AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SRH, IPL 2022 Auction: ಪೂರನ್, ಹೋಲ್ಡರ್‌ಗೆ ಪಾಕೆಟ್ಸ್ ಖಾಲಿ ಮಾಡಿದ ಹೈದರಾಬಾದ್; ಆಟಗಾರರ ಸಂಪೂರ್ಣ ಪಟ್ಟಿ

Sunrisers Hyderabad Auction Players: ಕಳೆದ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಪ್ರದರ್ಶನ ತೀರಾ ಕಳಪೆಯಾಗಿತ್ತು. ತಂಡವು ತನ್ನ ನಾಯಕನನ್ನು ಮಧ್ಯ ಋತುವಿನಲ್ಲಿ ಬದಲಾಯಿಸಿತು. ನಂತರ ನಾಯಕ ಡೇವಿಡ್ ವಾರ್ನರ್ ಬದಲಿಗೆ ಕೇನ್ ವಿಲಿಯಮ್ಸನ್ ಅವರನ್ನು ನಾಯಕನನ್ನಾಗಿ ಮಾಡಲಾಯಿತು.

SRH, IPL 2022 Auction: ಪೂರನ್, ಹೋಲ್ಡರ್‌ಗೆ ಪಾಕೆಟ್ಸ್ ಖಾಲಿ ಮಾಡಿದ ಹೈದರಾಬಾದ್; ಆಟಗಾರರ ಸಂಪೂರ್ಣ ಪಟ್ಟಿ
ಸನ್‌ರೈಸರ್ಸ್ ಹೈದರಾಬಾದ್
TV9 Web
| Updated By: ಪೃಥ್ವಿಶಂಕರ|

Updated on: Feb 14, 2022 | 10:03 PM

Share

ಕಳೆದ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ (Sunrisers Hyderabad) ಪ್ರದರ್ಶನ ತೀರಾ ಕಳಪೆಯಾಗಿತ್ತು. ತಂಡವು ತನ್ನ ನಾಯಕನನ್ನು ಮಧ್ಯ ಋತುವಿನಲ್ಲಿ ಬದಲಾಯಿಸಿತು. ನಂತರ ನಾಯಕ ಡೇವಿಡ್ ವಾರ್ನರ್ (David Warner) ಬದಲಿಗೆ ಕೇನ್ ವಿಲಿಯಮ್ಸನ್ (Kane Williamson) ಅವರನ್ನು ನಾಯಕನನ್ನಾಗಿ ಮಾಡಲಾಯಿತು. ಈ ಋತುವಿನಲ್ಲಿ ತಂಡದೊಂದಿಗೆ ಸುದೀರ್ಘ ಕಾಲ ಆಡುತ್ತಿದ್ದ ರಶೀದ್ ಖಾನ್ ಅವರನ್ನು ತಂಡವೂ ಉಳಿಸಿಕೊಳ್ಳಲಿಲ್ಲ. IPL 2022 ರ ಮೆಗಾ ಹರಾಜಿನಲ್ಲಿ (IPL 2022 Auction), ಈ ತಂಡವು ತಮ್ಮ ಆಯ್ಕೆಯ ಆಟಗಾರರ ಮೇಲೆ ಬೆಟ್ಟಿಂಗ್ ಆಡಿ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿದೆ. ತಂಡವು ಜೇಸನ್ ಹೋಲ್ಡರ್ ಅನ್ನು ಮತ್ತೊಮ್ಮೆ ತಮ್ಮೊಂದಿಗೆ ಇಟ್ಟುಕೊಂಡಿದೆ. ಆದರೆ ನಿಕೋಲಸ್ ಪೂರನ್ ಅವರನ್ನು 10 ಕೋಟಿಗೂ ಹೆಚ್ಚು ಪಾವತಿಸಿ ಖರೀದಿಸಲಾಗಿದೆ.

ಸನ್‌ರೈಸರ್ಸ್ ತಂಡವು ತನ್ನ ಕೆಲವು ಹಳೆಯ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಪ್ರಿಯಂ ಗಾರ್ಗ್ ಅವರಂತಹ ಹಳೆಯ ಆಟಗಾರರನ್ನು ಮತ್ತೊಮ್ಮೆ ಖರೀದಿಸಿದೆ.

IPL-2022 ಗಾಗಿ ಸನ್‌ರೈಸರ್ಸ್ ಹೈದರಾಬಾದ್ ಆಟಗಾರರ ಸಂಪೂರ್ಣ ಪಟ್ಟಿ

ವಾಷಿಂಗ್ಟನ್ ಸುಂದರ್ – ರೂ 8.75 ಕೋಟಿ ನಿಕೋಲಸ್ ಪೂರನ್ – ರೂ 10.75 ಕೋಟಿ ಟಿ.ನಟರಾಜನ್ – ರೂ 3.6 ಕೋಟಿ ಭುವನೇಶ್ವರ್ ಕುಮಾರ್ – ರೂ 4.20 ಕೋಟಿ ಪ್ರಿಯಮ್ ಗಾರ್ಗ್ – ರೂ 20 ಲಕ್ಷ ರಾಹುಲ್ ತ್ರಿಪಾಠಿ – ರೂ 8.50 ಕೋಟಿ ಅಭಿಷೇಕ್ ಶರ್ಮಾ – ರೂ 6.5 ಕೋಟಿ ಕಾರ್ತಿಕ್ ತ್ಯಾಗಿ – ರೂ 6.5 ಕೋಟಿ ಗೋಪಾಲ್ – 75 ಲಕ್ಷ ರೂ. ಜಗದೀಶ್ ಸುಚಿತ್ – 20 ಲಕ್ಷ ರೂ. ಏಡನ್ ಮಾರ್ಕ್ರಾಮ್ – 2.60 ಕೋಟಿ ರೂ. ಮಾರ್ಕೊ ಯಾನ್ಸನ್ – ರೂ. 4.20 ಕೋಟಿ ರೊಮಾರಿಯೋ ಶೆಫರ್ಡ್ – ರೂ. 7.75 ಕೋಟಿ ಸೀನ್ ಅಬಾಟ್ – ರೂ. 2.40 ಕೋಟಿ ಆರ್. ಸಮರ್ಥ್ – ರೂ. 20 ಲಕ್ಷ ಸೌರಭ್ ಸಿಂಗ್ – ರೂ. 20 ಲಕ್ಷ ವಿಷ್ಣು ವಿನೋದ್ – ರೂ. 50 ಲಕ್ಷ ಫಿಲಿಪ್ಸ್ – ರೂ. 1.5 ಕೋಟಿ ಫಜಲ್ಹಾಕ್ ಫಾರೂಕಿ- ರೂ. 50 ಲಕ್ಷ

ಇದನ್ನೂ ಓದಿ:RR, IPL 2022 Auction: ಬಲಿಷ್ಠ ಬ್ಯಾಟಿಂಗ್, ಪ್ರಬಲ ಬೌಲಿಂಗ್; ರಾಜಸ್ಥಾನ ಕಟ್ಟಿದ ಐಪಿಎಲ್ ತಂಡ ಹೇಗಿದೆ ಗೊತ್ತಾ?