MI IPL 2023 Auction: ಪೋಲಾರ್ಡ್​ ಬದಲಿ ಆಟಗಾರನ ಖರೀದಿ; ರೋಹಿತ್ ಪಡೆಯ ಪೂರ್ಣ ಪಟ್ಟಿ ಹೀಗಿದೆ

Mumbai Indians Auction Players List: ಐಪಿಎಲ್ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ 13 ಆಟಗಾರರನ್ನು ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಇದರಲ್ಲಿ ತಂಡದ ಪ್ರಮುಖ ಆಟಗಾರ ಕೀರಾನ್ ಪೊಲಾರ್ಡ್ ಕೂಡ ಸೇರಿದ್ದರು.

MI IPL 2023 Auction: ಪೋಲಾರ್ಡ್​ ಬದಲಿ ಆಟಗಾರನ ಖರೀದಿ; ರೋಹಿತ್ ಪಡೆಯ ಪೂರ್ಣ ಪಟ್ಟಿ ಹೀಗಿದೆ
ಮುಂಬೈ ಇಂಡಿಯನ್ಸ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Dec 24, 2022 | 11:18 AM

ಮುಂಬೈ ತಂಡ (Mumbai Indians) ಐದು ಬಾರಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿಂಡೀಸ್ ಆಲ್​ರೌಂಡರ್ ಕೀರನ್ ಪೋಲಾರ್ಡ್ (Kieran Pollard) ಮಿನಿ ಹರಾಜಿಗೂ ಮುನ್ನ​ ಐಪಿಎಲ್​ಗೆ (IPL 2023 Mini Auction) ವಿದಾಯ ಹೇಳಿದ್ದರು. ಹೀಗಾಗಿ ಮಿನಿ ಹರಾಜಿನಲ್ಲಿ ಅವರ ಬದಲಿ ಆಟಗಾರನನ್ನು ಖರೀದಿಸುವ ಯೋಜನೆ ರೂಪಿಸಿದ್ದ ಮುಂಬೈ ಫ್ರಾಂಚೈಸಿ ತನ್ನ ಪ್ರಯತ್ನದಲ್ಲಿ ಕೊಂಚ ಸಫಲವಾಗಿದೆ. ಈ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಆಸ್ಟ್ರೇಲಿಯಾ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ (Cameron Green) ಅವರನ್ನು 17.50 ಕೋಟಿ ರೂ. ನೀಡಿ ಖರೀದಿಸಿತು. ಇದರೊಂದಿಗೆ ಪೋಲಾರ್ಡ್ ಜಾಗವನ್ನು ಭರ್ತಿ ಮಾಡಿಕೊಂಡ ಮುಂಬೈ, ಇದಾದ ಬಳಿಕ ತನ್ನ ಪರ್ಸ್‌ನಲ್ಲಿ ಉಳಿದಿದ್ದ ಸ್ವಲ್ಪ ಹಣದಲ್ಲಿ ಉಳಿದ ಆಟಗಾರರನ್ನು ಖರೀದಿಸಿ ತನ್ನ ತಂಡವನ್ನು ಪೂರ್ಣಗೊಳಿಸಿಕೊಂಡಿದೆ.

ಏತನ್ಮಧ್ಯೆ, ಕಳೆದ ಆವೃತ್ತಿಯ ಐಪಿಎಲ್ ಮುಂಬೈ ಇಂಡಿಯನ್ಸ್‌ಗೆ ಅಷ್ಟು ಹೇಳಿಕೊಳ್ಳುವಂತಿರಲಿಲ್ಲ. ಇಡೀ ಆವೃತ್ತಿಯಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಹೀಗಾಗಿ ಮುಂದಿನ ವರ್ಷ ಟ್ರೋಫಿಯನ್ನು ಗೆಲ್ಲುವ ಸಲುವಾಗಿಯೇ ಮುಂಬೈ ಉತ್ತಮ ಕಾಂಬಿನೇಷನ್‌ ಇರುವ ತಂಡವನ್ನು ರಚಿಸಿದೆ.

ಮತ್ತೊಂದೆಡೆ ಐಪಿಎಲ್ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ 13 ಆಟಗಾರರನ್ನು ಬಿಡುಗಡೆ ಮಾಡಿದ್ದು ಗೊತ್ತೇ ಇದೆ. ಇದರಲ್ಲಿ ತಂಡದ ಪ್ರಮುಖ ಆಟಗಾರ ಕೀರಾನ್ ಪೊಲಾರ್ಡ್ ಕೂಡ ಸೇರಿದ್ದರು. ಸ್ಟಬ್ಸ್, ಬ್ರೂವಿಸ್, ತಿಲಕ್ ವರ್ಮಾ, ಟಿಮ್ ಡೇವಿಡ್​ರಂತಹ ಯುವ ಆಟಗಾರರ ಮೇಲೆ ನಂಬಿಕೆ ಇಟ್ಟಿರುವ ಈ ಮ್ಯಾನೇಜ್ ಮೆಂಟ್ ಅವರನ್ನು ಬಿಡದೆ ತಂಡದಲ್ಲಿ ಉಳಿಸಿಕೊಂಡಿತ್ತು.

IPL 2023 Auction: ಇಬ್ಬರು ಕನ್ನಡಿಗರು; ಮಿನಿ ಹರಾಜಿನಲ್ಲಿ ಅಧಿಕ ಬೆಲೆ ಪಡೆದ 5 ಭಾರತೀಯ ಆಟಗಾರರಿವರು

ಹರಾಜಿಗೂ ಮುನ್ನ ಬಿಡುಗಡೆಯಾದ ಆಟಗಾರರು

ಕೀರನ್ ಪೊಲಾರ್ಡ್, ಅನ್ಮೋಲ್ ಪ್ರೀತ್ ಸಿಂಗ್, ಆರ್ಯನ್ ಜುಯಲ್, ಥಂಪಿ, ಸ್ಯಾಮ್ಸ್, ಫ್ಯಾಬಿಯನ್ ಅಲ್ಲಿನ್, ಉನಾದ್ಕಟ್, ಮಾರ್ಕಂಡೆ, ಮುರುಗನ್ ಅಶ್ವಿನ್, ಮೆರೆಡಿತ್, ಸಂಜಯ್ ಯಾದವ್, ಟೈ ಮಿಲ್ಸ್

ಉಳಿಸಿಕೊಂಡಿದ್ದ ಆಟಗಾರರು

ರೋಹಿತ್ ಶರ್ಮಾ, ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸ್ಟಬ್ಸ್, ಬ್ರೆವಿಸ್, ಆರ್ಚರ್, ಬುಮ್ರಾ, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕಾರ್ತಿಕೇಯ, ಶೋಕೀನ್, ಬೆಹ್ರೆಂಡ್ರಫ್, ಮಧ್ವಲ್

ಮಿನಿ ಹರಾಜಿನಲ್ಲಿ ಖರೀದಿಸಿದ ಆಟಗಾರರು

ವಿಷ್ಣು ವಿನೋದ್, ಡುವಾನ್ ಜಾನ್ಸನ್, ಕ್ಯಾಮೂರಾನ್ ಗ್ರೀನ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜೆ ರಿಚರ್ಡ್ಸನ್, ಪಿಯೂಷ್ ಚಾವ್ಲಾ, ರಾಘವ್ ಗೋಯಲ್

ಮುಂಬೈ ಇಂಡಿಯನ್ಸ್ ಪೂರ್ಣ ತಂಡ

ರೋಹಿತ್ ಶರ್ಮಾ, ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸ್ಟಬ್ಸ್, ಬ್ರೆವಿಸ್, ಆರ್ಚರ್, ಬುಮ್ರಾ, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕಾರ್ತಿಕೇಯ, ಶೋಕೀನ್, ಬೆಹ್ರೆಂಡ್ರಫ್, ಮಾಧ್ವಲ್, ವಿಷ್ಣು ವಿನೋದ್, ಡುವಾನ್ ಜಾನ್ಸನ್, ಕ್ಯಾಮರೂನ್ ಗ್ರೀನ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜೇ ರಿಚರ್ಡ್ಸನ್, ಪಿಯೂಷ್ ಚಾವ್ಲಾ, ರಾಘವ್ ಗೋಯಲ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:18 am, Sat, 24 December 22

Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ