IPL 2022 Auction: RCB ಯಾಕೆ ಬಲಿಷ್ಠ ತಂಡವೆಂದರೆ….!
IPL 2022 RCB: ಪ್ಲೇಯಿಂಗ್ 11 ರೂಪಿಸುವುದಾದರೂ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಶಹಬಾಜ್ ಅಹ್ಮದ್ಗೆ ಸ್ಥಾನ ಖಚಿತ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿನ ಮೂಲಕ ಆರ್ಸಿಬಿ ತಂಡವು ಒಟ್ಟು 19 ಆಟಗಾರರನ್ನು ಖರೀದಿಸಿದೆ. ಈ ಮೂಲಕ 22 ಸದಸ್ಯರ ಬಳಗದ ಹೊಸ ತಂಡವನ್ನು ಕಟ್ಟಿದೆ. ಮೇಲ್ನೋಟಕ್ಕೆ ಆರ್ಸಿಬಿ ಸಾಧಾರಣ ತಂಡವೆಂಬಂತೆ ಭಾಸವಾಗುತ್ತಿದ್ದರೂ, ತಂಡದ ಪ್ಲೇಯಿಂಗ್ ಇಲೆವೆನ್ ಕಾಂಬಿನೇಷನ್ನಲ್ಲಿ ಬಲಿಷ್ಠವಾಗಿರಲಿದೆ. ಏಕೆಂದರೆ ಈ ಬಾರಿ ಆರ್ಸಿಬಿ ತಂಡದಲ್ಲಿರುವ 9 ಆಟಗಾರರು ಈ ಕಳೆದ ಸೀಸನ್ನಲ್ಲೂ ತಂಡದಲ್ಲಿದ್ದವರೇ ಎಂಬುದು ವಿಶೇಷ. ಇದರಿಂದ ತಂಡದ ಹೊಂದಣಿಕೆಯು ಹೆಚ್ಚಿನ ಸಮತೋಲನದಿಂದ ಕೂಡಿರಲಿದೆ.
ಅದರಂತೆ ವಿರಾಟ್ ಕೊಹ್ಲಿ, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಸುಯಶ್ ಪ್ರಭುದೇಸಾಯಿ…ಇವರೆಲ್ಲರೂ ಕಳೆದ ಎರಡು ಸೀಸನ್ಗಳಲ್ಲಿ ತಂಡದಲ್ಲಿದ್ದರು. ಹೀಗಾಗಿ ಈ ಆಟಗಾರರ ನಡುವೆ ಹೆಚ್ಚಿನ ಹೊಂದಾಣಿಕೆ ಇರಲಿದೆ. ಹೀಗಾಗಿ ಇಲ್ಲಿ ಯಾರ ಸಾಮರ್ಥ್ಯ ಏನೆಂಬುದು ಕೂಡ ಕೋಚಿಂಗ್ ಸಿಬ್ಬಂದಿಗಳಿಗೂ ಗೊತ್ತಿರುತ್ತದೆ.
ಇನ್ನು ಪ್ಲೇಯಿಂಗ್ 11 ರೂಪಿಸುವುದಾದರೂ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಶಹಬಾಜ್ ಅಹ್ಮದ್ಗೆ ಸ್ಥಾನ ಖಚಿತ. ಹಾಗೆಯೇ ಮತ್ತೊಬ್ಬರನ್ನು ಆಯ್ಕೆ ಮಾಡಿದರೆ ಫಿನ್ ಅಲೆನ್ ಅಥವಾ ವನಿಂದು ಹಸರಂಗ ಸ್ಥಾನ ಪಡೆಯಬಹುದು. ಅಂದರೆ ಇಲ್ಲಿ ಪ್ಲೇಯಿಂಗ್ 11 ನಲ್ಲಿ 6 ಮಂದಿ ಈಗಾಗಲೇ ಆರ್ಸಿಬಿ ತಂಡದಲ್ಲಿ ಇದ್ದವರೇ ಎಂಬುದು ಗಮನಿಸಬೇಕಾದ ಅಂಶ. ಇಲ್ಲಿ ಉಳಿದ 5 ಮಂದಿ ಮಾತ್ರ ಹೊಸಬರು ಬರಲಿದ್ದಾರೆ. ಈ ಐದು ಮಂದಿಯಲ್ಲಿ ಫಾಫ್ ಡುಪ್ಲೆಸಿಸ್ ಸ್ಥಾನ ಪಡೆಯಬಹುದು.
ಡುಪ್ಲೆಸಿಸ್ ಈಗಾಗಲೇ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಕಾರಣ ತಂಡದಲ್ಲಿ ಬೇಗನೆ ಹೊಂದಿಕೊಳ್ಳಲಿದ್ದಾರೆ. ಹಾಗೆಯೇ ಜೋಶ್ ಹ್ಯಾಝಲ್‌ವುಡ್ ಅವರಿಗೆ ಮ್ಯಾಕ್ಸ್‌ವೆಲ್ ಆತ್ಮೀಯ. ಇನ್ನು ಕೊಹ್ಲಿಯನ್ನೂ ಕೂಡ ಹತ್ತಿರದಿಂದ ಬಲ್ಲವರು. ಫಾಫ್ ಹಾಗೂ ಹ್ಯಾಝಲ್‌ವುಡ್ ಕೂಡ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯುವುದು ಖಚಿತ ಎನ್ನಬಹುದು. ಹಾಗೆಯೇ ದಿನೇಶ್ ಕಾರ್ತಿಕ್ ಕೊಹ್ಲಿ ಹಾಗೂ ಟೀಮ್ ಇಂಡಿಯಾದ ಇತರೆ ಆಟಗಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರಂತೆ ಆರ್ಸಿಬಿ ಉತ್ತಮ ಹೊಂದಾಣಿಕೆಯ ಪ್ಲೇಯಿಂಗ್ 11 ಅನ್ನು ರೂಪಿಸಿಕೊಳ್ಳಬಹುದು. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಒಂದು ತಂಡದಲ್ಲಿ ಉತ್ತಮ ಆಟಗಾರರಿದ್ದರೆ ಮಾತ್ರ ಸಾಕಾಗುವುದಿಲ್ಲ, ಬದಲಾಗಿ ಹೊಂದಾಣಿಕೆ ಕೂಡ ಇರಬೇಕಾಗುತ್ತದೆ.
ಅಷ್ಟೇ ಯಾಕೆ ಆರ್ಸಿಬಿ ತಂಡದಲ್ಲಿ 9 ಆಲ್ರೌಂಡರ್ಗಳಿದ್ದಾರೆ. ಇವರಲ್ಲಿ ಐವರು ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲಿದ್ದಾರೆ. ಇಲ್ಲಿ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಮೆಗಾ ಹರಾಜಿನಲ್ಲಿ ತಂಡದ ಹೊಂದಾಣಿಕೆಗೆ ಹೆಚ್ಚಿನ ಒತ್ತು ನೀಡಿದೆ. ಅಷ್ಟೇ ಅಲ್ಲದೆ ಆಯಾ ಕ್ರಮಾಂಕಕ್ಕೆ ಅನುಗುಣವಾಗಿ ಆಟಗಾರರ ಬಿಡ್ಡಿಂಗ್ ನಡೆಸಿರುವುದು ಸ್ಪಷ್ಟ. ಹೀಗಾಗಿ ಆರ್ಸಿಬಿ ತಂಡವು ಪ್ಲೇಯಿಂಗ್ 11 ಆಯ್ಕೆಯ ಮೂಲಕ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ವಿದೇಶಿ ಬ್ಯಾಟರ್ಸ್: ಫಾಫ್ ಡು ಪ್ಲೆಸಿಸ್ ಮತ್ತು ಫಿನ್ ಅಲೆನ್
ಭಾರತೀಯ ಬ್ಯಾಟರ್: ವಿರಾಟ್ ಕೊಹ್ಲಿ
ಭಾರತೀಯ ವಿಕೆಟ್ ಕೀಪರ್‌ಗಳು: ಅನುಜ್ ರಾವತ್, ದಿನೇಶ್ ಕಾರ್ತಿಕ್ ಮತ್ತು ಲುವ್ನಿತ್ ಸಿಸೋಡಿಯಾ
ವಿದೇಶಿ ಆಲ್‌ರೌಂಡರ್‌ಗಳು: ಡೇವಿಡ್ ವಿಲ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶೆರ್ಫೇನ್ ರುದರ್‌ಫೋರ್ಡ್ ಮತ್ತು ವನಿಂದು ಹಸರಂಗ
ಭಾರತದ ಆಲ್‌ರೌಂಡರ್‌ಗಳು: ಅನೀಶ್ವರ್ ಗೌತಮ್, ಹರ್ಷಲ್ ಪಟೇಲ್, ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ
ವಿದೇಶಿ ವೇಗದ ಬೌಲರ್‌ಗಳು: ಜೋಶ್ ಹ್ಯಾಝಲ್‌ವುಡ್, ಜೇಸನ್ ಬೆಹ್ರೆನ್‌ಡಾರ್ಫ್
ಭಾರತದ ವೇಗದ ಬೌಲರ್‌ಗಳು: ಆಕಾಶ್ ದೀಪ್, ಚಮ ಮಿಲಿಂದ್, ಮೊಹಮ್ಮದ್ ಸಿರಾಜ್ ಮತ್ತು ಸಿದ್ಧಾರ್ಥ್ ಕೌಲ್
ಭಾರತದ ಸ್ಪಿನ್ನರ್: ಕರ್ಣ್ ಶರ್ಮಾ
ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?
ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..!
(IPL Auction 2022, RCB analysis)