Karnataka Ranji Team: ಕರ್ನಾಟಕ ಸಂಭಾವ್ಯ ರಣಜಿ ತಂಡ ಪ್ರಕಟ: ಕೆಎಲ್ ರಾಹುಲ್, ಮಾಯಂಕ್ಗೆ ಸ್ಥಾನ
Karnataka Ranji: ಕರ್ನಾಟಕ 28 ಸದಸ್ಯರ ಬಳಗ ಹೀಗಿದೆ: ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಕರುಣ್ ನಾಯರ್, ದೇವದತ್ ಪಡಿಕ್ಕಲ್, ಆರ್. ಸಮರ್ಥ್, ಡಿ. ನಿಶ್ಚಲ್, ಅಭಿನವ್ ಮನೋಹರ್, ಕೆ.ವಿ. ಸಿದ್ಧಾರ್ಥ್.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮುಂಬರುವ ರಣಜಿ ಟ್ರೋಫಿಗಾಗಿ ಕರ್ನಾಟಕ ತಂಡದ ಸಂಭಾವ್ಯ ಸದಸ್ಯರ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 28 ಸದಸ್ಯರನ್ನು ಒಳಗೊಂಡಿರುವ ಈ ಬಳಗದಲ್ಲಿ ಟೀಮ್ ಇಂಡಿಯಾ ಪರ ಆಡುತ್ತಿರುವ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಹೆಸರು ಕೂಡ ಇರುವುದು ವಿಶೇಷ. ಭಾರತದ ದಕ್ಷಿಣ ಆಫ್ರಿಕಾ ಸರಣಿ ಜನವರಿ 23 ರಂದು ಕೊನೆಗೊಳ್ಳಲಿದ್ದು, ಹೀಗಾಗಿ ರಾಹುಲ್ ಮತ್ತು ಮಯಾಂಕ್ ಅವರ ಹೆಸರನ್ನು ರಣಜಿ ಟೂರ್ನಿಗೆ ಪರಿಗಣಿಸಲಾಗಿದೆ. ಅದರಂತೆ ಈ ಇಬ್ಬರು ಆಟಗಾರರು ಟೀಮ್ ಇಂಡಿಯಾದಿಂದ ಹೊರಗುಳಿದರೆ ಮೊದಲೆರಡು ಲೀಗ್ ಪಂದ್ಯಗಳ ಬಳಿಕ ಕರ್ನಾಟಕ ತಂಡವನ್ನು ಸೇರಿಕೊಳ್ಳಬಹುದು.
ಇನ್ನು ಅಂಡರ್-19 ಟೀಮ್ ಇಂಡಿಯಾದಲ್ಲಿ ಆಡುತ್ತಿರುವ ಅನೀಶ್ವರ್ ಗೌತಮ್, ಜೂನಿಯರ್ ವಿಕೆಟ್ ಕೀಪರ್ ಬ್ಯಾಟರ್ ಕೃತಿಕ್ ಕೃಷ್ಣಗೂ ಸಂಭಾವ್ಯ ತಂಡದಲ್ಲಿ ಸ್ಥಾನ ನೀಡಲಾಗಿದ್ದು, ಇದರ ಜೊತೆಗೆ ಅನುಭವಿ ಆಟಗಾರರಾದ ಕೆಸಿ ಕಾರ್ಯಪ್ಪ, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ವಿಜಯ್ ಹಜಾರೆ ಟೂರ್ನಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಡಿದ ಆಟಗಾರರನ್ನು ಸಂಭಾವ್ಯ ಬಳಗಕ್ಕೆ ಆಯ್ಕೆ ಮಾಡಲಾಗಿದೆ.
ಸೈಯದ್ ಮುಷ್ತಾಕ್ ಅಲಿ ಟೂರ್ನಿ ಹಾಗೂ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿದ್ದ ಮನೀಷ್ ಪಾಂಡೆ ಕರ್ನಾಟಕ ರಣಜಿ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಜನವರಿ 13 ರಂದು ಕೋಲ್ಕತ್ತಾದಲ್ಲಿ ಉತ್ತರಾಖಂಡ ವಿರುದ್ಧ ಆಡುವ ಮೂಲಕ ಕರ್ನಾಟಕ ರಣಜಿ ಟ್ರೋಫಿ ಅಭಿಯಾನ ಆರಂಭಿಸಲಿದೆ. ಎಲೈಟ್ ಗ್ರೂಪ್ನಲ್ಲಿರುವ ಕರ್ನಾಟಕ ಉಳಿದ ಪಂದ್ಯಗಳನ್ನು ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಮಹಾರಾಷ್ಟ್ರ ವಿರುದ್ದ ಆಡಲಿದೆ. ಸದ್ಯ 28 ಸದಸ್ಯರ ಬಳಗವನ್ನು ಆಯ್ಕೆ ಮಾಡಲಾಗಿದ್ದು, ಇದರಿಂದ 18 ಸದಸ್ಯರ ಅಂತಿಮ ತಂಡವನ್ನು ಶೀಘ್ರದಲ್ಲೇ ಆಯ್ಕೆ ಮಾಡಲಾಗುತ್ತದೆ.
ಕರ್ನಾಟಕ 28 ಸದಸ್ಯರ ಬಳಗ ಹೀಗಿದೆ: ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಕರುಣ್ ನಾಯರ್, ದೇವದತ್ ಪಡಿಕ್ಕಲ್, ಆರ್. ಸಮರ್ಥ್, ಡಿ. ನಿಶ್ಚಲ್, ಅಭಿನವ್ ಮನೋಹರ್, ಕೆ.ವಿ. ಸಿದ್ಧಾರ್ಥ್, ಕೆ.ವಿ. ಅನೀಶ್, ಅನೀಶ್ವರ್ ಗೌತಮ್, ವಿಶಾಲ್ ಒನತ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ಪ್ರವೀಣ ದುಬೆ, ಕೆ.ಸಿ. ಕಾರ್ಯಪ್ಪ, ರಿತೇಶ್ ಭಟ್ಕಳ್, ಶುಭಾಂಗ್ ಹೆಗಡೆ, ಪ್ರಸಿದ್ಧ್ ಕೃಷ್ಣ, ರೋನಿತ್ ಮೋರೆ, ವೈಶಾಖ ವಿಜಯಕುಮಾರ್, ಎಂ. ವೆಂಕಟೇಶ್, ವಿದ್ಯಾಧರ್ ಪಾಟೀಲ, ಶರತ್ ಶ್ರೀನಿವಾಸ್, ಬಿ.ಆರ್. ಶರತ್, ಕೃತಿಕ್ ಕೃಷ್ಣ, ಚಿನ್ಮಯ್ ಎನ್.
ಇದನ್ನೂ ಓದಿ: ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
(KL Rahul, Mayank Agarwal among Karnataka Ranji probables)