AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kane Williamson: ಕೇನ್ ವಿಲಿಯಮ್ಸನ್​ಗೆ ಕ್ರಿಕೆಟ್​ನಿಂದ ದೂರ ಉಳಿಯಬೇಕಾದ ಅನಿವಾರ್ಯತೆ..!

ನ್ಯೂಜಿಲೆಂಡ್ ಜನವರಿಯಿಂದ ಸರಣಿ ಆಡಲಿದೆ. ತಂಡವು ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಇದರಿಂದ ಕೂಡ ಕೇನ್ ವಿಲಿಯಮ್ಸನ್ ವಿಶ್ರಾಂತಿ ಪಡೆಯಬಹುದು.

Kane Williamson: ಕೇನ್ ವಿಲಿಯಮ್ಸನ್​ಗೆ ಕ್ರಿಕೆಟ್​ನಿಂದ ದೂರ ಉಳಿಯಬೇಕಾದ ಅನಿವಾರ್ಯತೆ..!
Kane Williamson
TV9 Web
| Edited By: |

Updated on: Dec 06, 2021 | 10:01 PM

Share

ಭಾರತದ ವಿರುದ್ದದ ಸರಣಿಯಿಂದ ಹೊರಗುಳಿದಿದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮತ್ತಷ್ಟು ದಿನಗಳ ಕಾಲ ಕ್ರಿಕೆಟ್​ನಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ ಮುಂದಿನ ಕೆಲ ತಿಂಗಳುಗಳು ಕಾಲ ಅವರು ಮತ್ತೆ ಬ್ಯಾಟ್ ಬೀಸಲು ಸಾಧ್ಯವಾಗುವುದಿಲ್ಲ ಎಂದು ತಿಳಿದು ಬಂದಿದೆ. ಭಾರತದ ವಿರುದ್ದದ ಸರಣಿಯಲ್ಲಿ ಗಾಯದ ಕಾರಣ ಕೇನ್ ವಿಲಿಯಮ್ಸನ್ 2ನೇ ಟೆಸ್ಟ್ ಪಂದ್ಯ ಆಡಿರಲಿಲ್ಲ. ಮೊಣಕೈ ನೋವು ಕಾಣಿಸಿಕೊಂಡ ಕಾರಣ ತಂಡದ ಆಡಳಿತವು ಅವರಿಗೆ ವಿಶ್ರಾಂತಿ ನೀಡಿತು. ಇದೀಗ ಅವರ ಮೊಣಕೈ ಗಾಯವು ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹೆಸ್ಸನ್ ಕಳವಳ ವ್ಯಕ್ತಪಡಿಸಿದ್ದಾರೆ. ಕಿವೀಸ್ ನಾಯಕ ಸ್ವಲ್ಪ ಸಮಯದವರೆಗೆ ಕ್ರಿಕೆಟ್ ತ್ಯಜಿಸಬೇಕಾಗುತ್ತದೆ ಎಂದು ಮೈಕ್ ಹೆಸ್ಸನ್ ನಂಬಿದ್ದಾರೆ.

ವಿಲಿಯಮ್ಸನ್ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ! ವಿಲಿಯಮ್ಸನ್ ಮೊಣಕೈ ನೋವಿನಿಂದ ಮುಕ್ತಿ ಪಡೆಯಬೇಕಾದರೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ ಎಂದು ಕಿವೀಸ್ ಮಾಜಿ ಕ್ರಿಕೆಟಿಗ ಇಯಾನ್ ಸ್ಮಿತ್ ಜೊತೆಗಿನ ಸಂವಾದದಲ್ಲಿ ಮೈಕ್ ಹೆಸ್ಸನ್ ಹೇಳಿದ್ದಾರೆ. ‘ವಿಲಿಯಮ್ಸನ್ ಶಸ್ತ್ರಚಿಕಿತ್ಸೆಯ ಏಕೈಕ ಆಯ್ಕೆಯ ಹಂತವನ್ನು ತಲುಪಿದ್ದಾರೆ. ಅವರಿಗೆ ಸಾಕಷ್ಟು ವಿಶ್ರಾಂತಿ ನೀಡಲಾಗಿದೆ. ಇದಾಗ್ಯೂ ಅವರ ಮೊಣಕೈ ಗಾಯದ ಸಮಸ್ಯೆ ದೂರವಾಗಿಲ್ಲ. ಕಳೆದ 18 ತಿಂಗಳಲ್ಲಿ ವಿಲಿಯಮ್ಸನ್ ಸಾಕಷ್ಟು ಪಂದ್ಯಗಳನ್ನು ಗಾಯದ ಕಾರಣವೇ ಮಿಸ್ ಮಾಡಿಕೊಂಡಿದ್ದಾರೆ ಎಂದು ಹೆಸ್ಸನ್ ತಿಳಿಸಿದ್ದಾರೆ.

‘ವಿಲಿಯಮ್ಸನ್ ಅವರಿಗೆ ಇತ್ತೀಚೆಗೆ ಸೊಂಟದ ಗಾಯವಾಗಿತ್ತು. ಇದು ಗುಣಮುಖವಾದರೂ, ಮೊಣಕೈ ಗಾಯವು ಬಹಳ ಸಮಯದಿಂದ ಅವರನ್ನು ಕಾಡುತ್ತಿದೆ. ಹೀಗಾ್ಗಿ ಆಪರೇಷನ್ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ನಾನು ಭಾವಿಸುತ್ತೇನೆ. ಅಲ್ಲದೆ ಕೆಲ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿ ಬರಬಹುದು ಎಂದು ಮೈಕ್ ಹೆಸ್ಸನ್ ತಿಳಿಸಿದ್ದಾರೆ. ಅಂದರೆ ಮುಂದಿನ ಒಂದು ವರ್ಷ ಕೇನ್ ವಿಲಿಯಮ್ಸನ್ ಮೈದಾನದಿಂದ ಹೊರಗುಳಿದರೂ ಅಚ್ಚರಿ ಪಡಬೇಕಿಲ್ಲ.

ನ್ಯೂಜಿಲೆಂಡ್‌ಗೆ ಮುಂದಿನ ವರ್ಷ ಬಹಳ ಮುಖ್ಯ: ನ್ಯೂಜಿಲೆಂಡ್ ಜನವರಿಯಿಂದ ಸರಣಿ ಆಡಲಿದೆ. ತಂಡವು ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಇದರಿಂದ ಕೂಡ ಕೇನ್ ವಿಲಿಯಮ್ಸನ್ ವಿಶ್ರಾಂತಿ ಪಡೆಯಬಹುದು. ಆದಾಗ್ಯೂ, ಇದರ ನಂತರ, ಅವರು ಆಸ್ಟ್ರೇಲಿಯಾದಿಂದ ವಿರುದ್ದದ ಏಕದಿನ ಮತ್ತು T20 ಸರಣಿಯನ್ನು ಮಿಸ್ ಮಾಡಿಕೊಳ್ಳಬಹುದು. ಹಾಗೆಯೇ ಫೆಬ್ರವರಿ-ಮಾರ್ಚ್‌ನಲ್ಲಿ, ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲೆಂಡ್‌ಗೆ ಭೇಟಿ ನೀಡಲಿದ್ದು, ಇದರಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನಂತರ ಮಾರ್ಚ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಇದೀಗ ನ್ಯೂಜಿಲೆಂಡ್ ನಾಯಕನಿಗೆ ಗಂಭೀರ ಗಾಯವಾಗಿರುವುದು ಟೀಮ್ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: World Record: ಬರೋಬ್ಬರಿ 15 ಸಿಕ್ಸ್​: ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕ

ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

ಇದನ್ನೂ ಓದಿ: Aakash Chopra: ಚಹಲ್ ಬದಲಿಗೆ RCB ಇವರನ್ನು ಟಾರ್ಗೆಟ್ ಮಾಡಲಿದೆ..!

ಇದನ್ನೂ ಓದಿ: IPL 2022: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಮತ್ತೆ ಬರ್ತಾರಂತೆ ABD

(Mike Hesson says surgery to troubling elbow the only option for Kane Williamson)