IPL 2022: CSK ಗೆ ನಡುಕ ಹುಟ್ಟಿಸಿದ್ದ DK

IPL 2022 RCB vs CSK: 217 ರನ್​ಗಳ ಟಾರ್ಗೆಟ್ ನೀಡಿದ ಸಿಎಸ್​ಕೆ ಗೆಲುವಿನ ವಿಶ್ವಾಸದಲ್ಲೇ ಮೈದಾನಕ್ಕಿಳಿಯಿತು. ಮೂರನೇ ಓವರ್​ನಲ್ಲಿ ಫಾಫ್ ಡುಪ್ಲೆಸಿಸ್, 5ನೇ ಓವರ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ 6ನೇ ಓವರ್​ನಲ್ಲಿ ಅನೂಜ್ ರಾವತ್ ವಿಕೆಟ್ ಪಡೆಯುವ ಮೂಲಕ ಸಿಎಸ್​ಕೆ ಪವರ್​ಪ್ಲೇನಲ್ಲೇ ಆರ್​ಸಿಬಿಗೆ ಆಘಾತ ನೀಡಿದರು.

IPL 2022: CSK ಗೆ ನಡುಕ ಹುಟ್ಟಿಸಿದ್ದ DK
DK-Jadeja
Follow us
TV9 Web
| Updated By: ಝಾಹಿರ್ ಯೂಸುಫ್

Updated on:Apr 13, 2022 | 6:25 PM

ಕ್ರಿಕೆಟ್​ನಲ್ಲಿ ಒಂದು ಮಾತಿದೆ…ಒಬ್ಬ ಆಟಗಾರನ ವಿಕೆಟ್ ಎಷ್ಟು ಮುಖ್ಯ ಎಂಬುದು ಎದುರಾಳಿ ತಂಡದ ಸಂಭ್ರಮ ನೋಡಿ ತಿಳಿಯಬಹುದು ಎಂದು…ಅಂತಹದೊಂದು ಸಂಭ್ರಮಕ್ಕೆ ಐಪಿಎಲ್​ನ 22ನೇ ಪಂದ್ಯ ಸಾಕ್ಷಿಯಾಗಿತ್ತು. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್​ ಬೌಲಿಂಗ್ ಆಯ್ದುಕೊಂಡರು. ಆರಂಭದಲ್ಲಿ ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲರ್​ಗಳು ಬೌಲಿಂಗ್ ಮಾಡಿದ್ದರು. ಆದರೆ 10 ಓವರ್​ಗಳ ಬಳಿಕ ಎಲ್ಲವೂ ಬದಲಾಯಿತು. ಸಿಎಸ್​ಕೆ ತಂಡದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಹಾಗೂ ಆಲ್​ರೌಂಡರ್ ಶಿವಂ ದುಬೆ ಅಬ್ಬರಿಸಲಾರಂಭಿಸಿದರು. ಅದು ಅಂತಿಂಥ ಅಬ್ಬರವಲ್ಲ. ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಇತ್ತ ನಾಯಕ ಫಾಫ್ ಡುಪ್ಲೆಸಿಸ್ ಬೌಲರ್​ಗಳನ್ನು ಬದಲಿಸಿದರೂ ಫಲಿತಾಂಶ ಮಾತ್ರ ಒಂದೇ ಆಗಿತ್ತು. ಸಿಕ್ಸ್ ಇಲ್ಲಾ ಫೋರ್.

ಪರಿಣಾಮ ಮೂರನೇ ವಿಕೆಟ್​ಗೆ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಜೋಡಿ 165 ರನ್​ಗಳ ಜೊತೆಯಾಟವಾಡಿದರು. ಈ ವೇಳೆ 50 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 88 ರನ್​ ಬಾರಿಸಿದ್ದ ರಾಬಿನ್ ಉತ್ತಪ್ಪ ಔಟಾದರು. ಆದರೆ ದುಬೆಯ ಆರ್ಭಟ ಮಾತ್ರ ಮುಂದುವರೆದಿತ್ತು. ಕೊನೆಯ ಓವರ್​ವರೆಗೂ ಬ್ಯಾಟ್ ಬೀಸಿದ ದುಬೆ 8 ಸಿಕ್ಸ್​ ಹಾಗೂ 5 ಬೌಂಡರಿಯೊಂದಿಗೆ ಕೇವಲ 45 ಎಸೆತಗಳಲ್ಲಿ ಅಜೇಯ 95 ರನ್​ಗಳಿಸಿತ್ತು. ಅಲ್ಲಿಗೆ ಸಿಎಸ್​ಕೆ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 216 ಕ್ಕೆ ಬಂದು ನಿಂತಿತು.

217 ರನ್​ಗಳ ಟಾರ್ಗೆಟ್ ನೀಡಿದ ಸಿಎಸ್​ಕೆ ಗೆಲುವಿನ ವಿಶ್ವಾಸದಲ್ಲೇ ಮೈದಾನಕ್ಕಿಳಿಯಿತು. ಮೂರನೇ ಓವರ್​ನಲ್ಲಿ ಫಾಫ್ ಡುಪ್ಲೆಸಿಸ್, 5ನೇ ಓವರ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ 6ನೇ ಓವರ್​ನಲ್ಲಿ ಅನೂಜ್ ರಾವತ್ ವಿಕೆಟ್ ಪಡೆಯುವ ಮೂಲಕ ಸಿಎಸ್​ಕೆ ಪವರ್​ಪ್ಲೇನಲ್ಲೇ ಆರ್​ಸಿಬಿಗೆ ಆಘಾತ ನೀಡಿದರು. ಅಷ್ಟೇ ಅಲ್ಲದೆ ಪವರ್​ಪ್ಲೇನಲ್ಲಿ ನೀಡಿದ್ದು ಕೇವಲ 42 ರನ್​ ಮಾತ್ರ. ಇನ್ನು 11 ಎಸೆತಗಳಲ್ಲಿ 26 ರನ್ ಬಾರಿಸಿ ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ಔಟಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ಶಹಬಾಜ್ ಅಹ್ಮದ್ ಹಾಗೂ ಸುಯಶ್ ಪ್ರಭುದೇಸಾಯಿ ಅರ್ಧಶತಕದ ಜೊತೆಯಾಟವಾಡಿದರು. ಅದರಲ್ಲೂ ಚೊಚ್ಚಲ ಪಂದ್ಯವಾಡಿದ ಸುಯಶ್ 18 ಎಸೆತಗಳಲ್ಲಿ 34 ರನ್ ಬಾರಿಸುವ ಮೂಲಕ ತಮ್ಮ ಪಾತ್ರ ನಿರ್ವಹಿಸಿದ್ದರು. ಮತ್ತೊಂದೆಡೆ 27 ಎಸೆತಗಳಲ್ಲಿ 41 ರನ್ ಬಾರಿಸಿ ಶಹಬಾಜ್ ಕೂಡ ಅಬ್ಬರಿಸಿದರು.

ಈ ಇಬ್ಬರ ವಿಕೆಟ್ ಬೀಳುತ್ತಿದ್ದಂತೆ ಸಿಎಸ್​ಕೆ ತಂಡವು ಮೇಲುಗೈ ಸಾಧಿಸಿತು. ಇದರ ಬೆನ್ನಲ್ಲೇ ವನಿಂದು ಹಸರಂಗ ಹಾಗೂ ಆಕಾಶ್ ದೀಪ್ ಬಂದ ವೇಗದಲ್ಲೇ ವಿಕೆಟ್ ಕೈಚೆಲ್ಲಿ ಹಿಂತಿರುಗಿದರು. ಈ ವೇಳೆ ಆರ್​ಸಿಬಿ ತಂಡದ ಸ್ಕೋರ್ 8 ವಿಕೆಟ್​ ನಷ್ಟಕ್ಕೆ 146 ರನ್​. ಎಂಟು ವಿಕೆಟ್ ಉರುಳಿಸಿದರೂ ಸಿಎಸ್​ಕೆ ತಂಡ ಗೆಲುವನ್ನು ಖಚಿತಪಡಿಸಿರಲಿಲ್ಲ. ಏಕೆಂದರೆ ಒಂದೆಡೆ ಕ್ರೀಸ್​ನಲ್ಲಿದಿದ್ದು ದಿನೇಶ್ ಕಾರ್ತಿಕ್ ಎಂಬ ಸ್ಪೋಟಕ ದಾಂಡಿಗ. ಯಾವುದೇ ಕ್ಷಣದಲ್ಲೂ ಸಿಡಿಯಬಲ್ಲ ಡಿಕೆ ಬಗ್ಗೆ ಸಿಎಸ್​ಕೆ ಅರಿವಿತ್ತು. ಹೀಗಾಗಿ 8 ವಿಕೆಟ್ ಪಡೆದರೂ ಚೆನ್ನೈ ತಂಡವು ಗೆಲುವನ್ನು ಖಚಿತಪಡಿಸಿಕೊಳ್ಳಲು ಸಿದ್ದರಿರಲಿಲ್ಲ.

ಅತ್ತ ಬೌಲರ್​ಗಳಿಗೂ ಭಯ, ನಿರೀಕ್ಷೆ ನಿಜವಾಯ್ತು. ದಿನೇಶ್ ಕಾರ್ತಿಕ್ ಅಬ್ಬರಿಸಿದರು. ಕೇವಲ 13 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್​ನೊಂದಿಗೆ 34 ರನ್ ಬಾರಿಸಿದರು. ಡಿಕೆ ಅಬ್ಬರ ಶುರುವಾಗುತ್ತಿದ್ದಂತೆ ಇತ್ತ ಆರ್​ಸಿಬಿ ಅಭಿಮಾನಿಗಳಿಗೆ ಗೆಲುವಿನ ನಿರೀಕ್ಷೆ ಹೆಚ್ಚಾಯ್ತು. ಅತ್ತ ಸಿಎಸ್​ಕೆ ತಂಡವು ಸೋಲಿನ ಭೀತಿಯನ್ನು ಎದುರಿಸಿತ್ತು. ಆದರೆ ದುರಾದೃಷ್ಟವಶಾತ್ ಬ್ರಾವೊ ಅವರ ಮ್ಯಾಜಿಕ್ ಬಾಲ್​ಗೆ ಭರ್ಜರಿ ಉತ್ತರ ನೀಡಲು ಹೋದ ಡಿಕೆಗೆ ಬೌಂಡರಿ ಲೈನ್​ನಲ್ಲಿ ಕ್ಯಾಚ್ ಆದರು. ಬೌಂಡಿಯಲ್ಲಿ ಫೀಲ್ಡಿಂಗ್​ನಲ್ಲಿದ್ದ ಸಿಎಸ್​ಕೆ ನಾಯಕ ರವೀಂದ್ರ ಜಡೇಜಾ ಅತ್ಯುತ್ತಮ ನಿಯಂತ್ರಣ ಸಾಧಿಸುವ ಮೂಲಕ ಕ್ಯಾಚ್ ಹಿಡಿದರು. ಅಷ್ಟೇ ಯಾಕೆ ಈ ಕ್ಯಾಚ್​ನೊಂದಿಗೆ ಜಡೇಜಾ ಗೆಲುವನ್ನು ಖಚಿತಪಡಿಸಿದರು. ಅಲ್ಲದೆ ಕ್ಯಾಚ್ ಹಿಡಿದ ಬೆನ್ನಲ್ಲೇ ಕೊನೆಗೂ ಗೆದ್ವಿ ಎಂಬಾರ್ಥದಲ್ಲಿ ಬೌಂಡರಿ ಲೈನ್​ನಲ್ಲೇ ಮಕಾಡೆ ಮಲಗಿ ಸಂಭ್ರಮಿಸಿದರು. ಒಬ್ಬ ಬ್ಯಾಟ್ಸ್​​ಮನ್​ ಎದುರಾಳಿಗಳಿಗೆ ಎಷ್ಟು ಭೀತಿ ಹುಟ್ಟಿಸಿದ್ದ ಎಂಬುದು ಆತನ ವಿಕೆಟ್ ಸಿಕ್ಕಾಗ ತಂಡದ ಸಂಭ್ರಮ ನೋಡಿ ತಿಳಿಯಬಹುದು ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ.

ಒಟ್ಟಿನಲ್ಲಿ ಆರ್​ಸಿಬಿ 23 ರನ್​ಗಳಿಂದ ಸೋತಿದೆ. ಅಲ್ಲ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ. ಏಕೆಂದರೆ ಸಿಎಸ್​ಕೆ ವಿರುದ್ದ ಆರ್​ಸಿಬಿ ಇಷ್ಟೊಂದು ಮೊತ್ತವನ್ನು ಭರ್ಜರಿಯಾಗಿ ಚೇಸ್ ಮಾಡಿರುವುದು ಐಪಿಎಲ್​ ಇತಿಹಾಸದಲ್ಲೇ ಇದೇ ಮೊದಲು. ಹೀಗಾಗಿ ಮೇ 4 ರಂದು ನಡೆಯುವ ಆರ್​ಸಿಬಿ-ಸಿಎಸ್​ಕೆ ನಡುವಣ 2ನೇ ಮುಖಾಮುಖಿಯಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

Published On - 2:45 pm, Wed, 13 April 22

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ