IPL 2023: ಹೊಸ ಅವತಾರದಲ್ಲಿ ಕಾಣಿಸಿಕೊಂಡು ಬೆಂಗಾಳಿಯನ್ನರ ಮನಗೆದ್ದ ಕ್ರಿಸ್ ಗೇಲ್
Chris Gayle Video: ಕ್ರೀಸ್ ಗೇಲ್ ಐಪಿಎಲ್ನಲ್ಲಿ ಒಟ್ಟು ಮೂರು ತಂಡಗಳ ಪರ ಆಡಿದ್ದಾರೆ. 2009 ರಲ್ಲಿ ಕೆಕೆಆರ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಗೇಲ್ 2 ಸೀಸನ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು.

IPL 2023: ಏಪ್ರಿಲ್ 15, 2023..ಇಂದು ಸೌರಮಾನ ಯುಗಾದಿ..ಇತ್ತ ಕೇರಳದಲ್ಲಿ ಹೊಸ ವರ್ಷವಾಗಿ ವಿಷು ಹಬ್ಬವನ್ನು ಆಚರಿಸುತ್ತಿದ್ದರೆ, ಅತ್ತ ಬಂಗಾಳದಲ್ಲಿ ಪೊಹೆಲಾ ಬೋಯಿಶಾಕ್ ಹಬ್ಬ ಆಚರಿಸಲಾಗುತ್ತಿದೆ. ಅಂದರೆ ಇದು ಉಭಯ ರಾಜ್ಯಗಳಲ್ಲೂ ಹಿಂದೂ ಸಾಂಸ್ಕೃತಿಯಂತೆ ಹೊಸ ವರ್ಷವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಇದೇ ದಿನದಂದು ಬೆಂಗಾಳಿಯಲ್ಲಿ ಹೊಸ ವರ್ಷದ ಶುಭಾಶಯ ತಿಳಿಸುವ ಮೂಲಕ ಕ್ರಿಸ್ ಗೇಲ್ (Chris Gayle) ಇದೀಗ ಎಲ್ಲರ ಮನಗೆದ್ದಿದ್ದಾರೆ.
ಕ್ರಿಸ್ ಗೇಲ್ ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಇದಾದ ಬಳಿಕವಷ್ಟೇ ಅವರು ಆರ್ಸಿಬಿ ಪರ ಕಣಕ್ಕಿಳಿದಿದ್ದರು. ಇದೀಗ ಜಿಯೋ ಸಿನಿಮಾದಲ್ಲಿ ವೀಕ್ಷಕ ವಿಶ್ಲೇಷಣೆಗಾರನಾಗಿ ಹೊಸ ಇನಿಂಗ್ಸ್ ಆರಂಭಿಸಿರುವ ಗೇಲ್ ಬೆಂಗಾಳಿ ಹೊಸ ವರ್ಷದಂದು ದೇಶಿ ಅವತಾರದಲ್ಲಿ ಕಾಣಿಸಿಕೊಂಡಿದ್ದರು.
ಕುರ್ತಾ ಪೈಜಾಮದಲ್ಲಿ ಕಾಣಿಸಿಕೊಂಡ ಕ್ರಿಸ್ ಗೇಲ್, “ಆಮಿ ಕ್ರಿಸ್ ಗೇಲ್. ಹಲೋ ಕೋಲ್ಕತ್ತಾ. ಸುಭೋ ನಬಾಬೋರ್ಶೋ. ಕೋಲ್ಕತ್ತಾ, ಅಮಿ ತೋಮಯ್ ಭಲೋಬಾಶಿ (ನಾನು ಕ್ರಿಸ್ ಗೇಲ್, ಹೊಸ ವರ್ಷದ ಶುಭಾಶಯಗಳು. ಕೋಲ್ಕತ್ತಾ, ನಾನು ನಿನ್ನನ್ನು ಪ್ರೀತಿಸುತ್ತೇನೆ) ಎಂದು ಬೆಂಗಾಳಿಯಲ್ಲಿ ಶುಭ ಕೋರಿದರು.
ಇದನ್ನೂ ಓದಿ: Virat Kohli: ಐಪಿಎಲ್ನಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ
ಇದೀಗ ಕ್ರಿಸ್ ಗೇಲ್ ಅವರ ಬೆಂಗಾಳಿ ಶುಭಾಶಯದ ವಿಡಿಯೋವನ್ನು ಜಿಯೋ ಸಿನಿಮಾ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ ಮಾಜಿ ಕೆಕೆಆರ್ ತಂಡದ ಆಟಗಾರನ ಶುಭಾಶಯಕ್ಕೆ ಅಭಿಮಾನಿಗಳು ಹಾರೈಕೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.
Here’s the Universe Boss wishing everyone, Shubho Noboborsho ?
Watch him in the #AJIOMatchCentreLIVE – from 2:30 PM ? on #JioCinema – LIVE & FREE across all telecom operators ?#IPLonJioCinema | @henrygayle pic.twitter.com/mvP2JcfYmM
— JioCinema (@JioCinema) April 15, 2023
KKR ತಂಡದ ಮಾಜಿ ಆಟಗಾರ ಗೇಲ್:
ಕ್ರೀಸ್ ಗೇಲ್ ಐಪಿಎಲ್ನಲ್ಲಿ ಒಟ್ಟು ಮೂರು ತಂಡಗಳ ಪರ ಆಡಿದ್ದಾರೆ. 2009 ರಲ್ಲಿ ಕೆಕೆಆರ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಗೇಲ್ 2 ಸೀಸನ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಇದಾದ ಬಳಿಕ 2011 ರಲ್ಲಿ ಆರ್ಸಿಬಿ ಪರ ಆಡಿದ್ದರು. ಆ ಬಳಿಕ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯುವ ಮೂಲಕ 2021 ರಲ್ಲಿ ಐಪಿಎಲ್ ಕೆರಿಯರ್ ಅಂತ್ಯಗೊಳಿಸಿದ್ದರು.




