AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RR vs GT: ಗುಜರಾತ್ ವಿರುದ್ಧ ಮೊದಲ ಓವರ್​ನಲ್ಲೇ ಬೇಡದ ದಾಖಲೆ ಬರೆದ ಆರ್ಚರ್

Jofra Archer's IPL 2026 unwanted Record: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ 11 ಎಸೆತಗಳನ್ನು ಎಸೆದು ವೈಡ್ ಮತ್ತು ನೋ-ಬಾಲ್‌ಗಳಿಂದ ರನ್ ನೀಡಿದರು. ಈ ಅನಿರೀಕ್ಷಿತ ಬೌಲಿಂಗ್‌ನಿಂದಾಗಿ ಗುಜರಾತ್ ಟೈಟಾನ್ಸ್ ಪವರ್‌ಪ್ಲೇನಲ್ಲಿ ಉತ್ತಮ ಆರಂಭ ಪಡೆಯಿತು. ಇದು ಐಪಿಎಲ್ ಇತಿಹಾಸದಲ್ಲಿ ಮೊದಲ ಓವರ್‌ನಲ್ಲಿ ಬೌಲ್ ಮಾಡಿದ ಅತಿ ದೀರ್ಘ ಓವರ್ ಆಗಿದೆ.

RR vs GT: ಗುಜರಾತ್ ವಿರುದ್ಧ ಮೊದಲ ಓವರ್​ನಲ್ಲೇ ಬೇಡದ ದಾಖಲೆ ಬರೆದ ಆರ್ಚರ್
Jofra Archer
TV9 Web
| Edited By: |

Updated on: May 09, 2026 | 8:38 PM

Share

ಐಪಿಎಲ್ 2026 (IPL 2026) ರ 52 ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ (RR vs GT) ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು. ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಪರ ಗಿಲ್ ಹಾಗೂ ಸುದರ್ಶನ್ ಇನ್ನಿಂಗ್ಸ್ ಆರಂಭಿಸಿದರೆ, ಇತ್ತ ರಾಜಸ್ಥಾನ್ ಪರ ವೇಗಿ ಜೋಫ್ರಾ ಆರ್ಚರ್ (Jofra Archer) ಮೊದಲ ಓವರ್ ಬೌಲ್ ಮಾಡಿದರು. ಈ ಸೀಸನ್​ನಲ್ಲಿ ಮೊದಲ ಓವರ್​ನಲ್ಲೇ ಹೆಚ್ಚು ವಿಕೆಟ್ ಪಡೆದು ದಾಖಲೆ ಬರೆದಿದ್ದ ಆರ್ಚರ್, ಈ ಪಂದ್ಯದಲ್ಲಿ ಮಾತ್ರ ಅತ್ಯಂತ ಕಳಪೆ ದಾಖಲೆ ಬರೆದರು. ಗುಜರಾತ್ ವಿರುದ್ಧ ಮೊದಲ ಓವರ್ ಎಸೆದ ಆರ್ಚರ್ ಈ ಓವರ್​ನಲ್ಲಿ 6 ಎಸೆತಗಳ ಬದಲಿಗೆ ಬರೋಬ್ಬರಿ 11 ಎಸೆತಗಳನ್ನು ಬೌಲ್ ಮಾಡಿ ಬೇಡದ ದಾಖಲೆಗೆ ಕೊರಳೊಡ್ಡಿದರು.

ದೀರ್ಘ ಓವರ್ ಎಸೆದ ಆರ್ಚರ್

ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಆರು ಕಾನೂನುಬದ್ಧ ಚೆಂಡುಗಳನ್ನು ಎಸೆಯಲು ಜೋಫ್ರಾ ಆರ್ಚರ್ ಒಟ್ಟು 11 ಎಸೆತಗಳನ್ನು ಎಸೆಯಬೇಕಾಯಿತು. ಈ ಓವರ್​ನಲ್ಲಿ ಅವರು ವೈಡ್‌ಗಳು, ನೋ-ಬಾಲ್‌ಗಳನ್ನು ಎಸೆದರು. ವೇಗ ಮತ್ತು ನಿಖರವಾದ ಲೈನ್ ಮತ್ತು ಲೆಂತ್‌ಗೆ ಹೆಸರುವಾಸಿಯಾದ ಆರ್ಚರ್, ಈ ಪಂದ್ಯದಲ್ಲಿ ತಮ್ಮ ಲಯವನ್ನು ಕಂಡುಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾದರು. ಐಪಿಎಲ್ ಪಂದ್ಯದ ಮೊದಲ ಓವರ್‌ನಲ್ಲಿ ಆರ್ಚರ್ 11 ಎಸೆತಗಳನ್ನು ಎಸೆದಿರುವುದು ಇದೇ ಮೊದಲು. ಐಪಿಎಲ್‌ನಲ್ಲಿ ಒಟ್ಟು ಆರು ಬೌಲರ್‌ಗಳು ಈ ಹಿಂದೆ ಒಂದು ಓವರ್‌ನಲ್ಲಿ 11 ಎಸೆತಗಳನ್ನು ಎಸೆದಿದ್ದಾರೆ, ಆದರೆ ಇನ್ನಿಂಗ್ಸ್‌ನ ಆರಂಭಿಕ ಓವರ್‌ನಲ್ಲಿ ಯಾರೂ ಹೀಗೆ ಮಾಡಿರಲಿಲ್ಲ.

ಐಪಿಎಲ್‌ನಲ್ಲಿ ಅತಿ ದೀರ್ಘ ಓವರ್ ಬೌಲ್ ಮಾಡಿದವರು

  • 11 ಚೆಂಡುಗಳು- ಮೊಹಮ್ಮದ್ ಸಿರಾಜ್ vs ಎಂಐ, ಬೆಂಗಳೂರು, 2023 (19ನೇ ಓವರ್)
  • 11 ಚೆಂಡುಗಳು- ತುಷಾರ್ ದೇಶಪಾಂಡೆ vs ಎಲ್‌ಎಸ್‌ಜಿ, ಚೆನ್ನೈ, 2023 (4ನೇ ಓವರ್)
  • 11 ಚೆಂಡುಗಳು- ಶಾರ್ದೂಲ್ ಠಾಕೂರ್ vs ಕೆಕೆಆರ್, ಕೋಲ್ಕತ್ತಾ, 2025 (13ನೇ ಓವರ್)
  • 11 ಚೆಂಡುಗಳು – ಸಂದೀಪ್ ಶರ್ಮಾ vs ಡಿಸಿ, ದೆಹಲಿ, 2025 (20ನೇ ಓವರ್)
  • 11 ಚೆಂಡುಗಳು- ಹಾರ್ದಿಕ್ ಪಾಂಡ್ಯ vs ಜಿಟಿ, ವಾಂಖೆಡೆ, 2025 (8ನೇ ಓವರ್)
  • 11 ಚೆಂಡುಗಳು- ಅರ್ಶ್‌ದೀಪ್ ಸಿಂಗ್ vs ಜಿಟಿ, ಮುಲ್ಲನ್‌ಪುರ, 2026 (20ನೇ ಓವರ್)
  • 11 ಎಸೆತಗಳು- ಜೋಫ್ರಾ ಆರ್ಚರ್ vs ಜಿಟಿ, ಜೈಪುರ, 2026 (ಮೊದಲನೇ ಓವರ್)

RR vs GT IPL 2026 Live Score: ಗುಜರಾತ್ ಮೊದಲ ವಿಕೆಟ್ ಪತನ

ಆರ್ಚರ್ ಅವರ ಕಳಪೆ ಬೌಲಿಂಗ್​ನ ಲಾಭ ಪಡೆದ ಗುಜರಾತ್ ಟೈಟಾನ್ಸ್‌ ಉತ್ತಮ ಆರಂಭ ಪಡೆಯಿತು. ಪವರ್‌ಪ್ಲೇನಲ್ಲಿ ಜೋಫ್ರಾ ಆರ್ಚರ್ ಒಟ್ಟು ಎರಡು ಓವರ್‌ಗಳನ್ನು ಬೌಲ್ ಮಾಡಿ, 16.50 ರ ಎಕಾನಮಿ ರೇಟ್​ನಲ್ಲಿ 33 ರನ್‌ಗಳನ್ನು ಬಿಟ್ಟುಕೊಟ್ಟರು. ಇದರಿಂದಾಗಿ ಗುಜರಾತ್ ಮೊದಲ ಆರು ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 82 ರನ್‌ಗಳಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ
ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ