
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ ನ್ಯೂಝಿಲೆಂಡ್ ತಂಡವು ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಎಂದಿನಂತೆ ಈ ಬಾರಿ ಕೂಡ ಕಿವೀಸ್ ಪಡೆ ಕಪ್ಪು ಬಣ್ಣದ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಆದರೆ ಈ ಬಾರಿ ಮುಂಭಾಗದಲ್ಲಿ ಬಿಳ್ಳಿ ಪಟ್ಟಿಗಳನ್ನು ನೀಡಲಾಗಿರುವುದು ವಿಶೇಷ.
ಅಂದರೆ 2019 ರ ಏಕದಿನ ವಿಶ್ವಕಪ್ನಲ್ಲಿ ನ್ಯೂಝಿಲೆಂಡ್ ಕಪ್ಪು ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದರೂ ಯಾವುದೇ ವಿನ್ಯಾಸಗಳನ್ನು ಹೊಂದಿರಲಿಲ್ಲ. ಆದರೆ ಈ ಬಾರಿ ಮುಂಭಾಗದಲ್ಲಿ ಬಿಳಿ ನೀಳ ಪಟ್ಟಿಗಳನ್ನು ನೀಡಲಾಗಿದೆ. ಇದರ ಹೊರತಾಗಿ ತಂಡದ ಜೆರ್ಸಿಯ ವಿನ್ಯಾಸದಲ್ಲಿ ದೊಡ್ಡ ಬದಲಾವಣೆ ಕಂಡು ಬಂದಿಲ್ಲ.
ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.
ಈ ಬಾರಿಯ ಏಷ್ಯಾಕಪ್ಗೂ ಮುನ್ನವೇ ಪಾಕಿಸ್ತಾನ್ ತಂಡದ ವಿಶ್ವಕಪ್ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಬಾರಿ ಕೂಡ ಬಾಬರ್ ಪಡೆ ಕಡು ಹಸಿರು ಬಣ್ಣದ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಆದರೆ 1999 ರ ಏಕದಿನ ವಿಶ್ವಕಪ್ ಜೆರ್ಸಿಯಲ್ಲಿ ಕಾಣಿಸಿಕೊಂಡಂತೆ ನೂತನ ಕಿಟ್ ಮುಂಭಾಗದಲ್ಲಿ ನಕ್ಷತ್ರದ ವಿನ್ಯಾಸವನ್ನು ಬಳಸಲಾಗಿದೆ. ಅಲ್ಲದೆ ನೂತನ ಜೆರ್ಸಿಗೆ ‘ಸ್ಟಾರ್ ನೇಷನ್ ಜೆರ್ಸಿ’ ಎಂದು ಹೆಸರಿಡಲಾಗಿದೆ.
ಸದ್ಯ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಮಾತ್ರ ವಿಶ್ವಕಪ್ ಜೆರ್ಸಿಯನ್ನು ಅನಾವರಣಗೊಳಿಸಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಇತರೆ ತಂಡಗಳ ವರ್ಲ್ಡ್ಕಪ್ ಕಿಟ್ನ ವಿನ್ಯಾಸಗಳು ಹೊರಬೀಳಲಿದೆ.
ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ. ಅಹಮದಾಬಾದ್ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.
ಇನ್ನು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ: Mohammed Siraj: 6 ವಿಕೆಟ್ 10 ದಾಖಲೆಗಳು: ಇದು ಮಿಯಾನ್ ಮ್ಯಾಜಿಕ್
ಹಾಗೆಯೇ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಏಕದಿನ ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.