
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಮಾರಾಟ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಕೆಲ ಪ್ರಮುಖ ಕಂಪೆನಿಗಳು ಬಿಡ್ಡಿಂಗ್ನಿಂದ ಹಿಂದೆ ಸರಿದಿದ್ದು, ಇದೀಗ ಉಳಿದಿರುವುದು ಎರಡು ಗ್ರೂಪ್ಗಳು ಮಾತ್ರ ಎಂದು ವರದಿಯಾಗಿದೆ. ಆ ಗ್ರೂಪ್ಗಳೆಂದರೆ ರಂಜನ್ ಪೈ ಮತ್ತು ಕೆಕೆಆರ್ ಮತ್ತು EQT ಮತ್ತು ಪ್ರೇಮ್‌ಜಿ ಇನ್ವೆಸ್ಟ್.
ಮಣಿಪಾಲ್ ಗ್ರೂಪ್‌ನ ಅಧ್ಯಕ್ಷ ಡಾ. ರಂಜನ್ ಪೈ ಅವರು ಈ ಹಿಂದೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಆಸಕ್ತಿ ತೋರಿದ್ದರು. ಇದೀಗ ಅವರು ಅಮೆರಿಕದ ಕೆಕೆಆರ್ ಮತ್ತು ಸಿಂಗಾಪುರದ ಟೆಮಾಸೆಕ್ (Temasek) ಕಂಪನಿ ಜೊತೆಗೂಡಿ ಆರ್ಸಿಬಿ ತಂಡವನ್ನು ಖರೀದಿಸಲು ಮುಂದಾಗಿದ್ದಾರೆ.
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕನ್ನಡಿಗ ರಂಜನ್ ಪೈ ಅವರ ಪಾಲಾದರೆ ತಂಡದ ಹೆಸರಿನಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಪ್ರಸ್ತುತ ಇರುವ ಲೋಗೋ ಹಾಗೂ ಹೆಸರು ಬದಲಾಯಿಸಬಹುದು. ಏಕೆಂದರೆ ಆರ್ಸಿಬಿಗೆ ರಾಯಲ್ ಚಾಲೆಂಜರ್ಸ್ ಎಂಬ ಹೆಸರು ನೀಡಿದ್ದು ಮದ್ಯದ ಬ್ರಾಂಡ್ನ ಪಚಾರಕ್ಕಾಗಿ.
ಹೀಗಾಗಿ ರಂಜನ್ ಪೈ ಆರ್ಸಿಬಿ ಫ್ರಾಂಚೈಸಿಯನ್ನು ಖರೀದಿಸಿದರೆ ಮಹತ್ವದ ಬದಲಾವಣೆ ಕಂಡು ಬರುವುದು ಬಹುತೇಕ ಖಚಿತ. ಇಲ್ಲಿ ಯಾವೆಲ್ಲಾ ಬದಲಾವಣೆ ಕಂಡು ಬರಲಿದೆ ಎಂದು ನೋಡುವುದಾದರೆ…
ಇದನ್ನೂ ಓದಿ: 42 ಸಿಕ್ಸ್, 30 ಫೋರ್: ವಿಶ್ವ ದಾಖಲೆಯ ಚತುಃಶತಕ ಸಿಡಿಸಿದ ಸ್ಯಾಮ್ ಚೀಕ್
RCB ಫ್ರಾಂಚೈಸಿಯ ಆರಂಭಿಕ ಬಿಡ್ಡಿಂಗ್ ಮೊತ್ತ ಸುಮಾರು $2 ಬಿಲಿಯನ್ (ಅಂದಾಜು ₹18,500 ಕೋಟಿ) ಎಂದು ಘೋಷಿಸಲಾಗಿದೆ. EQT ಮತ್ತು ಪ್ರೇಮ್‌ಜಿ ಇನ್ವೆಸ್ಟ್ ಕಂಪೆನಿಯು $2.1 ಬಿಲಿಯನ್ ಬಿಡ್ ಮಾಡಿದೆ ಎಂದು ವರದಿಯಾಗಿದೆ. ಇನ್ನು ರಂಜನ್ ಪೈ ಮತ್ತು ಕೆಕೆಆರ್ (KKR) ಕೂಡ ಇದೇ ಮೊತ್ತದ ಅಸುಪಾಸಿನಲ್ಲಿ ಬಿಡ್ ಸಲ್ಲಿಸಿರುವ ಸಾಧ್ಯತೆಯಿದೆ. ಹೀಗಾಗಿ ಅಂತಿಮವಾಗಿ ಆರ್ಸಿಬಿ ಯಾರ ಪಾಲಾಗಲಿದೆ ಎಂಬುದೇ ಈಗ ಕುತೂಹಲ.
Published On - 10:02 am, Wed, 18 March 26