AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

19 ಫೋರ್, 8 ಸಿಕ್ಸರ್​: ‘ಮರಿ ಸೆಹ್ವಾಗ್’ ಸಿಡಿಲಬ್ಬರ, ಬೌಲರ್​ಗಳು ತತ್ತರ

ಮೈದಾನದ ನಾಲ್ಕೂ ಮೂಲೆಗೂ ಚೆಂಡನ್ನು ಅಟ್ಟುತ್ತಾ ಬೌಲರ್‌ಗಳನ್ನು ಮನಬಂದಂತೆ ದಂಡಿಸುವ ವೀರೇಂದ್ರ ಸೆಹ್ವಾಗ್ ಅವರ ಆ ವಿಧ್ವಂಸಕ ಬ್ಯಾಟಿಂಗ್ ಶೈಲಿ ನೆನಪಿದೆಯೇ? ಹೌದು, ಕ್ರಿಕೆಟ್ ಲೋಕ ಮತ್ತೊಮ್ಮೆ ಅಂತಹದ್ದೇ ಬಿರುಗಾಳಿಗೆ ಸಾಕ್ಷಿಯಾಗಿದೆ. ಆದರೆ ಈ ಬಾರಿ ಅಬ್ಬರಿಸಿರುವುದು ತಂದೆಯಲ್ಲ, ಬದಲಿಗೆ ಅವರ ಹೆಮ್ಮೆಯ ಪುತ್ರ ಆರ್ಯವೀರ್ ಸೆಹ್ವಾಗ್!"

19 ಫೋರ್, 8 ಸಿಕ್ಸರ್​: 'ಮರಿ ಸೆಹ್ವಾಗ್' ಸಿಡಿಲಬ್ಬರ, ಬೌಲರ್​ಗಳು ತತ್ತರ
Aaryavir Sehwag Image Credit source: x.com
ಝಾಹಿರ್ ಯೂಸುಫ್
|

Updated on: Oct 17, 2026 | 1:26 PM

Share

ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ವಿಧ್ವಂಸಕ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರಾದ ವೀರೇಂದ್ರ ಸೆಹ್ವಾಗ್ ಅವರ ಬ್ಯಾಟಿಂಗ್ ಶೈಲಿಯನ್ನು ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈಗ ಅವರದೇ ಹಾದಿಯಲ್ಲಿ ಸಾಗಿರುವ ಅವರ ಪುತ್ರ ಆರ್ಯವೀರ್ ಸೆಹ್ವಾಗ್, ದೇಶೀಯ ಕ್ರಿಕೆಟ್ ಅಂಗಳದಲ್ಲಿ ಅಬ್ಬರದ ಶತಕ ಸಿಡಿಸುವ ಮೂಲಕ ತಂದೆಯ ನೆನಪನ್ನು ಮರುಕಳಿಸಿದ್ದಾರೆ.

ಆಂಧ್ರ ಪ್ರದೇಶದ ಡಾ. ಪಿ.ವಿ.ಜಿ. ರಾಜು ಎಸಿಎ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸ್ಟೇಡಿಯಂನಲ್ಲಿ ನಡೆದ ವಿನೂ ಮಂಕಡ್ ಅಂಡರ್-19 ಟೂರ್ನಿಯ 4ನೇ ಪಂದ್ಯದಲ್ಲಿ ದೆಹಲಿ ಹಾಗೂ ಚಂಡೀಗಢ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ದೆಹಲಿ ಅಂಡರ್-19 ತಂಡದ ನಾಯಕರಾಗಿ ಕಣಕ್ಕಿಳಿದ ಆರ್ಯವೀರ್ ಸ್ಫೋಟಕ ಸೆಂಚುರಿ ಸಿಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಆರ್ಯವೀರ್ ಬಿರುಗಾಳಿ ಬ್ಯಾಟಿಂಗ್‌!

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡಕ್ಕೆ ಆರ್ಯವೀರ್ ಸ್ಫೋಟಕ ಆರಂಭ ಒದಗಿಸಿದ್ದರು. ಆರಂಭದಿಂದಲೇ ಚಂಡೀಗಢ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಜೂನಿಯರ್ ಸೆಹ್ವಾಗ್ ಕೇವಲ 143 ಎಸೆತಗಳಲ್ಲಿ 173 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದರು.

ಈ ಆಕರ್ಷಕ ಇನಿಂಗ್ಸ್‌ನಲ್ಲಿ ಆರ್ಯವೀರ್ ಬ್ಯಾಟ್​​ನಿಂದ 19 ಫೋರ್ ಹಾಗೂ 8 ಸಿಕ್ಸರ್‌ಗಳು ಮೂಡಿಬಂದಿದ್​ದವು. ತಂದೆ ವೀರೇಂದ್ರ ಸೆಹ್ವಾಗ್ ಅವರಂತೆಯೇ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಆರ್ಯವೀರ್ ನೆರವಿನಿಂದ ದೆಹಲಿ ತಂಡ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 289 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.

ಹೋರಾಟದ ನಡುವೆಯೂ ದೆಹಲಿಗೆ ಸೋಲು:

ಆರ್ಯವೀರ್ ಸೆಹ್ವಾಗ್ ಅವರ ಈ ಅಮೋಘ ಶತಕದ ನಡುವೆಯೂ ದೆಹಲಿ ತಂಡಕ್ಕೆ ಜಯ ಒಲಿಯಲಿಲ್ಲ. ದೆಹಲಿ ನೀಡಿದ 290 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚಂಡೀಗಢ್ ಅಂಡರ್-19 ತಂಡವು ಇನ್ನೂ 8 ಓವರ್‌ಗಳು ಬಾಕಿ ಇರುವಂತೆಯೇ (41.5 ಓವರ್‌ಗಳಲ್ಲಿ) 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಚಂಡೀಗಢ್ ತಂಡದ ಪರ ರುಪೇಶ್ ಯಾದವ್ ಕೇವಲ 125 ಎಸೆತಗಳಲ್ಲಿ 167 ರನ್ ಸಿಡಿಸುವ ಮೂಲಕ ದೆಹಲಿ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿದರು.

ಇದನ್ನೂ ಓದಿ: ನ್ಯೂಝಿಲೆಂಡ್ ಸರಣಿಗೆ ಭಾರತದ 4 ತಂಡಗಳು ಪ್ರಕಟ

ಭವಿಷ್ಯದ ತಾರೆ ಆರ್ಯವೀರ್:

ದೆಹಲಿ ತಂಡ ಪಂದ್ಯವನ್ನು ಸೋತಿದ್ದರೂ, ಆರ್ಯವೀರ್ ಸೆಹ್ವಾಗ್ ಆಡಿದ ಜವಾಬ್ದಾರಿಯುತ ಹಾಗೂ ಸ್ಫೋಟಕ ಇನಿಂಗ್ಸ್ ಕ್ರಿಕೆಟ್ ವಲಯದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ತಂದೆಯ ತಾಂತ್ರಿಕತೆ ಮತ್ತು ಆಕ್ರಮಣಕಾರಿ ಶೈಲಿಯನ್ನು ಮೈಗೂಡಿಸಿಕೊಂಡಿರುವ ಆರ್ಯವೀರ್, ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಮಟ್ಟದ ತಾರೆಯಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳನ್ನು ತೋರ್ಪಡಿಸುತ್ತಿದ್ದಾರೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ
ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ
ದಸರಾ, ದೀಪಾವಳಿ ಹಿನ್ನೆಲೆ: ಸ್ವೀಟ್ ಶಾಪ್‌ಗಳ ಮೇಲೆ ದಾಳಿ ಮುಂದುವರಿಕೆ
ದಸರಾ, ದೀಪಾವಳಿ ಹಿನ್ನೆಲೆ: ಸ್ವೀಟ್ ಶಾಪ್‌ಗಳ ಮೇಲೆ ದಾಳಿ ಮುಂದುವರಿಕೆ
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮಾಲಾ ವೇಷಧಾರಿಗಳಿಂದ 'ಹೈಟೆಕ್ ಭಿಕ್ಷಾಟನೆ'!
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮಾಲಾ ವೇಷಧಾರಿಗಳಿಂದ 'ಹೈಟೆಕ್ ಭಿಕ್ಷಾಟನೆ'!
ಭಾರತಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭೇಟಿ
ಭಾರತಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭೇಟಿ
ಪಾರಂಪರಿಕ ಟಾಂಗಾ ಸವಾರಿ:ದಸರಾ ಮಹೋತ್ಸವದಲ್ಲಿ ಇತಿಹಾಸದ ಅನಾವರಣ
ಪಾರಂಪರಿಕ ಟಾಂಗಾ ಸವಾರಿ:ದಸರಾ ಮಹೋತ್ಸವದಲ್ಲಿ ಇತಿಹಾಸದ ಅನಾವರಣ
ಬೆಂಗಳೂರಲ್ಲಿ ಆಟೋ ಚಾಲಕನ ರೌಡಿಸಂ! ಫಿಲ್ಮಿ ಸ್ಟೈಲ್‌ನಲ್ಲಿ ಕಾರು ಚೇಸ್
ಬೆಂಗಳೂರಲ್ಲಿ ಆಟೋ ಚಾಲಕನ ರೌಡಿಸಂ! ಫಿಲ್ಮಿ ಸ್ಟೈಲ್‌ನಲ್ಲಿ ಕಾರು ಚೇಸ್
ಆರು ಜನರ ಮೇಲೆ ಎಲಿಮಿನೇಷನ್ ತೂಗುಗತ್ತಿ; ಹೋಗೋದು ಯಾರು?
ಆರು ಜನರ ಮೇಲೆ ಎಲಿಮಿನೇಷನ್ ತೂಗುಗತ್ತಿ; ಹೋಗೋದು ಯಾರು?
ದಸರಾ ರಜೆ: ಬೆಂಗಳೂರಿನಲ್ಲಿ ತಡರಾತ್ರಿ ವರೆಗೂ ಭಾರಿ ಟ್ರಾಫಿಕ್ ಜಾಮ್
ದಸರಾ ರಜೆ: ಬೆಂಗಳೂರಿನಲ್ಲಿ ತಡರಾತ್ರಿ ವರೆಗೂ ಭಾರಿ ಟ್ರಾಫಿಕ್ ಜಾಮ್
ಇಂದು ಕಾಳರಾತ್ರಿಯ ಆರಾಧನೆಯ ದಿನ; ಈ ಎಲ್ಲಾ ರಾಶಿಗಳಿಗೆ ಶುಭದಿನ
ಇಂದು ಕಾಳರಾತ್ರಿಯ ಆರಾಧನೆಯ ದಿನ; ಈ ಎಲ್ಲಾ ರಾಶಿಗಳಿಗೆ ಶುಭದಿನ
ಸ್ಟಿಂಗ್ ಆಪರೇಷನ್ ಕದನಕ್ಕೆ ಶೋಷಿತ ವರ್ಗಗಳ ಒಕ್ಕೂಟ ಎಂಟ್ರಿ
ಸ್ಟಿಂಗ್ ಆಪರೇಷನ್ ಕದನಕ್ಕೆ ಶೋಷಿತ ವರ್ಗಗಳ ಒಕ್ಕೂಟ ಎಂಟ್ರಿ