IPL 2022: ಇಬ್ಬರು ಆಲ್​ರೌಂಡರ್​ಗಳು: CSK ತಂಡದ ನಾಲ್ವರು ಬಹುತೇಕ ಫೈನಲ್

IPL 2022: ಇಬ್ಬರು ಆಲ್​ರೌಂಡರ್​ಗಳು: CSK ತಂಡದ ನಾಲ್ವರು ಬಹುತೇಕ ಫೈನಲ್
CSK

IPL 2022 CSK Players: ಎಂಎಸ್ ಧೋನಿ, ಸುರೇಶ್ ರೈನಾ, ನಾರಾಯಣ್ ಜಗದೀಸನ್, ರುತುರಾಜ್ ಗಾಯಕ್ವಾಡ್, ಕೆ.ಎಂ.ಆಸಿಫ್, ಜೋಶ್ ಹ್ಯಾಝಲ್‌ವುಡ್, ಕರ್ನ್ ಶರ್ಮಾ, ಅಂಬಾಟಿ ರಾಯುಡು, ದೀಪಕ್ ಚಹರ್,ಮೊಯೀನ್ ಅಲಿ.

TV9kannada Web Team

| Edited By: Zahir PY

Nov 30, 2021 | 3:23 PM

CSK IPL 2022 Retained Players: IPL 2022 ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳಿಗೆ ಗರಿಷ್ಠ ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಆಯ್ಕೆಯನ್ನು ಬಿಸಿಸಿಐ ನೀಡಿದೆ. ಅದರಂತೆ ಬಹುತೇಕ ತಂಡಗಳು ಪ್ರಮುಖ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು. ಇತ್ತ ಚೆನ್ನೈ ಸೂಪರ್ ಕಿಂಗ್ಸ್ (CSK Retained Players)​ ಗರಿಷ್ಠ ರಿಟೈನ್ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದೆ. ಸಿಎಸ್​ಕೆ ಮೂಲಗಳ ಮಾಹಿತಿ ಪ್ರಕಾರ ಈಗಾಗಲೇ ನಾಲ್ವರು ಆಟಗಾರರ ರಿಟೈನ್ ಪಟ್ಟಿ ಸಿದ್ಧವಾಗಿದೆ. ಅದರಂತೆ ಇಬ್ಬರು ಬ್ಯಾಟರ್​ಗಳು ಹಾಗೂ ಇಬ್ಬರು ಆಲ್​ರೌಂಡರ್​ಗಳನ್ನು ಚೆನ್ನೈ ಸೂಪರ್ ಕಿಂಗ್ಸ್​ ಉಳಿಸಿಕೊಳ್ಳಲಿದೆ. ಈ ಪಟ್ಟಿಯಲ್ಲಿರು ಅಗ್ರ ಹೆಸರೆಂದರೆ ಮಹೇಂದ್ರ ಸಿಂಗ್ ಧೋನಿ (MS DHONI). ಸಿಎಸ್​ಕೆ ತಂಡವು ಮೊದಲ ಆಯ್ಕೆಯಾಗಿ ಧೋನಿಯನ್ನು ಉಳಿಸಿಕೊಂಡಿದೆ. ಹೀಗಾಗಿ ಮುಂದಿನ ಸೀಸನ್​ನಲ್ಲೂ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಅವರೇ ಮುನ್ನಡೆಸಲಿದ್ದಾರೆ. ಹಾಗೆಯೇ ಈ ಪಟ್ಟಿಯಲ್ಲಿ ವಿದೇಶಿ ಕೋಟಾದಲ್ಲಿ ಇಂಗ್ಲೆಂಡ್ ಆಲ್​ರೌಂಡರ್​ಗೆ ಸ್ಥಾನ ನೀಡಲಾಗಿರುವುದು ವಿಶೇಷ.

ಹೌದು, ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಇಂಗ್ಲೆಂಡ್ ಆಲ್​ರೌಂಡರ್​ಗಳಾದ ಸ್ಯಾಮ್ ಕರನ್ ಬದಲಿಗೆ ಮೊಯೀನ್ ಅಲಿಗೆ ಮಣೆಹಾಕಿದೆ ಎಂದು ತಿಳಿದು ಬಂದಿದೆ. ಕಳೆದ ಸೀಸನ್​ನಲ್ಲಿ ಸಿಎಸ್​ಕೆ ಪರ ಭರ್ಜರಿ ಪ್ರದರ್ಶನ ನೀಡಿದ್ದ ಮೊಯೀನ್ ಅಲಿ, ಇದೀಗ ಟಿ10 ಲೀಗ್​ನಲ್ಲೂ ಅತ್ಯುತ್ತಮ ಫಾರ್ಮ್​ ಮುಂದುವರೆಸಿದ್ದಾರೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಅವರನ್ನೇ ಉಳಿಸಿಕೊಳ್ಳಲು ಬಯಸಿದೆ.

ಇನ್ನು ಚೆನ್ನೈ ತಂಡದ ಮಧ್ಯಮ ಕ್ರಮಾಂಕದ ಬಲಾಢ್ಯ ಎಂದೇ ಖ್ಯಾತನಾಗಿರುವ ಆಲ್​ರೌಂಡರ್ ರವೀಂದ್ರ ಜಡೇಜಾ ಅವರನ್ನೂ ಕೂಡ ಉಳಿಸಿಕೊಂಡಿದೆ. ಸಿಎಸ್​ಕೆ ಪರ ಕಳೆದ ಕೆಲ ವರ್ಷಗಳಿಂದ ಅತ್ಯುತ್ತಮ ಕೊಡುಗೆ ನೀಡಿರುವ ಜಡ್ಡುರನ್ನು ಉಳಿಸಿಕೊಂಡಿರುವ ಚೆನ್ನೈ ಫ್ರಾಂಚೈಸಿ ಸುರೇಶ್ ರೈನಾ ಅವರನ್ನು ಈ ಬಾರಿ ಕೈಬಿಟ್ಟಿದೆ ಎಂದು ತಿಳಿದು ಬಂದಿದೆ.

ಹಾಗೆಯೇ ಕಳೆದ ಸೀಸನ್​ ಐಪಿಎಲ್​ನಲ್ಲಿನ ಆರೆಂಜ್ ಕ್ಯಾಪ್ ವಿನ್ನರ್ ರುತುರಾಜ್ ಗಾಯಕ್ವಾಡ್ ಅವರನ್ನೂ ಕೂಡ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ಉಳಿಸಿಕೊಂಡಿದೆ. ಹೀಗಾಗಿ ರುತುರಾಜ್ ಹೆಸರು ಕೂಡ ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್​ ಈ ನಾಲ್ವರು ಆಟಗಾರರನ್ನು ತಂಡದಲ್ಲಿರಿಸಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.

ಇನ್ನು ಚೆನ್ನೈ ಸೂಪರ್ ಕಿಂಗ್ಸ್​ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕೆಲ ಸ್ಟಾರ್ ಆಟಗಾರರಿದ್ದು, ಹೀಗಾಗಿ ಹರಾಜಿನ ಮೂಲಕ ಅವರನ್ನು ಖರೀದಿಸಲು ಸಿಎಸ್​ಕೆ ಮತ್ತೆ ಪೈಪೋಟಿ ನಡೆಸುವುದು ಖಚಿತ ಎಂದೇ ಹೇಳಬಹುದು. ಏಕೆಂದರೆ ಸಿಎಸ್​ಕೆ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ಕಳೆದ ಸೀಸನ್​ನಲ್ಲಿ ಯಶಸ್ವಿ ಬ್ಯಾಟರ್ ಫಾಫ್ ಡುಪ್ಲೆಸಿಸ್​, ಯುವ ಆಲ್​ರೌಂಡರ್ ಸ್ಯಾಮ್ ಕರನ್, ವೇಗಿ ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಜೋಶ್ ಹ್ಯಾಝಲ್​ವುಡ್ ಹೆಸರುಗಳು ಮುಂಚೂಣಿಯಲ್ಲಿದೆ. ಹೀಗಾಗಿ ಹಳೆಯ ತಂಡವನ್ನು ಮುಂದುವರೆಸಲು ಸಿಎಸ್​ಕೆ ರಿಲೀಸ್ ಮಾಡಿದ ಆಟಗಾರರನ್ನು ಮತ್ತೆ ಟಾರ್ಗೆಟ್ ಮಾಡುವ ಸಾಧ್ಯತೆಯಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ಎಂಎಸ್ ಧೋನಿ, ಸುರೇಶ್ ರೈನಾ, ನಾರಾಯಣ್ ಜಗದೀಸನ್, ರುತುರಾಜ್ ಗಾಯಕ್ವಾಡ್, ಕೆ.ಎಂ.ಆಸಿಫ್, ಜೋಶ್ ಹ್ಯಾಝಲ್‌ವುಡ್, ಕರ್ನ್ ಶರ್ಮಾ, ಅಂಬಾಟಿ ರಾಯುಡು, ದೀಪಕ್ ಚಹರ್,ಮೊಯೀನ್ ಅಲಿ, ಕೆ ಗೌತಮ್, ಚೇತೇಶ್ವರ ಪೂಜಾರ, ಎಂ.ಹರಿಶಂಕರ್ ರೆಡ್ಡಿ, ಕೆ.ಭಗತ್ ವರ್ಮಾ, ಸಿ ಹರಿ ನಿಶಾಂತ್, ಫಾಫ್ ಡು ಪ್ಲೆಸಿಸ್, ಶಾರ್ದುಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್, ರಾಬಿನ್ ಉತ್ತಪ್ಪ.

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ ಈ 10 ಸ್ಟಾರ್ ಆಟಗಾರರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ..!

ಇದನ್ನೂ ಓದಿ: IPL 2022 Retained Players: ಐಪಿಎಲ್ ರಿಟೈನ್ ಪಟ್ಟಿಯಲ್ಲಿರುವ 18 ಆಟಗಾರರ ಹೆಸರು ಬಹಿರಂಗ..!

ಇದನ್ನೂ ಓದಿ: IPL 2022: ಐಪಿಎಲ್​ನ 5 ತಂಡಗಳಿಗೆ ಹೊಸ ನಾಯಕ..?

(MS Dhoni’s CSK ready to retain these 4 players for IPL 2022)

Follow us on

Related Stories

Most Read Stories

Click on your DTH Provider to Add TV9 Kannada