On This Day: ಒಂದೇ ಇನಿಂಗ್ಸ್ನಲ್ಲಿ 4 ವಿಕೆಟ್ ಕೀಪರ್ಗಳನ್ನು ಕಣಕ್ಕಿಳಿಸಿದ ಇಂಗ್ಲೆಂಡ್..!
Cricket Facts: ವಿಚಿತ್ರವೆಂದರೆ ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಕೀಪರ್ಗಳು ಕಾಣಿಸಿಕೊಂಡರೂ, ಯಾರೂ ಕೂಡ ಒಂದೇ ಕ್ಯಾಚ್ ಹಿಡಿದಿರಲಿಲ್ಲ.

ಕ್ರಿಕೆಟ್ ಅಂಗಳದಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯೋದು ಸಾಮಾನ್ಯ. ಅದರಲ್ಲಿ ಕೆಲವೊಂದು ಇತಿಹಾಸ ಪುಟವನ್ನು ಸೇರಿರುತ್ತವೆ. ಅಂತಹ ಒಂದು ಘಟನೆ ನಡೆದು ಇಂದಿಗೆ 36 ವರ್ಷಗಳಾಗಿವೆ. ಸಾಮಾನ್ಯವಾಗಿ ಒಂದು ತಂಡದ ಪರ ಒಬ್ಬರು ವಿಕೆಟ್ ಕೀಪರ್ ಕಣಕ್ಕಿಳಿಯುತ್ತಾರೆ. ಅದಗ್ಯೂ ಅತ್ಯುತ್ತಮ ಫಾರ್ಮ್ನಲ್ಲಿರುವ ಇಬ್ಬರು ವಿಕೆಟ್ ಕೀಪರ್ಗಳು ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದಿರುವುದು ನೋಡಿರುತ್ತೀರಿ. ಆದರೆ ಒಂದು ಪಂದ್ಯದ ಇನಿಂಗ್ಸ್ವೊಂದರಲ್ಲೇ 4 ವಿಕೆಟ್ ಕೀಪರ್ಗಳು ಗ್ಲೌಸ್ ಧರಿಸಿದ್ದು ಅದೇ ಮೊದಲ ಬಾರಿಯಾಗಿತ್ತು. ಅದುವೇ ಇದೀಗ ಕ್ರಿಕೆಟ್ ಇತಿಹಾಸ ಪುಟದಲ್ಲಿ ಅಚ್ಚಾಗಿ ಉಳಿದಿದೆ.
ಅದು ಜುಲೈ 25, 1986.. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿತ್ತು. ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಬ್ರೂಸ್ ಫ್ರೆಂಚ್ ರಕ್ಷಣಾತ್ಮಕ ಆಟದೊಂದಿಗೆ ಕ್ರೀಸ್ ಕಚ್ಚಿ ನಿಂತಿದ್ದರು. ಇತ್ತ ನ್ಯೂಜಿಲೆಂಡ್ ಮಾರಕ ವೇಗಿ ರಿಚರ್ಡ್ ಹ್ಯಾಡ್ಲೀ ಅವರ ಬೌಲಿಂಗ್ ಎದುರಿಸುವುದು ಕಷ್ಟಕರವಾಗಿತ್ತು. ಅದರಲ್ಲೂ ಹ್ಯಾಡ್ಲೀ ಎಸೆದ ಬೌನ್ಸರ್ಗೆ ಇಂಗ್ಲೆಂಡ್ ವಿಕೆಟ್‌ಕೀಪರ್ ಬ್ರೂಸ್ ಗಾಯಗೊಂಡರು. ಗಾಯವು ತೀವ್ರವಾಗಿದ್ದರಿಂದ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮೊದಲ ಇನಿಂಗ್ಸ್ ಮುಗಿಯುತ್ತಿದ್ದಂತೆ ಇಂಗ್ಲೆಂಡ್ ತಂಡಕ್ಕೆ ಹೊಸ ಸವಾಲು ಎದುರಾಯಿತು. ವಿಕೆಟ್ ಕೀಪರ್ ಗಾಯಗೊಂಡಿದ್ದರಿಂದ ಬದಲಿ ಆಟಗಾರನಾಗಿ ಕಣಕ್ಕಿಳಿಸಬೇಕಾದ ಅನಿವಾರ್ಯತೆಯಿತ್ತು. ಆದರೆ ತವರಿನಲ್ಲಿ ಪಂದ್ಯ ನಡೆದಿದ್ದರಿಂದ ಹೆಚ್ಚುವರಿ ವಿಕೆಟ್ ಕೀಪರ್ ಆಯ್ಕೆ ಬಗ್ಗೆ ಇಂಗ್ಲೆಂಡ್ ಆಸಕ್ತಿ ತೋರಿರಲಿಲ್ಲ. ಇದೀಗ ಬ್ರೂಸ್ ಫ್ರೆಂಚ್ ಗಾಯಾಳುವಾಗಿದ್ದರಿಂದ ಬದಲಿ ಕೀಪರ್ ಅತ್ಯವಶ್ಯಕವಾಗಿತ್ತು. ಇಂತಹ ಅನಿವಾರ್ಯ ಸಂದರ್ಭದಲ್ಲಿ ತಂಡದಲ್ಲಿದ್ದ ಬ್ಯಾಟ್ಸ್ಮನ್ ಬಿಲ್ ಅಥೆಗೆ ಕೀಪಿಂಗ್ ಗ್ಲೌಸ್ ತೊಡಿಸಲಾಯಿತು. ಆದರೆ ವಿಕೆಟ್ ಹಿಂದಿನ ಕೌಶಲ್ಯತೆ ಇಲ್ಲದ ಕಾರಣ ಅಥೆ ಚೆಂಡನ್ನು ಗುರುತಿಸುವಲ್ಲಿ ಪರದಾಡಿದರು. ಪರಿಣಾಮ 2 ಓವರ್ ಬಳಿಕ ಬಿಲ್ ಅಥೆಯನ್ನು ಬದಲಿಸುವ ನಿರ್ಧಾರ ಮಾಡಲಾಯಿತು.
ಅಷ್ಟರಲ್ಲಾಗಲೇ ಇಂಗ್ಲೆಂಡ್ ತಂಡದ ಮ್ಯಾನೇಜ್ಮೆಂಟ್ ಮಾಜಿ ವಿಕೆಟ್ ಕೀಪರ್ನ್ನು ಕ್ ಸಂಪರ್ಕಿಸಿತು. ಅದರಂತೆ 45 ವರ್ಷದ ಬಾಬ್ ಟೇಲರ್ ಮೈದಾನಕ್ಕೆ ಕರೆಸಿ ಕೀಪಿಂಗ್ ಜವಾಬ್ದಾರಿ ನೀಡಲಾಯಿತು. ಆ ಬಳಿಕ ಅದೇನಾಯ್ತೊ ಗೊತ್ತಿಲ್ಲ. ಲಂಚ್ ಬ್ರೇಕ್ ಬಳಿಕ ಬಾಬ್ ಟೇಲರ್ ಕಣಕ್ಕಿಳಿಯಲಿಲ್ಲ. ಅವರ ಬದಲಾಗಿ ತಂಡದಲ್ಲಿದ್ದ ಬಾಬಿ ಪಾರ್ಕ್ಸ್ ಕೀಪಿಂಗ್ ಗ್ಲೌಸ್ ತೊಟ್ಟು ವಿಕೆಟ್ ಹಿಂದೆ ನಿಂತಿದ್ದರು. ಇನ್ನು ನಾಲ್ಕನೇ ದಿನದಾಟದ ವೇಳೆಗೆ ಗಾಯದಿಂದ ಚೇತರಿಸಿಕೊಂಡ ಬ್ರೂಸ್ ಫ್ರೆಂಚ್ ಮತ್ತೆ ಆಗಮಿಸಿದರು. ಅಲ್ಲದೆ ತಂಡದ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡರು.
ವಿಚಿತ್ರವೆಂದರೆ ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಕೀಪರ್ಗಳು ಕಾಣಿಸಿಕೊಂಡರೂ, ಯಾರೂ ಕೂಡ ಒಂದೇ ಕ್ಯಾಚ್ ಹಿಡಿದಿರಲಿಲ್ಲ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿ 307 ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಮೊದಲ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ 342 ರನ್ ಗಳಿಸುವ ಮೂಲಕ ಅಲ್ಪ ಮುನ್ನಡೆ ಸಾಧಿಸಿತು. ಇನ್ನು 2ನೇ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು 295 ರನ್‌ಗಳಿಗೆ ಡಿಕ್ಲೇರ್ ಘೋಷಿಸಿತು. 261 ರನ್‌ಗಳ ಗುರಿ ಪಡೆದ ನ್ಯೂಜಿಲೆಂಡ್ ಅಂತಿಮ ದಿನ 2 ವಿಕೆಟ್ ನಷ್ಟದೊಂದಿಗೆ 41 ರನ್ ಗಳಿಸಲಷ್ಟೇ ಶಕ್ತರಾದರು. ಅದರಂತೆ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು.




