MLC 2023: ವಾಷಿಂಗ್ಟನ್ ಫ್ರೀಡಮ್ ವಿರುದ್ಧ ಗೆದ್ದು ಬೀಗಿದ ಸಿಯಾಟಲ್ ಓರ್ಕಾಸ್
MLC 2023: ಪ್ರಥಮ ಓವರ್ ಎಸೆದ ಇಮಾದ್ ಮ್ಯಾಥ್ಯೂ ಶಾರ್ಟ್ (2) ಅನ್ನು ಕ್ಲೀನ್ ಬೌಲ್ಡ್ ಮಾಡಿದರು. ಆ ಬಳಿಕ ಬಂದ ಮುಖ್ತಾರ್ ಅಹ್ಮದ್ (5) ಗೆ ಪಾರ್ನೆಲ್ ಪೆವಿಲಿಯನ್ ಹಾದಿ ತೋರಿಸಿದರು.

MLC 2023: ಅಮೆರಿಕದ ಡಲ್ಲಾಸ್ನಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಮೂರನೇ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಮ್ ತಂಡದ ವಿರುದ್ಧ ಸಿಯಾಟಲ್ ಓರ್ಕಾಸ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಯಾಟಲ್ ಓರ್ಕಾಸ್ ತಂಡದ ನಾಯಕ ವೇಯ್ನ್ ಪಾರ್ನೆಲ್ ಎದುರಾಳಿಗಳನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವಾಷಿಂಗ್ಟನ್ ಫ್ರೀಡಮ್ ತಂಡಕ್ಕೆ ಮೊದಲ ಓವರ್ನಲ್ಲೇ ಇಮಾದ್ ವಾಸಿಂ ಆಘಾತ ನೀಡಿದರು.
ಪ್ರಥಮ ಓವರ್ ಎಸೆದ ಇಮಾದ್ ಮ್ಯಾಥ್ಯೂ ಶಾರ್ಟ್ (2) ಅನ್ನು ಕ್ಲೀನ್ ಬೌಲ್ಡ್ ಮಾಡಿದರು. ಆ ಬಳಿಕ ಬಂದ ಮುಖ್ತಾರ್ ಅಹ್ಮದ್ (5) ಗೆ ಪಾರ್ನೆಲ್ ಪೆವಿಲಿಯನ್ ಹಾದಿ ತೋರಿಸಿದರು. ಮತ್ತೋರ್ವ ಆರಂಭಿಕ ಆ್ಯಂಡ್ರೀಸ್ ಗೌಸ್ 28 ರನ್ಗಳ ಕಾಣಿಕೆ ನೀಡಿದರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಇನ್ನು ಗ್ಲೆನ್ ಫಿಲಿಪ್ಸ್ (20) ಹಾಗೂ ನಾಯಕ ಹೆನ್ರಿಕ್ಸ್ (24) ಎರಡಂಕಿಯ ಕೊಡಗೆ ನೀಡಿ ಔಟಾದರು.
ಇನ್ನು ಅಂತಿಮ ಹಂತದಲ್ಲಿ ಯುವ ಆಲ್ರೌಂಡರ್ ಅಕಿಲ್ ಹೊಸೈನ್ 22 ಎಸೆತಗಳಲ್ಲಿ 33 ರನ್ ಬಾರಿಸುವ ಮೂಲಕ ವಾಷಿಂಗ್ಟನ್ ಫ್ರೀಡಮ್ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 144 ಕ್ಕೆ ತಂದು ನಿಲ್ಲಿಸಿದರು.
145 ರನ್ಗಳ ಸುಲಭ ಗುರಿ ಪಡೆದ ಸಿಯಾಟಲ್ ಓರ್ಕಾಸ್ ಪರ ಆರಂಭಿಕ ಆಟಗಾರ ನೌಮಾನ್ ಅನ್ವರ್ 37 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ನೊಂದಿಗೆ 48 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಇಮಾದ್ ವಾಸಿಂ 38 ಎಸೆತಗಳಲ್ಲಿ ಅಜೇಯ 43 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಅಂತಿಮವಾಗಿ ಸಿಯಾಟಲ್ ಓರ್ಕಾಸ್ ತಂಡವು 19.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ಗಳಿಸಿತು. ಈ ಮೂಲಕ ಸಿಯಾಟಲ್ ಓರ್ಕಾಸ್ ತನ್ನ ಮೊದಲ ಪಂದ್ಯದಲ್ಲೇ 5 ವಿಕೆಟ್ಗಳಿಂದ ಗೆದ್ದುಕೊಂಡಿದೆ.
Cool, Calm & Collected?
Imad Wasim shares on the #SeattleOrcas win and more in this @LycamobileUSA Orca of the Match interview?️#SOvWF #MajorLeagueCricket #PodSquad #LycaMobileUSA pic.twitter.com/wNuh2kOMe9
— Seattle Orcas (@MLCSeattleOrcas) July 15, 2023
ಸಿಯಾಟಲ್ ಓರ್ಕಾಸ್ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ನೌಮನ್ ಅನ್ವರ್ , ಶಿಮ್ರಾನ್ ಹೆಟ್ಮೆಯರ್ , ಹೆನ್ರಿಕ್ ಕ್ಲಾಸೆನ್ , ಇಮಾದ್ ವಾಸಿಂ , ಶೆಹನ್ ಜಯಸೂರ್ಯ , ಶುಭಂ ರಂಜನೆ , ಕ್ಯಾಮೆರಾನ್ ಗ್ಯಾನನ್ , ವೇಯ್ನ್ ಪಾರ್ನೆಲ್ (ನಾಯಕ) , ಹರ್ಮೀತ್ ಸಿಂಗ್ , ಆಂಡ್ರ್ಯೂ ಟೈ.
ಇದನ್ನೂ ಓದಿ: Yuvraj Singh: ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲೋದು ಡೌಟ್: ಯುವರಾಜ್ ಸಿಂಗ್
ವಾಷಿಂಗ್ಟನ್ ಫ್ರೀಡಮ್ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್ , ಮುಖ್ತಾರ್ ಅಹ್ಮದ್ , ಆ್ಯಂಡ್ರೀಸ್ ಗೌಸ್ (ವಿಕೆಟ್ ಕೀಪರ್) , ಮೊಯಿಸೆಸ್ ಹೆನ್ರಿಕ್ಸ್ (ನಾಯಕ) , ಒಬಸ್ ಪಿನಾರ್, ಮಾರ್ಕೊ ಯಾನ್ಸನ್, ಗ್ಲೆನ್ ಫಿಲಿಪ್ಸ್, ಡೇನ್ ಪೀಡ್ಟ್, ಅನ್ರಿಕ್ ನೋಕಿಯಾ, ಸೌರಭ್ ಎನ್, ಅಕಿಲ್ ಹೊಸೈನ್.
