‘ಸೂಪರ್ ಕಿಂಗ್ಸ್​’ಗೆ ಕೀರನ್ ಪೊಲಾರ್ಡ್​ ಎಂಟ್ರಿ!

ಸೌತ್ ಆಫ್ರಿಕಾ ಟಿ20 ಲೀಗ್‌ನ 5ನೇ ಆವೃತ್ತಿಯು ಜನವರಿ 17 ರಿಂದ ಫೆಬ್ರವರಿ 21, 2027 ರವರೆಗೆ ಜರುಗಲಿದೆ. ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು ರನ್ನರ್-ಅಪ್ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಸೂಪರ್ ಕಿಂಗ್ಸ್​ಗೆ ಕೀರನ್ ಪೊಲಾರ್ಡ್​ ಎಂಟ್ರಿ!
Kieron Pollard
Image Credit source: SA20

Updated on: Oct 08, 2026 | 7:35 AM

ಸೌತ್ ಆಫ್ರಿಕಾ ಟಿ20 ಲೀಗ್​ನ ಮುಂಬರುವ ಸೀಸನ್​ನಲ್ಲಿ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಜೋಬರ್ಗ್ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ. ಬುಧವಾರ (ಅಕ್ಟೋಬರ್ 7, 2026) ನಡೆದ ಆಟಗಾರರ ಹರಾಜಿನಲ್ಲಿ ಜೆಎಸ್‌ಕೆ ತಂಡವು ಪೊಲಾರ್ಡ್ ಅವರನ್ನು R1.5 ಮಿಲಿಯನ್ (ಸುಮಾರು 1.5 ಕೋಟಿ ರೂಪಾಯಿ) ಮೂಲ ಬೆಲೆಗೆ ಖರೀದಿಸಿದೆ.

ಯೆಲ್ಲೊ ಜೆರ್ಸಿಯಲ್ಲಿ ಮುಂಬೈ ಐಕಾನ್!

ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅತ್ಯಂತ ನಿಷ್ಠಾವಂತ ಆಟಗಾರ ಮತ್ತು ಆಪತ್ಬಾಂಧವ ಎಂದೇ ಹೆಸರಾಗಿದ್ದ ಕೀರನ್ ಪೊಲಾರ್ಡ್, ಇದೀಗ ಮೊದಲ ಬಾರಿಗೆ ಅವರ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿಯ ಸಹೋದರ ಸಂಸ್ಥೆಯಾದ ಜೋಬರ್ಗ್ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ.

ಕಳೆದ ಸೀಸನ್‌ನಲ್ಲಿ ಎಂಐ ಕೇಪ್ ಟೌನ್ ತಂಡದ ನಾಯಕರಾಗಿದ್ದ ಕೀರನ್ ಪೊಲಾರ್ಡ್ ಅವರನ್ನು ಈ ಬಾರಿಯ ಹರಾಜಿಗೂ ಮುನ್ನ ಉಳಿಸಿಕೊಳ್ಳಲು ಮುಂಬೈ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಅವರ ಬದಲಿಗೆ ಮುಂಬೈ ತಂಡವು ಅದೇ ಬೆಲೆಗೆ ಶಿಮ್ರಾನ್ ಹೆಟ್ಮೆಯರ್ ಅವರನ್ನು ಖರೀದಿಸಿತು.

ಇತ್ತ ಹರಾಜಿನಲ್ಲಿ ಕಾಣಿಸಿಕೊಂಡ 39 ವರ್ಷದ ಕೀರನ್ ಪೊಲಾರ್ಡ್ ಅವರನ್ನು ಖರೀದಿಸುವಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ಯಶಸ್ವಿಯಾಗಿದೆ. ಹೀಗಾಗಿ ಮುಂಬರುವ ಸೀಸನ್​ನಲ್ಲಿ ಪೊಲಾರ್ಡ್ ಯೆಲ್ಲೊ ಪಡೆ ಪರ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಜೆಎಸ್‌ಕೆ ಪಾಲಾದ ಪ್ರಮುಖ ಆಟಗಾರರು:

ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತದೊಂದಿಗೆ ಕಾಣಿಸಿಕೊಂಡಿದ್ದ ಜೋಬರ್ಗ್ ಸೂಪರ್ ಕಿಂಗ್ಸ್, ಹೊಸ ಮುಖ್ಯ ಕೋಚ್ ಅಲ್ಬಿ ಮೋರ್ಕೆಲ್ ಮಾರ್ಗದರ್ಶನದಲ್ಲಿ ಬಲಿಷ್ಠ ತಂಡವನ್ನು ಕಟ್ಟಿದೆ. ಈ ಹರಾಜಿನ ಮೂಲಕ ಜೆಎಸ್​ಕೆ ಖರೀದಿಸಿದ ಇತರೆ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

  • ಜೇಸನ್ ರೌಲ್ಸ್ (R2.9 ಮಿಲಿಯನ್): ಸೌತ್ ಆಫ್ರಿಕಾ ಅಂಡರ್-19 ತಂಡದ ಈ ಆಲ್‌ರೌಂಡರ್ ಇಡೀ ಹರಾಜಿನ ಅತ್ಯಂತ ದುಬಾರಿ ಆಟಗಾರನಾಗಿ ಜೆಎಸ್‌ಕೆ ಪಾಲಾದರು.
  • ಫಾಫ್ ಡು ಪ್ಲೆಸಿಸ್ (R2.7 ಮಿಲಿಯನ್): ಹರಾಜಿಗೂ ಮುನ್ನ ತಂಡದಿಂದ ಬಿಡುಗಡೆಯಾಗಿದ್ದ ಮಾಜಿ ನಾಯಕನನ್ನು ಭಾರಿ ಪೈಪೋಟಿಯ ನಂತರ ಜೆಎಸ್‌ಕೆ ಮರಳಿ ಖರೀದಿಸಿತು.
  • ಬ್ಲೆಸ್ಸಿಂಗ್ ಮುಝರಬಾನಿ: ಝಿಂಬಾಬ್ವೆಯ ವೇಗಿ ಮೂಲ ಬೆಲೆಗೆ ತಂಡ ಸೇರಿದ್ದಾರೆ.
  • ಆಂಡ್ರಿಸ್ ಗೌಸ್: ಅಮೆರಿಕದ ವಿಕೆಟ್‌ಕೀಪರ್ ಬ್ಯಾಟರ್ ಕೂಡ ಜೆಎಸ್‌ಕೆ ಪಾಲಾಗಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ 4 ಆಲ್​ರೌಂಡರ್​ಗಳು, 6 ಬೌಲರ್​ಗಳು

ಜೋಬರ್ಗ್ ಸೂಪರ್ ಕಿಂಗ್ಸ್ ತಂಡ: ಫಾಫ್ ಪ್ಲೆಸಿಸ್, ರೈಲಿ ರೊಸ್ಸೊ, ಜೇಮ್ಸ್ ವಿನ್ಸ್, ಲೀಯುಸ್ ಡು ಪ್ಲೋಯ್, ಕೀರನ್ ಪೊಲಾರ್ಡ್, ಜೇಸನ್ ಹೋಲ್ಡರ್, ಜೇಸನ್ ರೌಲ್ಸ್, ಡೇಟನ್ ಗಾಲೀಮ್, ಡೋನಾವನ್ ಫೆರೇರಾ, ಡೇಯನ್ ಫಾರೆಸ್ಟರ್, ಜಾರೆನ್ ಬ್ಯಾಚರ್, ಆಂಡ್ರಿಸ್ ಗೌಸ್, ಮ್ಯಾಥ್ಯೂ ಡಿ ವಿಲಿಯರ್ಸ್, ಅಕೀಲ್ ಹೊಸೈನ್, ಬ್ಲೆಸ್ಸಿಂಗ್ ಮುಝರಬಾನಿ, ಡುವಾನ್ ಯಾನ್ಸೆನ್, ಪ್ರೆನೆಲನ್ ಸುಬ್ರಾಯನ್, ಜಾಂಕೋ ಸ್ಮಿತ್.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us