World Test Championship: ಕ್ರಿಕೆಟ್ ಕಾಶಿ ಲಾರ್ಡ್​​ನಲ್ಲಿ 2023ಕ್ಕೆ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್ ಫೈನಲ್

| Updated By: Vinay Bhat

Updated on: Jun 04, 2022 | 11:06 AM

ಮುಂದಿನ ವರ್ಷ 2023 ರಲ್ಲಿ ಈ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ICC) ಇದಕ್ಕಾಗಿ ಈಗಾಗಲೇ ಕೆಲಸವನ್ನು ಪ್ರಾರಂಭಿಸಿದೆಯಂತೆ.

World Test Championship: ಕ್ರಿಕೆಟ್ ಕಾಶಿ ಲಾರ್ಡ್​​ನಲ್ಲಿ 2023ಕ್ಕೆ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್ ಫೈನಲ್
Lords Stadium
Follow us on

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ (ICC World Test Championship)​ ಎರಡನೇ ಆವೃತ್ತಿಯ ಫೈನಲ್ ಪಂದ್ಯವನ್ನು ಕ್ರಿಕೆಟ್ ಕಾಶಿ ಲಾರ್ಡ್ಸ್​​ ಮೈದಾನದಲ್ಲಿ ಆಯೋಜಿಸಲಾಗಿದೆ. ಮುಂದಿನ ವರ್ಷ 2023 ರಲ್ಲಿ ಈ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ICC) ಇದಕ್ಕಾಗಿ ಈಗಾಗಲೇ ಕೆಲಸವನ್ನು ಪ್ರಾರಂಭಿಸಿದೆಯಂತೆ. “ಇದು ಲಾರ್ಡ್ಸ್‌ಗೆ (Lords) ನಿಗದಿಪಡಿಸಲಾಗಿದೆ ಎಂದು ನಾನು ಭಾವಿಸುತ್ತೇನೆ, ನಮ್ಮ ಉದ್ದೇಶ ಕೂಡ ಇದೇ ಆಗಿತ್ತು,” ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಬಿಬಿಸಿಯ ಟೆಸ್ಟ್ ಪಂದ್ಯದ ವಿಶೇಷ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ತೋರಿ ಮಿಂಚಿತ್ತು. ಹೀಗಿದ್ದೂ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ಗೆ ಶರಣಾಗುವ ಮೂಲಕ ಐಸಿಸಿ ಮೇಸ್‌ ಗೆಲ್ಲುವ ಅವಕಾಶವನ್ನು ಕೈಚೆಲ್ಲಿ ನಿರಾಸೆ ಅನುಭವಿಸಿತು. ಎರಡನೇ ಆವೃತ್ತಿಯ ಅಂದರೆ 2021-23ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ಒಟ್ಟು 6 ಸರಣಿಗಳನ್ನು ಆಡಲಿದೆ. ತವರಿನಲ್ಲಿ ಮೂರು ಟೆಸ್ಟ್‌ ಸರಣಿ ಹಾಗೂ ತವರಿನಾಚೆ 3 ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಆಡಲಿದೆ.

ಇನ್ನು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ 2021-23ರ ಅವಧಿಯಲ್ಲಿ ಅಂಕಗಳ ಹಂಚಿಕೆ ಮಾದರಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಬದಲಾಯಿಸಿದೆ. ಇನ್ನು ಮುಂದೆ ಪ್ರತಿ ಟೆಸ್ಟ್‌ಗೆ ಗರಿಷ್ಠ 12 ಅಂಕಗಳು ಇರಲಿವೆ. ಪಂದ್ಯ ಗೆದ್ದರೆ 12 ಅಂಕ, ಟೈಗೆ 6 ಹಾಗೂ ಡ್ರಾಗೆ 4 ಅಂಕಗಳು ದೊರೆಯಲಿವೆ. ತಂಡಗಳು ಸ್ಪರ್ಧಿಸುವ ಒಟ್ಟು ಅಂಕಗಳ ಪೈಕಿ ಗಳಿಸಿದ ಅಂಕಗಳ ಪ್ರತಿಶತದ ಆಧಾರದ ಮೇಲೆ ಸ್ಥಾನಗಳ ನಿರ್ಧಾರವಾಗಲಿವೆ. ಈ ಮೊದಲು ಪ್ರತಿ ಸರಣಿಗೆ 120 ಅಂಕಗಳನ್ನು ನಿಗದಪಡಿಸಲಾಗಿತ್ತು. ಸರಣಿಯಲ್ಲಿ 5 ಪಂದ್ಯವಿದ್ದರೂ 120 ಅಂಕ, 2 ಪಂದ್ಯವಿದ್ದರೂ 120 ಅಂಕಕ್ಕೆ ತಂಡಗಳು ಸ್ಪರ್ಧಿಸುತ್ತಿದ್ದವು. ಇದೀಗ ಐಸಿಸಿ ತನ್ನ ನಿಯಮಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ.

ಇದನ್ನೂ ಓದಿ
IND vs SA: ಆಫ್ರಿಕಾ ಆಟಗಾರರ ಕೋವಿಡ್ ಟೆಸ್ಟ್​ನಲ್ಲಿ ನೆಗೆಟಿವ್: ಫಿರೋಜ್‌ ಷಾ ಕೋಟ್ಲಾದಲ್ಲಿ ಭರ್ಜರಿ ಅಭ್ಯಾಸ
ENG vs NZ, 1st Test: ನ್ಯೂಜಿಲೆಂಡ್​ಗೆ ಮಿಚೆಲ್-ಬ್ಲಂಡೆಲ್ ಆಸರೆ: ಇಂಗ್ಲೆಂಡ್​ಗೆ ತಿರುಗೇಟು ನೀಡುತ್ತಿರುವ ಕೇನ್ ಪಡೆ
Asia Cup 2022: ಶ್ರೀಲಂಕಾ ಏಷ್ಯಾಕಪ್ ಆತಿಥ್ಯ ವಹಿಸಬೇಕೆಂದರೆ ಈ ಸರಣಿ ಯಶಸ್ವಿಯಾಗಲೇಬೇಕು..!
French Open 2022: ಜೆರೆವ್​ಗೆ ಇಂಜುರಿ; ದಾಖಲೆಯ 14ನೇ ಬಾರಿಗೆ ಫ್ರೆಂಚ್ ಓಪನ್ ಫೈನಲ್‌ ತಲುಪಿದ ರಾಫೆಲ್ ನಡಾಲ್!

9 ತಂಡಗಳು ತಲಾ 6 ಟೆಸ್ಟ್ ಸರಣಿಗಳನ್ನು ಆಡಲಿವೆ. ಈ ಪೈಕಿ ತವರಿನಲ್ಲಿ 3 ಹಾಗೂ ತವರಿನಾಚೆ 3 ಟೆಸ್ಟ್‌ ಸರಣಿಗಳನ್ನು ಆಡಲಿವೆ. ಎರಡನೇ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಇಂಗ್ಲೆಂಡ್ ತಂಡವು ಅತಿಹೆಚ್ಚು ಟೆಸ್ಟ್‌ ಪಂದ್ಯ(21)ಗಳನ್ನು ಆಡಲಿದೆ. ಆನಂತರ ಟೀಂ ಇಂಡಿಯಾ(19), ಆಸ್ಟ್ರೇಲಿಯಾ(18), ದಕ್ಷಿಣ ಆಫ್ರಿಕಾ(15), ಪಾಕಿಸ್ತಾನ(14) ಹಾಗೂ ಹಾಲಿ ಚಾಂಪಿಯನ್‌ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ತಲಾ 13 ಟೆಸ್ಟ್ ಪಂದ್ಯಗಳನ್ನು ಆಡಲಿವೆ.

ಸದ್ಯದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪಾಯಿಂಟ್ ಟೇಬಲ್​ನಲ್ಲಿ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಲ್ಲಿದೆ. ಆಡಿದ ಎರಡು ಸರಣಿಗಳಲ್ಲಿ 3 ಡ್ರಾ ಆದರೆ ಐದು ಪಂದ್ಯಗಳಲ್ಲಿ ಗೆದ್ದು ಬೀಗಿದ್ದಾರೆ. 72 ಪಾಯಿಂಟ್ ಸಂಪಾದಿಸಿದೆ. ದ್ವಿತೀಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡವಿದ್ದು 60 ಅಂಕ ಹೊಂದಿದೆ. ಮೂರನೇ ಸ್ಥಾನದಲ್ಲಿ ಭಾರತವಿದೆ. ಟೀಮ್ ಇಂಡಿಯಾ 4 ಸರಣಿಗಳನ್ನು ಆಡಿದೆ. ಇದರಲ್ಲಿ 2 ಡ್ರಾ, ತಲಾ ಮೂರು ಸೋಲು ಹಾಗೂ ಗೆಲುವು ಕಂಡಿದೆ. 77 ಅಂಕ ಸಂಪಾದಿಸಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:06 am, Sat, 4 June 22