KKR vs PBKS: ಶ್ರೇಯಸ್ ಅಯ್ಯರ್ ಪಡೆಗೆ ದೊಡ್ಡ ಆಘಾತ: ಪ್ಲೇಯಿಂಗ್ XI ನಲ್ಲಿ ಸ್ಫೋಟಕ ಬ್ಯಾಟರ್ ಅನುಮಾನ

KKR vs PBKS Predicted Playing XI: ಅಯ್ಯರ್ ಪಡೆಯ ಮೇಲೆ ಎಲ್ಲರ ಕಣ್ಣಿದ್ದು ಗೆಲುವಿನ ಲಯಕ್ಕೆ ಮರಳುತ್ತಾ ಎಂಬುದು ನೋಡಬೇಕಿದೆ. ಇದರ ನಡುವೆ ಕೆಕೆಆರ್ ಸ್ಫೋಟಕ ಬ್ಯಾಟರ್ ಆಂಡ್ರೆ ರಸೆಲ್ ಇಂಜುರಿಗೆ ತುತ್ತಾಗಿದ್ದು, ಅಯ್ಯರ್ ಪಡೆಗೆ ಹೊಸ ತಲೆನೋವಾಗಿದೆ.

KKR vs PBKS: ಶ್ರೇಯಸ್ ಅಯ್ಯರ್ ಪಡೆಗೆ ದೊಡ್ಡ ಆಘಾತ: ಪ್ಲೇಯಿಂಗ್ XI ನಲ್ಲಿ ಸ್ಫೋಟಕ ಬ್ಯಾಟರ್ ಅನುಮಾನ
KKR
Follow us
TV9 Web
| Updated By: Vinay Bhat

Updated on: Apr 01, 2022 | 12:48 PM

ಐಪಿಎಲ್ 15ನೇ ಆವೃತ್ತಿಯಲ್ಲಿ ಶುಕ್ರವಾರ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR vs PBKS) ತಂಡಗಳು ಮುಖಾಮುಖಿಯಾಗಲಿದೆ. ಕೊಲ್ಕತ್ತಾ ನೈಟ್ ರೈಡರ್ಸ್‌ಗೆ ಇದು ಮೂರನೇ ಮುಖಾಮುಖಿಯಾಗಿದ್ದರೆ ಪಂಜಾಬ್ ಕಿಂಗ್ಸ್‌ಗೆ ಎರಡನೇ ಹಣಾಹಣಿಯಾಗಿದೆ. ಪಂಜಾಬ್ ಕಳೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 200ಕ್ಕೂ ಅಧಿಕ ರನ್​ಗಳನ್ನು ಚೇಸ್ ಮಾಡಿ ಗೆದ್ದು ಬೀಗಿದ್ದು ವಿಶ್ವಾಸದಲ್ಲಿದೆ. ಮಯಾಂಕ್ ಅಗರ್ವಾಲ್ (Mayank Agarwal) ನೇತೃತ್ವದ ಪಂಜಾಬ್ ತಂಡದಲ್ಲಿ ಹೆಚ್ಚಿನ ಆಟಗಾರರು ಉತ್ತಮ ಫಾರ್ಮ್​ನಲ್ಲಿದ್ದು, ಬ್ಯಾಟಿಂಗ್​ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಇತ್ತ ಕೆಕೆಆರ್ ತಂಡ ಆರ್​​ಸಿಬಿ (RCB) ವಿರುದ್ಧ ಬ್ಯಾಟಿಂಗ್​ನಲ್ಲಿ ಕಳಪೆ ಪ್ರದರ್ಶನ ತೋರಿ ಸೋಲುಂಡಿತ್ತು. ಹೀಗಾಗಿ ಅಯ್ಯರ್ ಪಡೆಯ ಮೇಲೆ ಎಲ್ಲರ ಕಣ್ಣಿದ್ದು ಗೆಲುವಿನ ಲಯಕ್ಕೆ ಮರಳುತ್ತಾ ಎಂಬುದು ನೋಡಬೇಕಿದೆ. ಇದರ ನಡುವೆ ಕೆಕೆಆರ್ ಸ್ಫೋಟಕ ಬ್ಯಾಟರ್ ಆಂಡ್ರೆ ರಸೆಲ್ ಇಂಜುರಿಗೆ ತುತ್ತಾಗಿದ್ದು, ಅಯ್ಯರ್ ಪಡೆಗೆ ಹೊಸ ತಲೆನೋವಾಗಿದೆ.

ಹೌದು, ಆರ್‌ಸಿಬಿ ಎದುರು ಬೌಂಡರಿ ಗೆರೆ ಬಳಿ ಬಿದ್ದು ಭುಜದ ನೋವು ಅನುಭವಿಸಿದ ಆಲ್ರೌಂಡರ್ ಆಂಡ್ರೆ ರಸೆಲ್ ಕೇವಲ 3 ಓವರ್‌ಗಳನ್ನಷ್ಟೇ ಎಸೆದಿದ್ದರು. ಹೀಗಾಗಿ ಇಂದಿನ ಪಂದ್ಯಕ್ಕೆ ಇವರು ಫಿಟ್ ಆಗಿದ್ದಾರ ಎಂಬ ಬಗ್ಗೆ ಖಚಿತ ಮಾಹಿತಿಯಿಲ್ಲ. ಒಂದು ವೇಳೆ ರಸೆಲ್ ಅಲಭ್ಯರಾದರೆ ಮೊಹಮದ್ ನಬಿ ಅಥವಾ ಚಮಿಕ ಕರುಣರತ್ನೆ ಹನ್ನೊಂದರ ಬಳಗಕ್ಕೆ ಸೇರ್ಪಡೆಯಾಗಲಿದ್ದಾರೆ.

ಉಳಿದಂತೆ ಬೌಲಿಂಗ್‌ನಲ್ಲಿ ಕೆಕೆಆರ್ ಯಥಾಪ್ರಕಾರ ಉತ್ತಮ ಸಾಧನೆ ತೋರಿತ್ತು. ಅದರಲ್ಲಿಯೂ ಉಮೇಶ್ ಯಾದವ್ ತಮ್ಮ ಉತ್ತಮ ಲಯವನ್ನು ಮುಂದುವರಿಸಿದ್ದರು. ಟಿಮ್ ಸೌಥಿ, ಸುನೀಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಉತ್ತಮ ಲಯದಲ್ಲಿದ್ದರೆ, ಅದರಿಂದಾಗಿ ಆರ್‌ಸಿಬಿಯು ಬಹಳ ಕಷ್ಟಪಟ್ಟು ಜಯ ಸಾಧಿಸಿತ್ತು. ರಹಾನೆ, ಶ್ರೇಯಸ್, ವೆಂಕಟೇಶ್ ಅಯ್ಯರ್ ಮತ್ತು ಆಯಂಡ್ರೆ ರಸೆಲ್ ಬ್ಯಾಟಿಂಗ್‌ನಲ್ಲಿ ತಮ್ಮ ಲಯಕ್ಕೆ ಮರಳಿದರೆ, ಮಯಂಕ್ ಬಳಗದ ಬೌಲಿಂಗ್‌ ಪಡೆಗೆ ಕಠಿಣ ಸವಾಲು ಎದುರಾಗಲಿದೆ.

ಪಂಜಾಬ್‌ ತಂಡದ ಬ್ಯಾಟಿಂಗ್‌ ಬಲಿಷ್ಠವಾಗಿದೆ. ಆದರೆ ಬೌಲಿಂಗ್‌ ವಿಭಾಗ ತೀರಾ ದುರ್ಬಲವಾಗಿ ಗೋಚರಿಸಿದೆ. ಇದಕ್ಕೆ ಕಳೆದ ಆರ್​ಸಿಬಿ ವಿರುದ್ಧದ ಪಂದ್ಯವೇ ಸಾಕ್ಷಿ. ಡುಪ್ಲೆಸಿಸ್‌ ಪಡೆ ಬರೀ ಎರಡೇ ವಿಕೆಟಿಗೆ 205 ರನ್‌ ಪೇರಿಸಿತ್ತು. ಒಡಿಯನ್‌ ಸ್ಮಿತ್‌, ಹರ್‌ಪ್ರೀತ್‌ ಬ್ರಾರ್‌, ಆರ್ಷದೀಪ್‌ ಸಿಂಗ್‌, ಸಂದೀಪ್‌ ಶರ್ಮ ಕ್ಲಿಕ್‌ ಆಗಿರಲಿಲ್ಲ. ನಿಯಂತ್ರಣ ಸಾಧಿಸಿದ್ದು ರಾಹುಲ್‌ ಚಹರ್‌ ಮಾತ್ರ. ಗೆಲುವಿನ ನಡುವೆಯೂ ಪಂಜಾಬ್‌ ಪಾಲಿಗೆ ಇದೊಂದು ಚಿಂತೆಯ ಸಂಗತಿಯಾಗಿಯೇ ಉಳಿದಿದೆ. ಆದರೆ ದಕ್ಷಿಣ ಆಫ್ರಿಕಾದ ಘಾತಕ ವೇಗಿ ಕಗಿಸೊ ರಬಾಡ ಆಗಮನ ತಂಡಕ್ಕೆ ನೆಮ್ಮದಿ ನೀಡುತ್ತಾ ಎಂಬುದು ನೋಡಬೇಕಿದೆ. ಪಂಜಾಬ್ ಪರ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಮೂರೇ ವಿದೇಶಿ ಆಟಗಾರರನ್ನು ಕಣಕ್ಕಿಳಿಸಿತ್ತು. ಈಗ ರಬಾಡ ಅವರಿಗಾಗಿ ಆರ್ಷದೀಪ್‌ ಸಿಂಗ್‌ ಹೊರಗುಳಿಯಬಹುದು. ಅಗರ್ವಾಲ್‌, ಧವನ್‌, ರಾಜಪಕ್ಸ, ಲಿವಿಂಗ್‌ಸ್ಟೋನ್‌, ಶಾರೂಖ್‌ ಖಾನ್‌, ಒಡಿಯನ್‌ ಸ್ಮಿತ್‌ ಅವರೆಲ್ಲ ದೈತ್ಯ ಬ್ಯಾಟರ್‌ಗಳಾಗಿದ್ದಾರೆ.

ಸಂಭವನೀಯ ಪ್ಲೇಯಿಂಗ್ XI:

ಕೆಕೆಆರ್‌: ವೆಂಕಟೇಶ್ ಅಯ್ಯರ್‌, ಅಜಿಂಕ್ಯಾ ರಹಾನೆ, ಶ್ರೇಯಸ್‌ ಅಯ್ಯರ್ (ನಾಯಕ), ನಿತೀಶ್‌ ರಾಣಾ, ಸ್ಯಾಮ್‌ ಬಿಲ್ಲಿಂಗ್ಸ್‌, ಮೊಹಮದ್ ನಬಿ, ಸುನಿಲ್‌ ನರೈನ್‌, ಶೆಲ್ಡನ್‌ ಜಾಕ್ಸನ್‌, ಟಿಮ್‌ ಸೌಥಿ, ವರುಣ್ ಆರನ್‌, ಉಮೇಶ್ ಯಾದವ್‌‌.

ಪಂಜಾಬ್‌: ಶಿಖರ್ ಧವನ್‌, ಮಯಾಂಕ್ ಅಗರ್ವಾಲ್ (ನಾಯಕ), ಲಿಯಾಮ್‌ ಲಿವಿಂಗ್‌ಸ್ಟೋನ್‌, ಭನುಕ ರಾಜಪಕ್ಸ, ಶಾರುಖ್‌ ಖಾನ್‌, ರಾಜ್ ಬಾವಾ, ಒಡೆಯನ್‌ ಸ್ಮಿತ್‌, ಹಪ್ರೀತ್ ಬ್ರಾರ್‌, ಸಂದೀಪ್ ಶರ್ಮಾ‌, ರಾಹುಲ್‌ ಚಹರ್‌, ಅಶ್‌ರ್‍ದೀಪ್ ಸಿಂಗ್‌.

Ayush Badoni: ಮಹಿಳೆಯ ತಲೆಗೆ ಬಡಿದ ಜೂ. ಎಬಿಡಿ ಬದೋನಿ ಸಿಡಿಸಿದ ಸಿಕ್ಸ್: ಮುಂದೇನಾಯಿತು ನೋಡಿ

IPL 2022 Point Table: ಆರೆಂಜ್ ಕ್ಯಾಪ್ ಆರ್​​ಸಿಬಿ ಬ್ಯಾಟರ್ ಕೈಯಲ್ಲಿ ಭದ್ರ: ಪಾಯಿಂಟ್ ಟೇಬಲ್​​ ಹೇಗಿದೆ?