೂ ಸಂತೋಷವಾಗುತ್ತಿದೆ. ಈ ಋತುವಿನ ಮೊದಲಾರ್ಧದಲ್ಲಿ ನಾವು ಬ್ಯಾಟಿಂಗ್ ದೃಷ್ಟಿಕೋನದಿಂದ ಮತ್ತು ಬೌಲಿಂಗ್‌ನಲ್ಲಿ ಅಂದುಕೊಂಡಂತೆ ಸಾಗಲಿಲ್ಲ. ಆದರೀಗ ನಾವು ಎರಡೂ ವಿಭಾಗಗಳಲ್ಲಿ ಫಾರ್ಮ್ ಕಂಡುಕೊಂಡು ಉತ್ತಮ ಆಟವಾಡುತ್ತಿದ್ದೇವೆ. ಬಹಳಷ್ಟು ಕೆಲಸಗಳು ತೆರೆಮರೆಯಲ್ಲಿ ಸಾಗಿವೆ. ನಾವು ಅದನ್ನು ಸರಿಯಾಗಿ ಸದುಪಯೋಗ ಪಡೆದುಕೊಳ್ಳುತ್ತಿದ್ದೇವೆ,” ಎಂದು ಡುಪ್ಲೆಸಿಸ್ ಹೇಳಿದ್ದಾರೆ.
ಆರ್ಸಿಬಿ ಸಾಂಘಿಕ ದಾಳಿಗೆ ತಲೆಬಾಗಿದ ಡೆಲ್ಲಿ
”ಕೆಲವೊಮ್ಮೆ ಜನರು ಮ್ಯಾಚ್-ಅಪ್‌ಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಎಡಗೈ ಆಟಗಾರನಾಗಿ ಚೆಂಡನ್ನು ತಿರುಗಿಸುವ ಕೆಲಸ ಸ್ವಪ್ನಿಲ್ ಸಿಂಗ್ ಮಾಡುತ್ತಿದ್ದಾರೆ. ಅವರು ನಮಗಾಗಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಈಗ ನಮ್ಮ ಬೌಲಿಂಗ್‌ನಲ್ಲಿ ಹೆಚ್ಚಿನ ವೈವಿಧ್ಯತೆ ಇದೆ ಎಂದು ನಾನು ಭಾವಿಸುತ್ತೇನೆ. ಕಳೆದ ಕೆಲವು ಪಂದ್ಯಗಳಿಂದ ಯಶ್ ದಯಾಳ್ ಮತ್ತು ಲಾಕಿ ಫರ್ಗುಸನ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ,” ಎಂಬುದು ಫಾಫ್ ಡುಪ್ಲೆಸಿಸ್ ಮಾತು.
ಸೋತ ತಂಡದ ನಾಯಕ ಅಕ್ಷರ್ ಪಟೇಲ್ ಮಾತನಾಡಿ, ”ಪಂದ್ಯದ ನಡುವೆ ಕೈಬಿಟ್ಟ ಕ್ಯಾಚ್‌ಗಳು ನಮಗೆ ನೋವುಂಟು ಮಾಡುತ್ತಿವೆ. ಅವರನ್ನು 150ಕ್ಕೆ ನಿರ್ಬಂಧಿಸಬಹುದಿತ್ತು. ನೀವು ಯಾವಾಗಲೂ ಗುರಿ ಬೆನ್ನಟ್ಟುತ್ತಿರುತ್ತಿರುವಾಗ ಪವರ್‌ಪ್ಲೇಯಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡರೆ ಕಷ್ಟವಾಗುತ್ತದೆ. 160-170 ಉತ್ತಮ ಸ್ಕೋರ್ ಆಗಿರುತ್ತದೆ. ನಿಮ್ಮ ಪ್ರಮುಖ ಆಟಗಾರರು ರನ್ ಔಟ್ ಆದಾಗ ಮತ್ತು ನೀವು ಪವರ್‌ಪ್ಲೇನಲ್ಲಿ ನಾಲ್ವರನ್ನು ಕಳೆದುಕೊಂಡಾಗ ಪಂದ್ಯ ಏನು ಬೇಕಾದರೂ ಆಗಬಹುದು. ಆದರೆ, ನಾವು ಗುರಿ ಮುಟ್ಟಲು ಸಾಧ್ಯವಾಗಲಿಲ್ಲ,” ಎಂದು ಹೇಳಿದ್ದಾರೆ.
ಚೆನ್ನೈ ವಿರುದ್ಧ ರಾಜಸ್ಥಾನ್ ಕಳಪೆ ಬ್ಯಾಟಿಂಗ್; ಎಕ್ಸ್ನಲ್ಲಿ ಟ್ರೆಂಡ್ ಆಯ್ತ ‘ಫಿಕ್ಸಿಂಗ್’ ಹ್ಯಾಷ್ಟ್ಯಾಗ್..!
ರಾಯಲ್ ಚಾಲೆಂಜರ್ಸ್ ಬೆಂಗಳೂರು, ತಮ್ಮ ಪ್ರಚಂಡ ಪುನರಾಗಮನದ ಮೂಲಕ ಐಪಿಎಲ್ 2024 ರಲ್ಲಿ ಸತತ ಐದನೇ ಗೆಲುವನ್ನು ದಾಖಲಿಸಿತು. ಇದರೊಂದಿಗೆ ಬೆಂಗಳೂರು ತನ್ನ ಕೊನೆಯ ಲೀಗ್ ಪಂದ್ಯಕ್ಕೆ ಪ್ಲೇಆಫ್ ಕದನವನ್ನು ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಮೇ 18 ರಂದು ಆರ್ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ಪ್ಲೇ ಆಫ್ಗೇರಲು ಇಲ್ಲಿ ಎರಡೂ ತಂಡಗಳು ಸೆಣೆಸಾಟ ನಡೆಸಲಿದೆ. ಆರ್ಸಿಬಿ ವಿರುದ್ಧದ ಸೋಲಿನ ಮೂಲಕ ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಹುತೇಕ ಟೂರ್ನಿಯಿಂದ ಔಟ್ ಆಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
