ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಹೊಸ ತಂಡವಾಗಿರಬಹುದು ಆದರೆ ಐಪಿಎಲ್ 2022 ರ ಹರಾಜಿನಲ್ಲಿ (IPL 2022 Auction) ಅವರಿಗೆ ಅನುಭವದ ಕೊರತೆಯಿಲ್ಲ ಎಂದು ಸಾಬೀತುಪಡಿಸಿದ್ದಾರೆ. ಮಾರ್ಗದರ್ಶಕ ಗೌತಮ್ ಗಂಭೀರ್ ನೇತೃತ್ವದಲ್ಲಿ, ಲಕ್ನೋ (LSG IPL 2022 Auction) ಅತ್ಯಂತ ಸಮತೋಲಿತ ತಂಡವನ್ನು ಖರೀದಿಸಿದೆ. ಈ ತಂಡವು ಯಾವ ರೀತಿಯ ಆಟಗಾರರನ್ನು ಖರೀದಿಸಿದೆಯೆಂದರೆ, ಅದರ ಪ್ಲೇಯಿಂಗ್ XI ತುಂಬಾ ಸಮತೋಲಿತವಾಗಿ ಕಾಣುತ್ತಿದೆ. ತಂಡದ ಕಮಾಂಡ್ ಕೆಎಲ್ ರಾಹುಲ್ ಕೈಯಲ್ಲಿದೆ ಮತ್ತು ಮಾರ್ಕ್ ಸ್ಟೊಯಿನಿಸ್ ಮತ್ತು ರವಿ ಬಿಷ್ಣೋಯ್ ಅವರನ್ನು ಲಕ್ನೋ ಡ್ರಾಫ್ಟ್‌ನಲ್ಲಿ ಸೇರಿಸಲಾಗಿದೆ. ಇದರ ನಂತರ, ಈ ಹೊಸ ತಂಡವು ಹರಾಜಿನಲ್ಲಿ ಅತ್ಯುತ್ತಮ ವೇಗದ ಬೌಲರ್‌ಗಳು, ವಿಕೆಟ್‌ಕೀಪರ್‌ಗಳು ಮತ್ತು ಆಲ್‌ರೌಂಡರ್‌ಗಳನ್ನು ಖರೀದಿಸಿದೆ. ಈ ತಂಡ ಬ್ಯಾಟ್ಸ್‌ಮನ್‌ಗಳನ್ನು ಖರೀದಿಸುವಲ್ಲಿ ಹಿಂದೆ ಬಿದ್ದಿಲ್ಲ, ಅದಕ್ಕಾಗಿಯೇ ಲಕ್ನೋ ಸೂಪರ್‌ಜೈಂಟ್ಸ್ ಅನ್ನು ಅತ್ಯಂತ ಸಮತೋಲಿತ ತಂಡವೆಂದು ಪರಿಗಣಿಸಲಾಗಿದೆ.
ಲಕ್ನೋ ಸೂಪರ್‌ಜೈಂಟ್ಸ್‌ನ ಆಟಗಾರರ ಬಗ್ಗೆ ಮಾತನಾಡುವುದಾದರೆ, ಅವರು ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ ರೂಪದಲ್ಲಿ ಅತ್ಯುತ್ತಮ ಆಲ್‌ರೌಂಡರ್‌ಗಳನ್ನು ಖರೀದಿಸಿದ್ದಾರೆ. ಇವರಲ್ಲದೆ, ಸೂಪರ್‌ಜೈಂಟ್ಸ್ ಮಾರ್ಕ್ ವುಡ್ ಮತ್ತು ಅವೇಶ್ ಖಾನ್ ಅವರಂತಹ ಅದ್ಭುತ ವೇಗದ ಬೌಲರ್‌ಗಳನ್ನು ಖರೀದಿಸಿದೆ. ಜೊತೆಗೆ ಕ್ವಿಂಟನ್ ಡಿ ಕಾಕ್ ಅವರಂತಹ ಆಟಗಾರನನ್ನು ಅತ್ಯಂತ ಕಡಿಮೆ ಬೆಲೆಗೆ ಲಕ್ನೋ ಖರೀದಿಸಿದೆ. ಕೃಷ್ಣಪ್ಪ ಗೌತಮ್ ಅವರಂತಹ ಆಲ್ ರೌಂಡರ್ ಕೂಡ 1 ಕೋಟಿಗಿಂತ ಕಡಿಮೆ ಮೊತ್ತಕ್ಕೆ ತಂಡಕ್ಕೆ ಸಿಕ್ಕಿದ್ದರು. ಲಕ್ನೋ ತಂಡದಲ್ಲಿ 5 ಬ್ಯಾಟ್ಸ್‌ಮನ್‌ಗಳನ್ನು ಇರಿಸಿಕೊಂಡಿದೆ. ಆಲ್‌ರೌಂಡರ್‌ಗಳ ಬಗ್ಗೆ ಮಾತನಾಡುವುದಾದರೆ, ಈ ತಂಡವು 8 ಆಲ್‌ರೌಂಡರ್‌ಗಳನ್ನು ಹೊಂದಿದ್ದು, ಅಲ್ಲದೆ ತಂಡದಲ್ಲಿ 8 ಬೌಲರ್‌ಗಳಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ಖರೀದಿಸಿದ ಆಟಗಾರರು
ಕೆಎಲ್ ರಾಹುಲ್ – 17 ಕೋಟಿ ರೂ
ಅವೇಶ್ ಖಾನ್ – 10 ಕೋಟಿ ರೂ
ಮಾರ್ಕಸ್ ಸ್ಟೊಯಿನಿಸ್ – 9.2 ಕೋಟಿ ರೂ
ಜೇಸನ್ ಹೋಲ್ಡರ್ – 8.75 ಕೋಟಿ ರೂ
ಕೃನಾಲ್ ಪಾಂಡ್ಯ – 8.25 ಕೋಟಿ ರೂ
ದೀಪಕ್ ಹೂಡಾ – 5.74 ಕೋಟಿ ರೂ
ಕ್ವಿಂಟನ್ ಡಿ ಕಾಕ್ – 6.75 ಕೋಟಿ ರೂ
ಮಾರ್ಕ್ ವುಡ್ – 7.5 ಕೋಟಿ ರೂ
ಮನೀಶ್ ಪಾಂಡೆ – 4.6 ಕೋಟಿ ರೂ
ರವಿ ಬಿಷ್ಣೋಯ್ – 4 ಕೋಟಿ ರೂ
ಅಂಕಿತ್ ರಜಪೂತ್ – 50 ಲಕ್ಷ ರೂ
ಕೆ ಗೌತಮ್ – 90 ಲಕ್ಷ ರೂ
ದುಷ್ಮಂತ ಚಮೀರ – 2 ಕೋಟಿ ರೂ
ಶಹಬಾಜ್ ನದೀಮ್ – 50 ಲಕ್ಷ ರೂ
ಮನನ್ ವೋಹ್ರಾ – 20 ಲಕ್ಷ ರೂ
ಮೊಹ್ಸಿನ್ ಖಾನ್ – 20 ಲಕ್ಷ ರೂ
ಆಯುಷ್ ಬಡೋನಿ – 20 ಲಕ್ಷ ರೂ
ಕರಣ್ ಶರ್ಮಾ – 20 ಲಕ್ಷ ರೂ
ಕೈಲ್ ಮೈಯರ್ಸ್ – 20 ಲಕ್ಷ ರೂ
ಎವಿನ್ ಲೂಯಿಸ್ – 2 ಕೋಟಿ ರೂ
ಮಯಾಂಕ್ ಯಾದವ್ – 20 ಲಕ್ಷ ರೂ
ಲಕ್ನೋ ಬ್ಯಾಟ್ಸ್‌ಮನ್‌ಗಳು- ಕೆಎಲ್ ರಾಹುಲ್, ಮನೀಶ್ ಪಾಂಡೆ, ಕ್ವಿಂಟನ್ ಡಿ ಕಾಕ್, ಮನನ್ ವೋಹ್ರಾ ಮತ್ತು ಎವಿನ್ ಲೂಯಿಸ್.
ಆಲ್ ರೌಂಡರ್‌ಗಳು- ಮಾರ್ಕಸ್ ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ಕರ್ಣ್ ಶರ್ಮಾ, ಜೇಸನ್ ಹೋಲ್ಡರ್, ಕೈಲ್ ಮೇಯರ್ಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ ಮತ್ತು ಆಯುಷ್ ಬಡೋನಿ,
ಬೌಲರ್‌ಗಳು – ರವಿ ಬಿಷ್ಣೋಯ್, ಮಾರ್ಕ್ ವುಡ್, ದುಷ್ಮಂತ ಚಮೀರಾ, ಅಂಕಿತ್ ರಜಪೂತ್, ಮೊಹ್ಸಿನ್ ಖಾನ್, ಶಹಬಾಜ್ ನದೀಮ್, ಅವೇಶ್ ಖಾನ್, ಮಯಾಂಕ್ ಯಾದವ್
ಇದನ್ನೂ ಓದಿ:IPL 2022 Auction: ವೇದಿಕೆಯಲ್ಲೇ ಕುಸಿದು ಬಿದ್ದ ಹರಾಜುದಾರ ಹ್ಯೂ ಎಡ್ಮಿಡ್ಸ್! ಅರ್ಧಕ್ಕೆ ನಿಂತ ಐಪಿಎಲ್ ಹರಾಜು