AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಖಿಬ್ ನಬಿ ಮಾರಕ ಬೌಲಿಂಗ್: ಹೊಸ ಇತಿಹಾಸ ನಿರ್ಮಿಸಿದ ಜಮ್ಮು-ಕಾಶ್ಮೀರ

Ranji Trophy Elite 2025-26: ಜಮ್ಮು-ಕಾಶ್ಮೀರ ತಂಡವು ರಣಜಿ ಟೂರ್ನಿ ಆಡಲು ಶುರುವಾಗಿ 55 ವರ್ಷಗಳಾಗಿವೆ. ಈ ಐವತ್ತೈದು ವರ್ಷಗಳಲ್ಲಿ ಒಮ್ಮೆಯೂ ಸೆಮಿಫೈನಲ್​ಗೆ ಪ್ರವೇಶಿಸಿರಲಿಲ್ಲ. ಆದರೆ ಈ ಬಾರಿ ಕಾಶ್ಮೀರಿ ಪಡೆ ಹೊಸ ಇತಿಹಾಸ ರಚಿಸಿದ್ದಾರೆ. ಅದು ಸಹ ಬಲಿಷ್ಠ ಮಧ್ಯ ಪ್ರದೇಶ್ ತಂಡಕ್ಕೆ ಸೋಲುಣಿಸುವ ಮೂಲಕ ಎಂಬುದು ವಿಶೇಷ.

ಆಖಿಬ್ ನಬಿ ಮಾರಕ ಬೌಲಿಂಗ್: ಹೊಸ ಇತಿಹಾಸ ನಿರ್ಮಿಸಿದ ಜಮ್ಮು-ಕಾಶ್ಮೀರ
Auqib Nabi
ಝಾಹಿರ್ ಯೂಸುಫ್
|

Updated on:Feb 09, 2026 | 1:40 PM

Share

ರಣಜಿ ಟೂರ್ನಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರ ತಂಡ ಸೆಮಿಫೈನಲ್​ಗೆ ಪ್ರವೇಶಿಸಿದೆ. ಕಳೆದ 55 ವರ್ಷಗಳಿಂದ ರಣಜಿ ಪಂದ್ಯವಾಡುತ್ತಿರುವ ಜಮ್ಮು-ಕಾಶ್ಮೀರ ತಂಡವು ಈ ಹಿಂದೆ ಹಲವು ಬಾರಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದ್ದರೂ ಸೆಮಿಫೈನಲ್ ಎಂಬುದು ಮರೀಚಿಕೆಯಾಗಿತ್ತು. ಆದರೆ ಈ ಬಾರಿ ಆಖಿಬ್ ನಬಿಯ ಮಾರಕ ದಾಳಿ ನೆರವಿನೊಂದಿಗೆ ಕಾಶ್ಮೀರಿ ಪಡೆ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ.

ಇಂದೋರ್​ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ 2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಮತ್ತು ಮಧ್ಯ ಪ್ರದೇಶ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಮ್ಮು-ಕಾಶ್ಮೀರ ಕೇವಲ 194 ರನ್​ಗಳಿಸಿ ಆಲೌಟ್ ಆಗಿದ್ದರು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಮಧ್ಯ ಪ್ರದೇಶ್ ತಂಡವು ಆಕಿಬ್ ನಬಿಯ ಕರಾರುವಕ್ಕಾದ ದಾಳಿಗೆ ತತ್ತರಿಸಿತು. ಪರಿಣಾಮ ಮೊದಲ ಇನಿಂಗ್ಸ್​ನಲ್ಲಿ ಕಲೆಹಾಕಿದ್ದು ಕೇವಲ 152 ರನ್​ಗಳು ಮಾತ್ರ. ಜಮ್ಮು-ಕಾಶ್ಮೀರ ಪರ 18.4 ಓವರ್​ಗಳನ್ನು ಎಸೆದ ಆಖಿಬ್ ನಬಿ ಕೇವಲ 40 ರನ್ ನೀಡಿ 7 ವಿಕೆಟ್ ಉರುಳಿಸಿ ಮಿಂಚಿದರು.

ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಜಮ್ಮು-ಕಾಶ್ಮೀರ ತಂಡವು 248 ರನ್​ಗಳಿಸಿ ಆಲೌಟ್ ಆದರು. ಈ ಮೂಲಕ ಮಧ್ಯ ಪ್ರದೇಶ್ ತಂಡಕ್ಕೆ ಒಟ್ಟು 290 ರನ್​ಗಳ ಗುರಿ ನೀಡಿದ್ದರು. ಈ ಗುರಿ ಬೆನ್ನತ್ತಿದ ಮಧ್ಯ ಪ್ರದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಮತ್ತೊಮ್ಮೆ ಆಖಿಬ್ ನಬಿ ಯಶಸ್ವಿಯಾದರು.

ಪರಿಣಾಮ ಮೂರನೇ ದಿನದಾಟದ ಅಂತ್ಯದ ವೇಳೆ ಮಧ್ಯ ಪ್ರದೇಶ್ ತಂಡವು 5 ವಿಕೆಟ್ ಕಳೆದುಕೊಂಡು 103 ರನ್ ಕಲೆಹಾಕಿದ್ದರು. ಇನ್ನು ಕೊನೆಯ ದಿನದಾಟದಲ್ಲಿ ಸಂಘಟಿತ ದಾಳಿ ಸಂಘಟಿಸಿದ ಜಮ್ಮು-ಕಾಶ್ಮೀರ ಬೌಲರ್​ಗಳು ಉಳಿದ ಐವರನ್ನು ಔಟ್ ಮಾಡಿ ಮಧ್ಯ ಪ್ರದೇಶ್ ತಂಡವನ್ನು 234 ರನ್​ಗಳಿಗೆ ನಿಯಂತ್ರಿಸಿದರು. ಈ ಮೂಲಕ ಕಾಶ್ಮೀರಿ ಪಡೆ 56 ರನ್​ಗಳ ಜಯದೊಂದಿಗೆ ಇದೇ ಮೊದಲ ಬಾರಿಗೆ ರಣಜಿ ಟೂರ್ನಿಯ ಸೆಮಿಫೈನಲ್​ಗೆ ಪ್ರವೇಶಿಸಿದೆ.

ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 7 ವಿಕೆಟ್ ಕಬಳಿಸಿದ್ದ ಆಖಿಬ್ ನಬಿ ದ್ವಿತೀಯ ಇನಿಂಗ್ಸ್​​ನಲ್ಲಿ 5 ವಿಕೆಟ್ ಉರುಳಿಸಿದರು. ಈ ಮೂಲಕ ಜಮ್ಮು-ಕಾಶ್ಮೀರ ತಂಡವು ಹೊಸ ಇತಿಹಾಸ ಬರೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಮಧ್ಯ ಪ್ರದೇಶ್ ಪ್ಲೇಯಿಂಗ್ 11: ಹರ್ಷ್ ಗವಾಲಿ , ಯಶ್ ದುಬೆ , ಹಿಮಾಂಶು ಮಂತ್ರಿ (ವಿಕೆಟ್ ಕೀಪರ್ ), ಶುಭಂ ಶರ್ಮಾ , ರಜತ್ ಪಾಟಿದಾರ್ (ನಾಯಕ) , ವೆಂಕಟೇಶ್ ಅಯ್ಯರ್ , ರಾಮವೀರ್ ಗುಜ್ಜರ್ , ಸರಾಂಶ್ ಜೈನ್ , ಆರ್ಯನ್ ಪಾಂಡೆ , ಕುಮಾರ್ ಕಾರ್ತಿಕೇಯ , ಕುಲದೀಪ್ ಸೇನ್.

ಇದನ್ನೂ ಓದಿ: ಕೇವಲ 22 ಎಸೆತಗಳಲ್ಲಿ ಕ್ರಿಸ್ ಗೇಲ್ ಭರ್ಜರಿ ದಾಖಲೆ ಮುರಿದ ಹೆಟ್ಮೆಯರ್

ಜಮ್ಮು-ಕಾಶ್ಮೀರ ಪ್ಲೇಯಿಂಗ್ 11: ಶುಭಂ ಖಜುರಿಯಾ , ಯಾವರ್ ಹಸನ್ , ಶುಭಂ ಪುಂಡಿರ್ , ಪರಾಸ್ ಡೋಗ್ರಾ (ನಾಯಕ) , ಅಬ್ದುಲ್ ಸಮದ್ , ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್), ಅಬಿದ್ ಮುಷ್ತಾಕ್ ,ಆಖಿಬ್ ನಬಿ, ಯುಧ್ವೀರ್ ಸಿಂಗ್ ಚರಕ್ , ವಂಶಜ್ ಶರ್ಮಾ , ಸುನಿಲ್ ಕುಮಾರ್.

Published On - 1:39 pm, Mon, 9 February 26

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಕಾಕ್ರೋಚ್‌ ಪಕ್ಷದ ಸಂಸ್ಥಾಪಕ ಯಾರು?ಭಾರತದ ಬಗ್ಗೆ ಧ್ವನಿ ಎತ್ತಿದ್ದೇಕೆ?
ಕಾಕ್ರೋಚ್‌ ಪಕ್ಷದ ಸಂಸ್ಥಾಪಕ ಯಾರು?ಭಾರತದ ಬಗ್ಗೆ ಧ್ವನಿ ಎತ್ತಿದ್ದೇಕೆ?
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?