AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಇಶಾಂತ್ ಶರ್ಮಾಗೆ ಕೊನೆಯ ಅವಕಾಶ; ದ. ಆಫ್ರಿಕಾದಲ್ಲಿ ವಿಕೆಟ್ ಬೀಳದಿದ್ದರೆ ಮತ್ತೊಂದು ಚಾನ್ಸ್ ಅನುಮಾನ!

IND vs SA: ಮೊದಲ ಟೆಸ್ಟ್‌ನಲ್ಲಿ ಇಶಾಂತ್ ಆಡುವ XI ನಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬುದು ಖಚಿತವಾಗಿಲ್ಲ. ಅದೇನೇ ಇರಲಿ, ವೇಗದ ಬೌಲಿಂಗ್‌ನಲ್ಲಿ ಭಾರತಕ್ಕೆ ಸಾಕಷ್ಟು ಆಯ್ಕೆಗಳಿವೆ.

IND vs SA: ಇಶಾಂತ್ ಶರ್ಮಾಗೆ ಕೊನೆಯ ಅವಕಾಶ; ದ. ಆಫ್ರಿಕಾದಲ್ಲಿ ವಿಕೆಟ್ ಬೀಳದಿದ್ದರೆ ಮತ್ತೊಂದು ಚಾನ್ಸ್ ಅನುಮಾನ!
ಇಶಾಂತ್ ಶರ್ಮಾ
TV9 Web
| Edited By: |

Updated on: Dec 10, 2021 | 6:45 AM

Share

ವೇಗದ ಬೌಲರ್ ಇಶಾಂತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಅವರು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅವರೊಂದಿಗೆ ಟೀಮ್ ಇಂಡಿಯಾದ ಬೌಲಿಂಗ್ ಕೋಟಾದಲ್ಲಿ ಸ್ಪರ್ಧೆ ನಡೆಸಬೇಕಿದೆ. ಆದರೆ ಇಶಾಂತ್ ಶರ್ಮಾ ತಂಡದಲ್ಲಿ ಉಳಿದಿರುವುದು ಕೂಡ ಕೊಂಚ ಆಘಾತಕಾರಿ ನಿರ್ಧಾರ. ಇಶಾಂತ್ ಇತ್ತೀಚಿನ ದಿನಗಳಲ್ಲಿ ಫಾರ್ಮ್​ನಲ್ಲಿಲ್ಲ. ಜೊತೆಗೆ ಅವರು ಫಿಟ್ನೆಸ್ ಇಲ್ಲದೆ ಹೋರಾಡುತ್ತಿದ್ದಾರೆ. ಅವರಿಗೆ ದಕ್ಷಿಣ ಆಫ್ರಿಕಾ ಪ್ರವಾಸವು ಟೀಮ್ ಇಂಡಿಯಾದಲ್ಲಿ ಕೊನೆಯ ಅವಕಾಶ ಎಂದು ಸಾಬೀತುಪಡಿಸಬಹುದು ಎಂದು ನಂಬಲಾಗಿದೆ. ಈ ಪ್ರವಾಸದಲ್ಲಿ ಅವರ ಅನುಭವಕ್ಕೆ ಆದ್ಯತೆ ಸಿಕ್ಕಿದೆ.

ಮೊದಲ ಟೆಸ್ಟ್‌ನಲ್ಲಿ ಇಶಾಂತ್ ಆಡುವ XI ನಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬುದು ಖಚಿತವಾಗಿಲ್ಲ. ಅದೇನೇ ಇರಲಿ, ವೇಗದ ಬೌಲಿಂಗ್‌ನಲ್ಲಿ ಭಾರತಕ್ಕೆ ಸಾಕಷ್ಟು ಆಯ್ಕೆಗಳಿವೆ. ಬುಮ್ರಾ, ಶಮಿ, ಸಿರಾಜ್ ಮತ್ತು ಉಮೇಶ್ ಕೂಡ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಇಶಾಂತ್ ಶರ್ಮಾಗೆ ದಕ್ಷಿಣ ಆಫ್ರಿಕಾದಲ್ಲಿ ಆಡುವ ಅವಕಾಶ ಸಿಗದಿದ್ದರೆ ಅಥವಾ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ, ಅವರ ಪ್ರಯಾಣವು ಟೀಮ್ ಇಂಡಿಯಾದಲ್ಲಿ ಕೊನೆಗೊಳ್ಳಬಹುದು. ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಭಾರತ ಶ್ರೀಲಂಕಾದಿಂದ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ ಮತ್ತು ಅದು ಭಾರತದಲ್ಲಿಯೇ ಇರುತ್ತದೆ. ಭಾರತದ ಪಿಚ್‌ಗಳನ್ನು ನೋಡಿದರೆ ಇಶಾಂತ್‌ಗೆ ಅವಕಾಶ ಸಿಗುವಂತೆ ಕಾಣುತ್ತಿಲ್ಲ.

ದೆಹಲಿಯ ಈ ವೇಗದ ಬೌಲರ್​ಗೆ 33 ವರ್ಷ ತುಂಬಿದೆ. ಅಂತಹ ಪರಿಸ್ಥಿತಿಯಲ್ಲಿ, ತಂಡದ ನಿರ್ವಹಣೆ ಮತ್ತು ಆಯ್ಕೆದಾರರು ಸಹ ಹೊಸ ಮುಖಗಳನ್ನು ಪ್ರಯತ್ನಿಸಲು ಬಯಸುತ್ತಾರೆ. ಭಾರತ ಬೆಂಚ್‌ನಲ್ಲಿ ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ನವದೀಪ್ ಸೈನಿ ಅವರಂತಹ ವೇಗದ ಬೌಲರ್‌ಗಳನ್ನು ಹೊಂದಿದೆ. ವೇಗದ ಜೊತೆಗೆ ಅವರ ಪ್ರದರ್ಶನವೂ ಉತ್ತಮವಾಗಿದೆ.

ಇಶಾಂತ್ 2021 ರಲ್ಲಿ ಮಿಂಚಲಿಲ್ಲ 2021ರ ಟೆಸ್ಟ್‌ನಲ್ಲಿ ಇಶಾಂತ್‌ರ ಪ್ರದರ್ಶನ ಆತಂಕಕಾರಿಯಾಗಿದೆ. ಈ ವರ್ಷ ಅವರ ಬೌಲಿಂಗ್ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಎರಡೂ 2017 ರಿಂದ ಕೆಟ್ಟದಾಗಿದೆ. 2021 ರಲ್ಲಿ, ಇಶಾಂತ್ ಎಂಟು ಟೆಸ್ಟ್ ಪಂದ್ಯಗಳನ್ನು ಆಡಿದರು ಮತ್ತು 32.71 ರ ಸರಾಸರಿಯಲ್ಲಿ ಮತ್ತು 72.1 ರ ಸ್ಟ್ರೈಕ್ ರೇಟ್‌ನಲ್ಲಿ 14 ವಿಕೆಟ್‌ಗಳನ್ನು ಪಡೆದರು. 48 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಅವಧಿಯಲ್ಲಿ ಇಶಾಂತ್ ಇಂಗ್ಲೆಂಡ್ ಮತ್ತು ಭಾರತದಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ ನಿರಂತರವಾಗಿ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ಇಶಾಂತ್ ವೃತ್ತಿಜೀವನವೂ ಹೀಗಿದೆ ಇಶಾಂತ್ ಇದುವರೆಗೆ 105 ಟೆಸ್ಟ್ ಪಂದ್ಯಗಳನ್ನಾಡಿದ್ದು, 311 ವಿಕೆಟ್ ಪಡೆದಿದ್ದಾರೆ. 74 ರನ್‌ಗಳಿಗೆ ಏಳು ವಿಕೆಟ್‌ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಅವರು 2007 ರಲ್ಲಿ ಬಾಂಗ್ಲಾದೇಶ ಪ್ರವಾಸದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು. ಆದರೆ 2007-08 ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಅವರ ಬೌಲಿಂಗ್ ಮುನ್ನೆಲೆಗೆ ಬಂದಿತು. ಅಂದಿನಿಂದ, ಅವರು ನಿರಂತರವಾಗಿ ಭಾರತೀಯ ಟೆಸ್ಟ್ ತಂಡದ ಭಾಗವಾಗಿದ್ದಾರೆ. ಅವರ ವಿಕೆಟ್-ಟೇಕಿಂಗ್ ಸ್ಟ್ರೈಕ್ ರೇಟ್ 61.6 ಆಗಿದೆ, ಅಂದರೆ ಸುಮಾರು 10 ಓವರ್‌ಗಳ ನಂತರ ಅವರು ವಿಕೆಟ್ ಪಡೆಯುತ್ತಾರೆ. ಅಲ್ಲದೆ, ಸುಮಾರು 33 ರನ್ ವ್ಯಯಿಸಿದ ನಂತರ ಅವರು ವಿಕೆಟ್ ಪಡೆಯುತ್ತಾರೆ.

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ