
ಐಪಿಎಲ್ 19 (IPL 2026) ನೇ ಸೀಸನ್ನ ಮೊದಲ ಹಂತದ ಐದನೇ ಮತ್ತು ಕೊನೆಯ ಪಂದ್ಯ ಇಂದು ಬುಧವಾರ, ಏಪ್ರಿಲ್ 1 ರಂದು ನಡೆಯಲಿದೆ. ಈ ಸೀಸನ್ನ ಐದನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು (LSG vs DC) ಎದುರಿಸುತ್ತಿದೆ. ಎರಡೂ ತಂಡಗಳಿಗೆ ಇದು ಈ ಸೀಸನ್ನ ಮೊದಲ ಪಂದ್ಯವಾಗಿದೆ. ಆದ್ದರಿಂದ, ಎರಡೂ ತಂಡಗಳು ಪಂದ್ಯವನ್ನು ಗೆದ್ದು ಸೀಸನ್ ಅನ್ನು ಗೆಲುವಿನೊಂದಿಗೆ ಆರಂಭಿಸಲು ಪ್ರಯತ್ನಿಸುತ್ತವೆ. ಇದರಲ್ಲಿ ಯಾವ ತಂಡ ಯಶಸ್ವಿಯಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಲಕ್ನೋ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಟಾಸ್ ಜೊತೆಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಪ್ರಕಟವಾಗಿದೆ. ಡೆಲ್ಲಿ ತಂಡದ ಆರಂಭಿಕರು ಬದಲಾಗಿದ್ದು, ಕನ್ನಡಿಗ ಕೆಎಲ್ ರಾಹುಲ್ ಜೊತೆಗೆ ಪಾತುಮ್ ನಿಸ್ಸಾಂಕ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದುವರೆಗೆ ಏಳು ಪಂದ್ಯಗಳನ್ನು ಆಡಿವೆ. ಇವುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ಮೂರು ಪಂದ್ಯಗಳನ್ನು ಗೆದ್ದಿದೆ. ಅಂದರೆ ಎರಡೂ ತಂಡಗಳು ಸಮಬಲದ ಹೋರಾಟದ ನೀಡಿವೆ. ಕಳೆದ ಸೀಸನ್‌ನಲ್ಲಿ ಎರಡು ಪಂದ್ಯಗಳನ್ನು ಆಡಲಾಗಿದ್ದು, ಡೆಲ್ಲಿ ಎರಡೂ ಪಂದ್ಯಗಳನ್ನು ಗೆದ್ದಿದೆ. 2024 ರ ಸೀಸನ್‌ನಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ಎರಡೂ ಪಂದ್ಯಗಳನ್ನು ಗೆದ್ದಿತ್ತು. ಅಂದರೆ, ಲಕ್ನೋ ಸೂಪರ್ ಜೈಂಟ್ಸ್ ಕೊನೆಯದಾಗಿ 2023 ರ ಐಪಿಎಲ್ನಲ್ಲಿ ಡೆಲ್ಲಿ ವಿರುದ್ಧ ಗೆದ್ದಿತ್ತು.
🚨 TOSS 🚨@delhicapitals won the toss against @lucknowipl and will field first
Updates ▶️ https://t.co/lfP7dRNKfg#TATAIPL | #KhelBindaas | #LSGvDC pic.twitter.com/IPtki9qcHm
— IndianPremierLeague (@IPL) April 1, 2026
ಡೆಲ್ಲಿ ಕ್ಯಾಪಿಟಲ್ಸ್: ಕೆಎಲ್ ರಾಹುಲ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ನಿತೀಶ್ ರಾಣಾ, ವಿಪ್ರಜ್ ನಿಗಮ್, ಅಕ್ಸರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಲುಂಗಿ ಎನ್‌ಗಿಡಿ, ಕುಲ್ದೀಪ್ ಯಾದವ್, ಟಿ.ನಟರಾಜನ್ ಮತ್ತು ಮುಖೇಶ್ ಕುಮಾರ್.
ಲಕ್ನೋ ಸೂಪರ್ ಜೈಂಟ್ಸ್: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ನಾಯಕ ಮತ್ತು ವಿಕೆಟ್ ಕೀಪರ್), ಆಯುಷ್ ಬಡೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹ್ಸಿನ್ ಖಾನ್, ಮೊಹಮ್ಮದ್ ಶಮಿ, ಅನ್ರಿಚ್ ನೋಕಿಯಾ ಮತ್ತು ಪ್ರಿನ್ಸ್ ಯಾದವ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:11 pm, Wed, 1 April 26