AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Manoj Bhandage IPL Auction 2025: ಕೊನೆಗೂ ಕನ್ನಡಿಗನನ್ನು ಖರೀದಿಸಲು ಮನಸು ಮಾಡಿದ ಆರ್​ಸಿಬಿ

Manoj Bhandage Auction Price: ವಾಸ್ತವವಾಗಿ ಮನೋಜ್ ಭಾಂಡಗೆ ಆರ್​ಸಿಬಿ ಸೇರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಆರ್​ಸಿಬಿ ತಂಡದಲ್ಲಿದ್ದರು. 2023 ರ ಹರಾಜಿನಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದ ಮನೋಜ್​ಗೆ ಕಳೆದ ಎರಡು ಆವೃತ್ತಿಗಳಲ್ಲಿ ಬೆಂಚ್ ಕಾಯುವ ಕೆಲಸವನ್ನು ಬಿಟ್ಟರೆ, ಮತ್ತ್ಯಾವ ಕೆಲಸವು ಇರಲಿಲ್ಲ.

Manoj Bhandage IPL Auction 2025: ಕೊನೆಗೂ ಕನ್ನಡಿಗನನ್ನು ಖರೀದಿಸಲು ಮನಸು ಮಾಡಿದ ಆರ್​ಸಿಬಿ
ಮನೋಜ್ ಭಾಂಡಗೆ
ಪೃಥ್ವಿಶಂಕರ
|

Updated on: Nov 25, 2024 | 8:14 PM

Share

ಐಪಿಎಲ್ ಮೆಗಾ ಹರಾಜು ಇನ್ನೇನು ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಇದೀಗ ದೇಶಿ ಆಟಗಾರರ ಹಾಗೂ ಬ್ಯಾಕ್ ಅಪ್ ಆಟಗಾರರ ಖರೀದಿಗಾಗಿ ಎಲ್ಲಾ ಫ್ರಾಂಚೈಸಿಗಳು ಮುಂದಾಗಿವೆ. ಇನ್ನು ನೆನ್ನಿಯಿಂದ ನಡೆಯುತ್ತಿರುವ ಈ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ಅಗತ್ಯವಿರುವ ಆಟಗಾರರ ಖರೀದಿಯ ಜೊತೆಗೆ ಸ್ಥಳೀಯ ಆಟಗಾರರ ಅಂದರೆ ಆ ತಂಡ ಪ್ರತಿನಿಧಿಸುವ ರಾಜ್ಯದ ಯುವ ಪ್ರತಿಭಾನ್ವೀತ ಆಟಗಾರರನ್ನು ತಮ್ಮ ತಂಡಕ್ಕೆ ಖರೀದಿಸಿವೆ. ಆದರೆ ಆರ್​ಸಿಬಿ ಮಾತ್ರ ಆದ್ಯಾಕೋ ನಿನ್ನೆಯಿಂದಲೂ ಈ ಕೆಲಸಕ್ಕೆ ಮುಂದಾಗಿರಲಿಲ್ಲ. ಆದರೀಗ ಹರಾಜಿನ ಕೊನೆಯ ದಿನದಂದು ಕನ್ನಡಿಗನನ್ನು ಖರೀದಿಸಲು ಆರ್​ಸಿಬಿ ಮನಸು ಮಾಡಿದೆ. ಅದರಂತೆ ರಾಯಚೂರಿನ ಹುಡುಗ ಮನೋಜ್ ಭಾಂಡಗೆ ಅವರನ್ನು ಮತ್ತೆ ಖರೀದಿಸುವ ಕೆಲಸವನ್ನು ಆರ್​ಸಿಬಿ ಮಾಡಿದೆ.

2ನೇ ಬಾರಿಗೆ ಆರ್​ಸಿಬಿ ಸೇರಿದ ಮನೋಜ್

ವಾಸ್ತವವಾಗಿ ಮನೋಜ್ ಭಾಂಡಗೆ ಆರ್​ಸಿಬಿ ಸೇರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಆರ್​ಸಿಬಿ ತಂಡದಲ್ಲಿದ್ದರು. 2023 ರ ಹರಾಜಿನಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದ ಮನೋಜ್​ಗೆ ಕಳೆದ ಎರಡು ಆವೃತ್ತಿಗಳಲ್ಲಿ ಬೆಂಚ್ ಕಾಯುವ ಕೆಲಸವನ್ನು ಬಿಟ್ಟರೆ, ಮತ್ತ್ಯಾವ ಕೆಲಸವು ಇರಲಿಲ್ಲ. ಈ ಎರಡೂ ಆವೃತ್ತಿಗಳಲ್ಲೂ ಮನೋಜ್​ಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ.

ಮೂಲ ಬೆಲೆಗೆ ಖರೀದಿ

ಆದರೀಗ ಮನೋಜ್ ಮೇಲೆ ಮತ್ತೆ ಬಿಡ್ ಮಾಡಿರುವ ಆರ್​ಸಿಬಿ ಅವರ ಮೂಲ ಬೆಲೆ 30 ಲಕ್ಷಕ್ಕೆ ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ. ವಾಸ್ತವವಾಗಿ ಮನೋಜ್​ಗೂ ಮೊದಲು ಕರ್ನಾಟಕದ ಹಲವು ಆಟಗಾರರು ಹರಾಜಿನಲ್ಲಿ ಕಾಣಿಸಿಕೊಂಡರು. ಆದರೆ ಆರ್​ಸಿಬಿ, ಅವರಲ್ಲಿ ಯಾರನ್ನು ಖರೀದಿಸುವ ಮನಸು ಮಾಡಲಿಲ್ಲ. ಹೀಗಾಗಿ ಆರ್​ಸಿಬಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಕನ್ನಡಿಗರ ಕಣ್ಣೊರೆಸುವ ಕೆಲಸಕ್ಕೆ ಮುಂದಾಗಿರುವ ಆರ್​ಸಿಬಿ, ಏಕೈಕ ಕನ್ನಡಿಗನನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಮಹಾರಾಜ ಟ್ರೋಫಿಯಲ್ಲಿ ಅಬ್ಬರ

ಆರ್​ಸಿಬಿ ಈ ಖರೀದಿ ಮಾಡಲು ಕಾರಣವೂ ಇದ್ದು, ಕಳೆದ ಕೆಲವು ತಿಂಗಳ ಹಿಂದೆ ನಡೆದಿದ್ದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಮನೋಜ್ ಭಾಂಡಗೆ ಅವರ ಕೊಡುಗೆ ಅಮೂಲ್ಯವಾಗಿತ್ತು. ಏಕೆಂದರೆ ಈ ಟೂರ್ನಿಯಲ್ಲಿ ಮೈಸೂರು ಪರ ಆಡಿದ 12 ಪಂದ್ಯಗಳಿಂದ ಮನೋಜ್, 25 ಸಿಕ್ಸರ್​ಗಳ ಸಹಿತ 292 ರನ್ ಕಲೆಹಾಕಿದ್ದರು.

ಮತ್ತೆ ಬೆಂಚ್ ಮೇಲೆ ಕೂರಿಸದಿರಲಿ

ಹಾಗೆಯೇ ಮಹಾರಾಜ ಟ್ರೋಫಿ 2024 ರಲ್ಲಿ 200ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿ 250 ಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಎಂಬ ಖ್ಯಾತಿಗೂ ಮನೋಜ್ ಭಾಂಡಗೆ ಪಾತ್ರರಾಗಿದ್ದರು. ಹೀಗಾಗಿ ಆರ್​ಸಿಬಿ, ಮನೋಜ್​ರನ್ನು ಖರೀದಿಸುವ ಕೆಲಸಕ್ಕೆ ಮುಂದಾಗಿದೆ. ಆದರೆ ಕಳೆದ ಎರಡು ಆವೃತ್ತಿಗಳಂತೆ ಈ ಆವೃತ್ತಿಯಲ್ಲೂ ಮನೋಜ್​ರನ್ನು ಬೆಂಚ್ ಮೇಲೆ ಕೂರಿಸುವ ಕೆಲಸವನ್ನು ಆರ್​ಸಿಬಿ ಕೈಬಿಡಬೇಕು. ತಂಡದಲ್ಲಿರುವ ಏಕೈಕ ಕನ್ನಡಿಗ ಪ್ಲೇಯಿಂಗ್​ 11 ನಲ್ಲಿ ಅವಕಾಶ ಪಡೆಯುವಂತ್ತಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ