MLC 2023: ಕ್ಲಾಸೆನ್ ಕ್ಲಾಸ್​ ಬ್ಯಾಟಿಂಗ್​: ಸಿಯಾಟಲ್​ಗೆ ಭರ್ಜರಿ ಜಯ

| Updated By: ಝಾಹಿರ್ ಯೂಸುಫ್

Updated on: Jul 16, 2023 | 4:27 PM

MLC 2023: 178 ರನ್​ಗಳ ಕಠಿಣ ಗುರಿ ಪಡೆದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡಕ್ಕೆ ಮ್ಯಾಥ್ಯೂ ವೇಡ್ (28) ಹಾಗೂ ಫಿನ್ ಅಲೆನ್ (28) ಉತ್ತಮ ಆರಂಭ ಒದಗಿಸಿದ್ದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

MLC 2023: ಕ್ಲಾಸೆನ್ ಕ್ಲಾಸ್​ ಬ್ಯಾಟಿಂಗ್​: ಸಿಯಾಟಲ್​ಗೆ ಭರ್ಜರಿ ಜಯ
Heinrich Klaasen
Follow us on

MLC 2023: ಅಮೆರಿಕದ ಡಲ್ಲಾಸ್​ನಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 4ನೇ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ವಿರುದ್ಧ ಸಿಯಾಟಲ್ ಓರ್ಕಾಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಜಯಿಸಿದ ಸಿಯಾಟಲ್ ಓರ್ಕಾಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್ (7) ಬೇಗನೆ ಔಟಾದರೆ, ಇದರ ಬೆನ್ನಲ್ಲೇ ನೌಮಾನ್ ಅನ್ವರ್ (30) ಕೂಡ ವಿಕೆಟ್ ಒಪ್ಪಿಸಿದರು. ಇನ್ನು ಶೆಹನ್ ಜಯಸೂರ್ಯ 33 ರನ್​ ಬಾರಿಸಿದರು.

4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 31 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 53 ರನ್​ ಬಾರಿಸಿದ ಕ್ಲಾಸೆನ್ ತಂಡದ ಮೊತ್ತವನ್ನು 4 ವಿಕೆಟ್ ನಷ್ಟಕ್ಕೆ 177 ಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

178 ರನ್​ಗಳ ಕಠಿಣ ಗುರಿ ಪಡೆದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡಕ್ಕೆ ಮ್ಯಾಥ್ಯೂ ವೇಡ್ (28) ಹಾಗೂ ಫಿನ್ ಅಲೆನ್ (28) ಉತ್ತಮ ಆರಂಭ ಒದಗಿಸಿದ್ದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ಇದಾಗ್ಯೂ ಕೆಳ ಕ್ರಮಾಂಕದಲ್ಲಿ ಶಾದಾಬ್ ಖಾನ್ 23 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 37 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟರ್​ಗಳು ಕ್ರೀಸ್​ ಕಚ್ಚಿ ನಿಲ್ಲುವಲ್ಲಿ ವಿಫಲರಾದರು. ಇದರೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು 17.5 ಓವರ್​ಗಳಲ್ಲಿ 142 ರನ್​ಗಳಿಗೆ ಆಲೌಟ್ ಆಯಿತು.

ಇತ್ತ 35 ರನ್​ಗಳಿಂದ ಜಯ ಸಾಧಿಸಿದ ಸಿಯಾಟಲ್ ಓರ್ಕಾಸ್ ತಂಡದ ಪರ ಅರ್ಧಶತಕ ಸಿಡಿಸಿ ಮಿಂಚಿದ್ದ ಹೆನ್ರಿಕ್ ಕ್ಲಾಸೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪ್ಲೇಯಿಂಗ್ 11: ಫಿನ್ ಅಲೆನ್ , ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್) , ಮಾರ್ಕಸ್ ಸ್ಟೊಯಿನಿಸ್ , ಆರೋನ್ ಫಿಂಚ್ (ನಾಯಕ) , ಕೋರಿ ಅ್ಯಂಡರ್ಸನ್ , ಶಾದಾಬ್ ಖಾನ್ , ತಜೀಂದರ್ ಧಿಲ್ಲೋನ್ , ಚೈತನ್ಯ ಬಿಷ್ಣೋಯ್ , ಕಾರ್ಮಿ ಲೆ ರೌಕ್ಸ್ , ಹ್ಯಾರಿಸ್ ರೌಫ್ , ಲಿಯಾಮ್ ಪ್ಲಂಕೆಟ್.

ಇದನ್ನೂ ಓದಿ: Zim Afro T10 League: ಹೊಸ ಲೀಗ್​ನಲ್ಲಿ ಭಾರತೀಯ ಕ್ರಿಕೆಟಿಗರು..!

ಸಿಯಾಟಲ್ ಓರ್ಕಾಸ್ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ನೌಮನ್ ಅನ್ವರ್ , ಶೆಹನ್ ಜಯಸೂರ್ಯ , ಹೆನ್ರಿಕ್ ಕ್ಲಾಸೆನ್ , ಇಮಾದ್ ವಾಸಿಮ್ , ಶಿಮ್ರಾನ್ ಹೆಟ್ಮೆಯರ್ , ಶುಭಂ ರಂಜನೆ , ಕ್ಯಾಮೆರಾನ್ ಗ್ಯಾನನ್ , ವೇಯ್ನ್ ಪಾರ್ನೆಲ್ (ನಾಯಕ) , ಹರ್ಮೀತ್ ಸಿಂಗ್ , ಆಂಡ್ರ್ಯೂ ಟೈ.