Mayank Agarwal: ಆರ್​ಸಿಬಿ ಟ್ರೈ ಮಾಡಿದ್ರೂ ಸಿಕ್ಕಿಲ್ಲ: ಸನ್​ರೈಸರ್ಸ್ ಹೈದರಾಬಾದ್ ಪಾಲಾದ ಮಯಾಂಕ್ ಅಗರ್ವಾಲ್

IPL Auction 2023: 1 ಕೋಟಿ ಮೂಲಬೆಲೆ ಹೊಂದಿರುವ ಮಯಾಂಕ್ ಅಗರ್ವಾಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿ ಮಾಡಲು ಮುಂದಾಯಿತು. ಆದರೆ, ತನ್ನ ಪರ್ಸ್​ನಲ್ಲಿ ಅಷ್ಟು ಮೊತ್ತ ಇಲ್ಲದ ಕಾರಣ ಮಯಾಂಕ್ ಅಂತಿಮವಾಗಿ ಸನ್​ರೈಸರ್ಸ್ ಪಾಲಾದರು.

Mayank Agarwal: ಆರ್​ಸಿಬಿ ಟ್ರೈ ಮಾಡಿದ್ರೂ ಸಿಕ್ಕಿಲ್ಲ: ಸನ್​ರೈಸರ್ಸ್ ಹೈದರಾಬಾದ್ ಪಾಲಾದ ಮಯಾಂಕ್ ಅಗರ್ವಾಲ್
Mayank Agarwal
Follow us
TV9 Web
| Updated By: Digi Tech Desk

Updated on:Dec 23, 2022 | 5:43 PM

ಇಂಡಿಯನ್ ಪ್ರೀಮಿಯರ್‌ ಲೀಗ್‌ (IPL 2023) ಟೂರ್ನಿಯ ಹದಿನಾರನೇ ಆವೃತ್ತಿ ಸಲುವಾಗಿ ಐಪಿಎಲ್ ಆಟಗಾರರ ಮಿನಿ ಹರಾಜು ಪ್ರಕ್ರಿಯೆಯನ್ನು ಕೇರಳದ ಕೊಚ್ಚಿಯಲ್ಲಿ ಶುರುವಾಗಿದೆ. ಬರೋಬ್ಬರಿ 405 ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟಾರೆ 10 ತಂಡಗಳು ತಮ್ಮ ಆಟಗಾರರ ಖರೀದಿ ಸಲುವಾಗಿ ಹಣದ ಹೊಳೆ ಹರಿಸಲು ಶುರು ಮಾಡಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ 119 ಕ್ಯಾಪ್ಡ್​​​ ಪ್ಲೇಯರ್ಸ್ ಸದ್ಯ ಹರಾಜಿನ ಕೇಂದ್ರಬಿಂದುವಾಗಿದ್ದಾರೆ. ಹರಾಜಿನಲ್ಲಿ ಮೊದಲ ಆಟಗಾರ ಕೇನ್ ವಿಲಿಯಮ್ಸನ್ (Kane Williamson) ಅವರನ್ನು ಮೂಲಬೆಲೆಗೆ ಗುಜರಾತ್ ಟೈಟಾನ್ಸ್ ಖರೀದಿಸಿತು. ಬಳಿಕ ಇಂಗ್ಲೆಂಡ್​ನ ಹ್ಯಾರಿ ಬ್ಯೂಕ್ (Harry Brook) ಭರ್ಜರಿ ಮೊತ್ತಕ್ಕೆ ಸೇಲ್ ಆದರು.

1 ಕೋಟಿ ಮೂಲಬೆಲೆ ಹೊಂದಿರುವ ಮಯಾಂಕ್ ಅಗರ್ವಾಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿ ಮಾಡಲು ಮುಂದಾಯಿತು. ಆದರೆ, ತನ್ನ ಪರ್ಸ್​ನಲ್ಲಿ ಅಷ್ಟು ಮೊತ್ತ ಇಲ್ಲದ ಕಾರಣ ಮಯಾಂಕ್ ಅಂತಿಮವಾಗಿ ಸನ್​ರೈಸರ್ಸ್ ಪಾಲಾದರು. ಆರಂಭದಲ್ಲಿ ಮಯಾಂಕ್ ಖರೀದಿಗೆ ಆರ್​ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಮುಂದೆ ಬಂತು. ಆದರೆ, ನಂತರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ನಡುವೆ ಕಠಿಣ ಪೈಪೋಟಿ ನಡೆಯಿತು.

IPL 2023 Auction: ಬರೋಬ್ಬರಿ 13.25 ಕೋಟಿಗೆ ಹರಾಜಾದ ಇಂಗ್ಲೆಂಡ್​ನ ಸ್ಪೋಟಕ ಯುವ ಬ್ಯಾಟ್ಸ್​ಮನ್

ಇದನ್ನೂ ಓದಿ
Image
Rishabh Pant: ಶತಕದ ಅಂಚಿನಲ್ಲಿ ಎಡವಿದ ಪಂತ್: ರಿಷಭ್-ಅಯ್ಯರ್ 159 ರನ್ಸ್ ಜೊತೆಯಾಟ ಅಂತ್ಯ
Image
IPL 2023 Auction: ‘ಮಯಾಂಕ್​ಗೆ ಅನ್ಯಾಯವಾಗಿದೆ’; ಪಂಜಾಬ್ ಕಿಂಗ್ಸ್ ವಿರುದ್ಧ ಕ್ರಿಸ್ ಗೇಲ್ ಕೆಂಡ!
Image
Yuzvendra Chahal: ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ: ಇನ್​ಸ್ಟಾದಲ್ಲಿ ವಿಶ್ ಮಾಡಿದ್ದು ಹೇಗೆ ನೋಡಿ
Image
IND vs BAN 2nd Test: ರಾಹುಲ್ ಮತ್ತೊಮ್ಮೆ ವೈಫಲ್ಯ: 100 ರನ್​ಗು ಮೊದಲೇ 4 ವಿಕೆಟ್ ಕಳೆದುಕೊಂಡ ಭಾರತ

ಅಂತಿಮವಾಗಿ ಮಯಾಂಕ್ 8.25 ಕೋಟಿಗೆ ಹೈದರಬಾದ್ ಖರೀದಿಸಿತು. ಈ ಹಿಂದೆ ಪಂಜಾಬ್ ತಂಡದಲ್ಲಿದ್ದ ಮಯಾಂಕ್​ರನ್ನು ಹರಾಜಿಗೂ ಮುನ್ನ ಫ್ರಾಂಚೈಸಿ ಕೈಬಿಟ್ಟಿತ್ತು. ಇತ್ತ ಆರ್​ಸಿಬಿ ಖಾತೆಯಲ್ಲಿ ದೊಡ್ಡ ಮಟ್ಟದ ಹಣವಿಲ್ಲ. ಬೆಂಗಳೂರು ಬಳಿ ಕೇವಲ 8.75 ಕೋಟಿ ರೂ. ಇದೆಯಷ್ಟೆ. ಇದರಲ್ಲೇ ತಂಡಕ್ಕೆ ಅಗತ್ಯವಿರುವ ಪ್ರಮುಖ ಆಟಗಾರರನ್ನು ಖರೀದಿಸಬೇಕಾಗಿದೆ. ಆರ್​ಸಿಬಿಗೆ ಒಟ್ಟು ಏಳು ಆಟಗಾರರನ್ನು ಖರೀದಿಸುವ ಅವಕಾಶವಿದೆ. ಆದರೆ, ವಿದೇಶಿ ಪ್ಲೇಯರ್ಸ್ ಪೈಕಿ ಕೇವಲ ಇಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.

13.25 ಕೋಟಿಗೆ ಹ್ಯಾರಿ ಬ್ರೂಕ್ ಸೇಲ್:

ಐಪಿಎಲ್ ಸೀಸನ್ 16 ಹರಾಜಿನ ಮೊದಲ ಸುತ್ತಿನಲ್ಲಿ ಇಂಗ್ಲೆಂಡ್ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್ ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ. 1.50 ಕೋಟಿ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ 23 ವರ್ಷದ ಯುವ ಸ್ಪೋಟಕ ದಾಂಡಿಗನನ್ನು ಸನ್​ರೈಸರ್ಸ್​ ಹೈದರಾಬಾದ್ ತಂಡವು ಬರೋಬ್ಬರಿ 13.25 ಕೋಟಿ ರೂ. ನೀಡಿ ಖರೀದಿಸಿದೆ. ಇಂಗ್ಲೆಂಡ್ ಪರ ಕೇವಲ 17 ಟಿ20 ಇನಿಂಗ್ಸ್ ಆಡಿರುವ ಬ್ರೂಕ್ ಒಂದು ಅರ್ಧಶತಕದೊಂದಿಗೆ ಒಟ್ಟು 372 ರನ್ ಕಲೆಹಾಕಿದ್ದಾರೆ. ಈ ವೇಳೆ 15 ಸಿಕ್ಸ್ ಹಾಗೂ 30 ಫೋರ್​ಗಳನ್ನೂ ಕೂಡ ಬಾರಿಸಿದ್ದಾರೆ. ಸದ್ಯ ಭರ್ಜರಿ ಫಾರ್ಮ್​ನಲ್ಲಿರುವ ಬ್ರೂಕ್ ಇತ್ತೀಚೆಗೆ ಪಾಕಿಸ್ತಾನ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅಬ್ಬರಿಸಿದ್ದರು. ಇಂಗ್ಲೆಂಡ್ ಪರ ಕೇವಲ 4 ಟೆಸ್ಟ್​ ಪಂದ್ಯಗಳಲ್ಲಿ 6 ಇನಿಂಗ್ಸ್ ಆಡಿರುವ 23 ರ ಹರೆಯದ ಬಲಗೈ ಬ್ಯಾಟರ್ ಕೇವಲ 521 ಎಸೆತಗಳನ್ನು ಎದುರಿಸಿ 480 ರನ್​ ಬಾರಿಸಿದ್ದಾರೆ. ಈ ವೇಳೆ 12 ಸಿಕ್ಸ್ ಹಾಗೂ 55 ಫೋರ್ ಬಾರಿಸಿದ್ದಾರೆ.

ಐಪಿಎಲ್​ ಮಿನಿಹರಾಜು ಪ್ರಕ್ರಿಯೆ ಲೈವ್​

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:13 pm, Fri, 23 December 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ