ನೊವಾಕ್ ಜೊಕೊವಿಕ್ (Novak Djokovic) 21ನೇ ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ. ವಿಂಬಲ್ಡನ್ 2022 (Wimbledon 2022)ರ ಫೈನಲ್‌ನಲ್ಲಿ, ಜೊಕೊವಿಕ್ 4-6, 6-2, 6-4, 7-6 ರಿಂದ 4-6, 6-2, 6-4, 7-6 ರಲ್ಲಿ ನಿಕ್ ಕಿರಿಯೊಸ್ ಅವರನ್ನು ಸೋಲಿಸಿ ಗ್ರಾಸ್ ಕೋರ್ಟ್‌ನಲ್ಲಿ ತಮ್ಮ 7 ನೇ ಪ್ರಶಸ್ತಿಯನ್ನು ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಈ ಗೆಲುವಿಗಾಗಿ ಜೊಕೊವಿಕ್ ಸಿಕ್ಕಿದ್ದು,ಬರೋಬ್ಬರಿ 19.23 ಕೋಟಿ ರೂ. ಬಹುಮಾನ. ಅಂದಿನಿಂದ, ಜೊಕೊವಿಕ್ ಅವರ ನಿವ್ವಳ ಮೌಲ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹುಡುಕಾಟ ನಡೆಸಲಾಗುತ್ತಿದೆ. ಜೊಕೊವಿಕ್ ಅಲ್ಲದೆ, ಭಾರತೀಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ (Virat Kohli) ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ನಿವ್ವಳ ಮೌಲ್ಯವನ್ನು ತಿಳಿಯಲು ಅಭಿಮಾನಿಗಳು ಆಸಕ್ತಿ ತೋರಿಸುತ್ತಿದ್ದಾರೆ. 21 ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತನ ನಿವ್ವಳ ಮೌಲ್ಯದ ಬಗ್ಗೆ ಮಾತನಾಡುವುದಾದರೆ, ಅವರು ಈ ವಿಷಯದಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗಿಂತ ಬಹಳ ಮುಂದಿದ್ದಾರೆ.
ದಿನಕ್ಕೆ ಕೊಹ್ಲಿ ಆದಾಯ 2 ಕೋಟಿ ರೂ
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ನಿವ್ವಳ ಮೌಲ್ಯ 892 ಕೋಟಿ ರೂ. ಎಂದು ಹೇಳಲಾಗುತ್ತದೆ. ಇದು ಅವರ ಸಂಬಳ, ಜಾಹೀರಾತು ಮತ್ತು ಪಂದ್ಯದ ಗಳಿಕೆಯನ್ನು ಒಳಗೊಂಡಿದೆ. ಅಂಕಿಅಂಶಗಳ ಪ್ರಕಾರ, ವಿರಾಟ್ ತಿಂಗಳ ಆದಾಯ 4 ಕೋಟಿ ರೂ. ಆಗಿದ್ದು, ವಾರ್ಷಿಕ ಆದಾಯ 48 ಕೋಟಿ ಇದೆ. ಕೊಹ್ಲಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಎಫ್‌ಸಿ ಗೋವಾದ ಸಹ-ಮಾಲೀಕರಾಗಿದ್ದು, ಇದರಿಂದಲೂ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ವಿರಾಟ್ ಜಾಹೀರಾತಿನಿಂದಲೂ ಕೋಟಿ ಕೋಟಿ ಸಂಪಾಧಿಸುತ್ತಿದ್ದು, ಕೇವಲ ಜಾಹೀರಾತಿನಿಂದಲೇ 17 ಕೋಟಿಗೂ ಹೆಚ್ಚು ಆದಾಯ ಗಳಿಸುತ್ತಾರೆ. ಈ ಎಲ್ಲಾ ಲೆಕ್ಕಾಚಾರವನ್ನು ಗಮನಿಸಿದಾಗ ಕೊಹ್ಲಿ ಕೇವಲ ದಿನವೊಂದಕ್ಕೆ 2 ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ.
ನಿವೃತ್ತಿಯ ನಂತರವೂ ಸಚಿನ್ ಗಳಿಕೆ ವಿರಾಟ್ ಗಿಂತ ಉತ್ತಮವಾಗಿದೆ
ಸಚಿನ್ ತೆಂಡೂಲ್ಕರ್ ಅವರ ಒಟ್ಟು ಸಂಪತ್ತು ವಿರಾಟ್ ಕೊಹ್ಲಿಗಿಂತ ಹೆಚ್ಚು. ತೆಂಡೂಲ್ಕರ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಆದರೆ ಅವರು ಇನ್ನೂ ಜಾಹೀರಾತು, ಆಸ್ತಿ, ಹೂಡಿಕೆಯಿಂದ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ತೆಂಡೂಲ್ಕರ್ ಎರಡು ರೆಸ್ಟೋರೆಂಟ್‌ಗಳನ್ನು ಹೊಂದಿದ್ದು, ಇದರ ನಿವ್ವಳ ಮೌಲ್ಯ 1240 ಕೋಟಿ ರೂ. ಎಂದು ಹೇಳಲಾಗುತ್ತದೆ. ತೆಂಡೂಲ್ಕರ್ ಬಳಿ 10 ಐಷಾರಾಮಿ ಕಾರುಗಳಿವೆ. ಜೊತೆಗೆ ಮುಂಬೈನಲ್ಲಿರುವ ಅವರ ಮನೆಯ ಬೆಲೆ 60 ಕೋಟಿಗೂ ಹೆಚ್ಚು ಎಂದು ಹೇಳಲಾಗುತ್ತದೆ.
ಜೊಕೊವಿಕ್ 17 ಬಿಲಿಯನ್‌ಗಿಂತಲೂ ಹೆಚ್ಚು ನಿವ್ವಳ ಸಂಪತ್ತನ್ನು ಹೊಂದಿದ್ದಾರೆ
ನೊವಾಕ್ ಜೊಕೊವಿಕ್ 17 ಬಿಲಿಯನ್‌ಗಿಂತಲೂ ಹೆಚ್ಚು ನಿವ್ವಳ ಸಂಪತ್ತನ್ನು ಹೊಂದಿದ್ದಾರೆ. ಸೆಲೆಬ್ರಿಟಿನೆಟ್‌ವರ್ತ್ ಪ್ರಕಾರ, ಜುಲೈ 2021 ರಲ್ಲಿ ಜೊಕೊವಿಕ್ ಅವರ ಆದಾಯವು ಮೊದಲ ಬಾರಿಗೆ 150 ಮಿಲಿಯನ್ ತಲುಪಿದೆ. 2021 ರಲ್ಲಿ, ಜೊಕೊವಿಕ್ ಟೆನಿಸ್ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಹೆಚ್ಚಿನ ಹಣವನ್ನು ಗಳಿಸಿದರು. ನೊವಾಕ್ ಕೇವಲ ಆ ಒಂದು ಸೀಸನ್ನಲ್ಲಿ 12 ಮಿಲಿಯನ್ ಗಳಿಸಿದ್ದರು ಎಂದು ವರದಿಯಾಗಿದೆ. 2012 ರಲ್ಲಿ, ಜೊಕೊವಿಕ್ ಐದು ವರ್ಷಗಳ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರಿಂದ ಅವರು ಪ್ರತಿ ವರ್ಷ 8 ಮಿಲಿಯನ್ ಯುರೋಗಳಷ್ಟು ಆದಾಯ ಗಳಿಸಿದ್ದರು. ಜೂನ್ 2017 ಮತ್ತು ಜೂನ್ 2018 ರ ನಡುವೆ, ಜೊಕೊವಿಕ್ ಸಂಬಳ ಮತ್ತು ಜಾಹೀರಾತಿನಿಂದ 24 ಮಿಲಿಯನ್ ಆದಾಯ ಗಳಿಸಿದ್ದಾರೆ. ಅದರ ಮುಂದಿನ ವರ್ಷ ನೊವಾಕ್ ಆದಾಯವು 50 ಮಿಲಿಯನ್ ತಲುಪಿತ್ತು ಎಂದು ವರದಿಯಾಗಿದೆ.