Maharaja Trophy 2024: ಮೈಸೂರಿಗೆ ಸುಲಭ ಜಯ; ಸೇಮಿಸ್ನಿಂದ ಹೊರಬಿದ್ದ ಶಿವಮೊಗ್ಗ
Maharaja Trophy 2024: ಮಹಾರಾಜ ಟ್ರೋಫಿಯ 27ನೇ ಪಂದ್ಯದಲ್ಲಿ ಮಂಗಳೂರು ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ ಮೈಸೂರು ವಾರಿಯರ್ಸ್ ತಂಡ ಸೆಮಿಫೈನಲ್ಗೆ ತನ್ನ ತಂಡವನ್ನು ಖಚಿತಪಡಿಸಿಕೊಂಡಿದೆ. ಇತ್ತ ಮೈಸೂರಿನ ಗೆಲುವಿನೊಂದಿಗೆ ಶಿವಮೊಗ್ಗ ಲಯನ್ಸ್ ತಂಡದ ಸೇಮಿಸ್ ಹಾದಿ ಅಧಿಕೃತವಾಗಿ ಮುಚ್ಚಿದೆ.
ಮಹಾರಾಜ ಟ್ರೋಫಿಯ 27ನೇ ಪಂದ್ಯದಲ್ಲಿ ಮಂಗಳೂರು ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ ಮೈಸೂರು ವಾರಿಯರ್ಸ್ ತಂಡ ಸೆಮಿಫೈನಲ್ಗೆ ತನ್ನ ತಂಡವನ್ನು ಖಚಿತಪಡಿಸಿಕೊಂಡಿದೆ. ಇತ್ತ ಮೈಸೂರಿನ ಗೆಲುವಿನೊಂದಿಗೆ ಶಿವಮೊಗ್ಗ ಲಯನ್ಸ್ ತಂಡದ ಸೇಮಿಸ್ ಹಾದಿ ಅಧಿಕೃತವಾಗಿ ಮುಚ್ಚಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಡ್ರ್ಯಾಗನ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 178 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ ತಂಡ ಇನ್ನು 8 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
178 ರನ್ ಟಾರ್ಗೆಟ್ ನೀಡಿದ ಮಂಗಳೂರು
ಪಂದ್ಯದಲ್ಲಿ ಟಾಸ್ ಗೆದ್ದ ಮೈಸೂರು ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ತಂಡಕ್ಕೆ ಮೊದಲ ವಿಕೆಟ್ಗೆ 22 ರನ್ಗಳ ಜೊತೆಯಾಟ ಸಿಕ್ಕಿತು. ಆರಂಭಿಕ ರೋಹನ್ ಪಟೇಲ್ 12 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ ನಾಯಕ ನಿಖಿನ್ ಜೋಶ್ ಕೂಡ 14 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಆದರೆ ಆ ಬಳಿಕ ಜೊತೆಯಾದ ಆರಂಭಿಕ ತುಶಾರ್ ಹಾಗೂ ಸಿದ್ಧಾರ್ಥ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ವೇಳೆ ತುಶಾರ್ 26 ಎಸೆತಗಳಲ್ಲಿ 43 ರನ್ಗಳ ಇನ್ನಿಂಗ್ಸ್ ಆಡಿ ವಿಕೆಟ್ ಒಪ್ಪಿಸಿದರೆ, ಸಿದ್ಧಾರ್ಥ್ ಮಾತ್ರ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಕೆಳಕ್ರಮಾಂಕದಲ್ಲಿ ಲೋಚನ್ 15 ಎಸೆತಗಳಲ್ಲಿ 25 ರನ್ ಹಾಗೂ ದರ್ಶನ್ 8 ಎಸೆತಗಳಲ್ಲಿ 18 ರನ್ ಬಾರಿಸಿ ತಂಡವನ್ನು 178 ರನ್ಗಳಿಗೆ ಕೊಂಡೊಯ್ದರು.
ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ಮೈಸೂರು ವಾರಿಯರ್ಸ್ಗೆ ಭರ್ಜರಿ ಗೆಲುವು..🥳#MaharajaTrophyOnStar #StarSportsKannada @maharaja_t20 pic.twitter.com/z17xVvokTL
— Star Sports Kannada (@StarSportsKan) August 28, 2024
ಕರುಣ್- ಕಾರ್ತಿಕ್ ಜೊತೆಯಾಟ
ಈ ಗುರಿ ಬೆನ್ನಟ್ಟಿದ ಮೈಸೂರು ತಂಡಕ್ಕೆ ಆರಂಭಿಕರು 42 ರನ್ಗಳ ಜೊತೆಯಾಟ ನೀಡಿದರು. ಇದರಲ್ಲಿ ಕಾರ್ತಿಕ್ ಅವರದ್ಧೇ ಭಾಗಶಃ ಪಾಲಿತ್ತು. ಆದಾಗ್ಯೂ ಮತ್ತೊಬ್ಬ ಆರಂಭಿಕ ಕಾರ್ತಿಕ್ 14 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ನಂತರ ಬಂದ ನಾಯಕ ಕರುಣ್ ನಾಯರ್ ಎಂದಿನಂತೆ ತಮ್ಮ ಅಧ್ಭುತ ಫಾರ್ಮ್ ಮುಂದುವರೆಸಿದರು. ಈ ಇಬ್ಬರು ಜೊತೆಯಾಗಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಈ ವೇಳೆ ಆರಂಭಿಕ ಕಾರ್ತಿಕ್ 52 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 69 ರನ್ ಬಾರಿಸಿ ಔಟಾದರು.
ಆದಾಗ್ಯೂ ನಾಯಕನ ಇನ್ನಿಂಗ್ಸ್ ಮುಂದುವರೆಸಿದ ಕರುಣ್, ಮನೋಜ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ವೇಳೆ ಕರುಣ್ 31 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 64 ರನ್ ಬಾರಿಸಿ ಔಟಾದರೆ, ಮನೋಜ್ ಭಾಂಡಿಗೆ 6 ಎಸೆತಗಳಲ್ಲಿ 10 ರನ್, ಸುಚಿತ್ 3 ಎಸೆತಗಳಲ್ಲಿ 9 ರನ್ ಬಾರಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Wed, 28 August 24