Joe Root: 1 ವರ್ಷದಲ್ಲಿ 11 ಶತಕ; ಗವಾಸ್ಕರ್- ಪಾಂಟಿಂಗ್ ದಾಖಲೆ ಉಡೀಸ್; ಸಚಿನ್ ರೆಕಾರ್ಡ್​ ಮೇಲೆ ರೂಟ್ ಕಣ್ಣು

Joe Root: ಕಳೆದ ವರ್ಷದಿಂದ ಜೋ ರೂಟ್ 11 ಶತಕಗಳನ್ನು ಸಿಡಿಸಿದ್ದಾರೆ. ಇದರೊಂದಿಗೆ ಜೋ ರೂಟ್ 18 ತಿಂಗಳಲ್ಲಿ ಸ್ಟೀವ್ ಸ್ಮಿತ್ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿಗಳನ್ನು ಮೀರಿಸಿದ್ದಾರೆ.

Joe Root: 1 ವರ್ಷದಲ್ಲಿ 11 ಶತಕ; ಗವಾಸ್ಕರ್- ಪಾಂಟಿಂಗ್ ದಾಖಲೆ ಉಡೀಸ್; ಸಚಿನ್ ರೆಕಾರ್ಡ್​ ಮೇಲೆ ರೂಟ್ ಕಣ್ಣು
Joe Root
Edited By:

Updated on: Jul 06, 2022 | 5:30 PM

ಭಾರತ ವಿರುದ್ಧದ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ 378 ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿದೆ. ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಮಾಜಿ ನಾಯಕ ಜೋ ರೂಟ್ (Joe Root) ಪ್ರಮುಖ ಪಾತ್ರ ವಹಿಸಿದ್ದರು. ಜೋ ರೂಟ್ 142 ರನ್‌ಗಳ ಅಮೋಘ ಇನ್ನಿಂಗ್ಸ್ ಆಡುವ ಮೂಲಕ ಇಬ್ಬರು ಹಿರಿಯ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಮತ್ತು ರಿಕಿ ಪಾಂಟಿಂಗ್ (Sunil Gavaskar and Ricky Ponting) ಅವರ ದೊಡ್ಡ ದಾಖಲೆಗಳನ್ನು ಮುರಿದಿದ್ದಾರೆ. ಇದರೊಂದಿಗೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ದೊಡ್ಡ ದಾಖಲೆಯನ್ನು ಮುರಿಯುವ ಅವಕಾಶ ರೂಟ್‌ಗೆ ಸಿಕ್ಕಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ಅವರನ್ನು ಹಿಂದಿಕ್ಕಿ ಜೋ ರೂಟ್ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ . ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ಭಾರತದ ವಿರುದ್ಧ 25 ಟೆಸ್ಟ್‌ಗಳಲ್ಲಿ 2526 ರನ್ ಗಳಿಸಿದ್ದಾರೆ. ಹಾಗಾಗಿ ಸುನಿಲ್ ಗವಾಸ್ಕರ್ ಇಂಗ್ಲೆಂಡ್ ವಿರುದ್ಧ 38 ಪಂದ್ಯಗಳಲ್ಲಿ 2483 ರನ್ ಗಳಿಸಿದ್ದಾರೆ. ಈಗ ಸಚಿನ್ ತೆಂಡೂಲ್ಕರ್ ಮಾತ್ರ ಜೋ ರೂಟ್‌ಗಿಂತ ಮುಂದಿದ್ದು, ಸಚಿನ್ 2535 ರನ್ ಗಳಿಸಿದ್ದಾರೆ. ರೂಟ್ 9 ರನ್ ಗಳಿಸಿದರೆ, ಅವರು ಈ ವಿಷಯದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಮೀರಿಸಲಿದ್ದಾರೆ.

ಇದನ್ನೂ ಓದಿ: IND vs WI: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ರೋಹಿತ್-ವಿರಾಟ್​ಗೆ ವಿಶ್ರಾಂತಿ, ಧವನ್​ಗೆ ನಾಯಕತ್ವ

ಇದನ್ನೂ ಓದಿ
IND vs ENG, 1st T20, Match Preview: ಟಿ20 ಸರಣಿಯಲ್ಲಿ ಆಂಗ್ಲರನ್ನು ಸೋಲಿಸುವ ಶಕ್ತಿ ಟೀಂ ಇಂಡಿಯಾಕ್ಕಿದೆಯಾ?
MS Dhoni Birthday: ಧೋನಿಯ 41ನೇ ಜನ್ಮದಿನಕ್ಕೆ ಅಭಿಮಾನಿಯಿಂದ ಸಿದ್ದವಾಯ್ತು 41 ಅಡಿಯ ಕಟೌಟ್; ಫೋಟೋ ವೈರಲ್
ICC Test Ranking: 2053 ದಿನಗಳ ನಂತರ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟಾಪ್ 10 ರಿಂದ ಹೊರಬಿದ್ದ ವಿರಾಟ್ ಕೊಹ್ಲಿ..!

ರೂಟ್ ಅದ್ಭುತ ಫಾರ್ಮ್​

ಭಾರತ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಶತಕ ಸಿಡಿಸುವ ಮೂಲಕ ಜೋ ರೂಟ್ ಮತ್ತೊಂದು ವಿಶೇಷ ಸ್ಥಾನ ಗಳಿಸಿದ್ದಾರೆ. ಇದು ಭಾರತದ ವಿರುದ್ಧ ಜೋ ರೂಟ್ ಅವರ 9ನೇ ಶತಕವಾಗಿತ್ತು. ರೂಟ್ ಹೊರತುಪಡಿಸಿ ಭಾರತದ ವಿರುದ್ಧ ಬೇರೆ ಯಾವುದೇ ಬ್ಯಾಟ್ಸ್‌ಮನ್ ಇಷ್ಟು ಶತಕಗಳನ್ನು ಗಳಿಸಿಲ್ಲ. ಇದಕ್ಕೂ ಮುನ್ನ ಪಾಂಟಿಂಗ್ ಭಾರತದ ವಿರುದ್ಧ 8 ಶತಕ ಸಿಡಿಸಿದ್ದರು.

ಈ ಸಮಯದಲ್ಲಿ ರೂಟ್ ತನ್ನ ವೃತ್ತಿಜೀವನದ ಅತ್ಯುತ್ತಮ ಫಾರ್ಮ್​ನಲ್ಲಿದ್ದು, ಕಳೆದ ವರ್ಷದಿಂದ ಜೋ ರೂಟ್ 11 ಶತಕಗಳನ್ನು ಸಿಡಿಸಿದ್ದಾರೆ. ಇದರೊಂದಿಗೆ ಜೋ ರೂಟ್ 18 ತಿಂಗಳಲ್ಲಿ ಸ್ಟೀವ್ ಸ್ಮಿತ್ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿಗಳನ್ನು ಮೀರಿಸಿದ್ದಾರೆ. ಜೋ ರೂಟ್ ಪ್ರಸ್ತುತ ಅತಿ ಹೆಚ್ಚು ಸ್ಕೋರ್ ಮಾಡಿದ ಆಟಗಾರ ಎನಿಸಿಕೊಂಡಿದ್ದಾರೆ.

378ರ ಗುರಿಯೂ ಕಡಿಮೆಯಾಯಿತು

ಪಂದ್ಯದ ಮೊದಲ ಸೆಷನ್‌ನಲ್ಲಿ ಕಳಪೆ ಆರಂಭದ ಹೊರತಾಗಿಯೂ, ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಗಳಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಭರ್ಜರಿ ಶತಕ ಸಿಡಿಸಿದ್ದರು. ನಂತರ ಭಾರತದ ಬೌಲರ್‌ಗಳು ಇಂಗ್ಲೆಂಡ್ ಅನ್ನು ಕೇವಲ 284 ರನ್‌ಗಳಿಗೆ ಆಲೌಟ್ ಮಾಡಿ 132 ರನ್‌ಗಳ ಮುನ್ನಡೆ ಸಾಧಿಸಿದರು. ಪಂದ್ಯದ ನಾಲ್ಕನೇ ದಿನದಂದು, ಬ್ಯಾಟಿಂಗ್‌ಗೆ ಉತ್ತಮ ಪರಿಸ್ಥಿತಿಗಳು ಇದ್ದಾಗ, ಅದರ ಲಾಭವನ್ನು ಪಡೆಯಲು ಸಾಧ್ಯವಾಗದೇ ಭಾರತ ಕೇವಲ 245 ರನ್ ಗಳಿಸಿತು. ನಂತರ ಇಂಗ್ಲೆಂಡ್‌ಗೆ 378 ರನ್‌ಗಳ ಟಾರ್ಗೆಟ್ ಸಿಕ್ಕಿದ್ದು, ಅದನ್ನು ಯಾವುದೇ ಕಷ್ಟವಿಲ್ಲದೆ ಸಾಧಿಸಿತು. ತಂಡದ ಪರವಾಗಿ ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋ ಅಮೋಘ ಶತಕ ಗಳಿಸಿದರು.

Published On - 5:30 pm, Wed, 6 July 22