AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ODI World Cup 2023 Schedule: ಮೋದಿ ಮೈದಾನದಲ್ಲಿ ಭಾರತ- ಪಾಕ್ ಫೈಟ್! ವಿಶ್ವಕಪ್ ಕರಡು ವೇಳಾಪಟ್ಟಿ ಹೀಗಿದೆ

ODI World Cup 2023 Schedule: ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಗಳು ನವೆಂಬರ್ 15 ಮತ್ತು 16 ರಂದು ನಡೆಯುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ, ಅದರ ಅಂತಿಮ ಪಂದ್ಯವು ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.

ODI World Cup 2023 Schedule: ಮೋದಿ ಮೈದಾನದಲ್ಲಿ ಭಾರತ- ಪಾಕ್ ಫೈಟ್! ವಿಶ್ವಕಪ್ ಕರಡು ವೇಳಾಪಟ್ಟಿ ಹೀಗಿದೆ
ಭಾರತ- ಪಾಕ್ ಮುಖಾಮುಖಿImage Credit source: insidesport
ಪೃಥ್ವಿಶಂಕರ
|

Updated on:Jun 12, 2023 | 7:41 AM

Share

ಒಂದೆಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ (WTC Final) ಪಂದ್ಯ ಮುಗಿದಿದ್ದು, ಇನ್ನೊಂದೆಡೆ ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ 2023ರ (ODI World Cup 2023) ನೀಲನಕ್ಷೆ ಸಿದ್ಧವಾಗಿದೆ. ಬಿಸಿಸಿಐ (BCCI) ಕರಡು ವೇಳಾಪಟ್ಟಿಯನ್ನು ಐಸಿಸಿಗೆ (ICC) ಹಸ್ತಾಂತರಿಸಿದ್ದು, ಎಲ್ಲಾ ಸದಸ್ಯ ರಾಷ್ಟ್ರಗಳ ಅನುಮೋದನೆ ಪಡೆದ ನಂತರ ಮುಂದಿನ ವಾರದ ವೇಳೆಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆಗಳಿವೆ. ಈ ಬಾರಿಯ ಏಕದಿನ ವಿಶ್ವಕಪ್ 45 ದಿನಗಳವರೆಗೆ ನಡೆಯಲ್ಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಿಂದ ಆರಂಭಗೊಂಡು ಈ ಮೈದಾನದಲ್ಲಿಯೇ ಕೊನೆಗೊಳ್ಳಲಿದೆ. ಅಂದರೆ ಅಕ್ಟೋಬರ್ 5 ರಂದು ನಡೆಯಲಿರುವ ಆರಂಭಿಕ ಪಂದ್ಯ ಮತ್ತು ನವೆಂಬರ್ 19 ರಂದು ನಡೆಯಲಿರುವ ಫೈನಲ್ ಪಂದ್ಯದ ಮೈದಾನ ಒಂದೇ ಆಗಿರುತ್ತದೆ.

ಆಸ್ಟ್ರೇಲಿಯಾ ವಿರುದ್ಧ ಭಾರತದ ಮೊದಲ ಪಂದ್ಯ

ಏಕದಿನ ವಿಶ್ವಕಪ್​ನ ಆರಂಭಿಕ ಪಂದ್ಯವು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಇನ್ನು ಟೀಂ ಇಂಡಿಯಾದ ಮೊದಲ ಪಂದ್ಯ ಯಾವಾಗ ಎಂಬುದನ್ನು ನೋಡುವುದಾದರೆ, ಭಾರತವು ಈ ಪಂದ್ಯಾವಳಿಯಲ್ಲಿ ತನ್ನ ಮೊದಲ ಪಂದ್ಯವನ್ನು ಆರಂಭಿಕ ಪಂದ್ಯದ ಮೂರು ದಿನಗಳ ನಂತರ ಅಂದರೆ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

WTC Final 2023: ಆಫ್ರಿಕಾ ಬಳಿ ಇದ್ದ ಚೋಕರ್ಸ್​ ಪಟ್ಟವನ್ನು ತನ್ನದಾಗಿಸಿಕೊಂಡ ಟೀಂ ಇಂಡಿಯಾ

ಆದರೆ, ಬಿಸಿಸಿಐ ಹಂಚಿಕೊಂಡಿರುವ ಕರಡು ವೇಳಾಪಟ್ಟಿಯಲ್ಲಿ ಸೆಮಿಫೈನಲ್‌ ಪಂದ್ಯಗಳ ಬಗ್ಗೆ ವಿವರ ನೀಡಿಲ್ಲ. ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಗಳು ನವೆಂಬರ್ 15 ಮತ್ತು 16 ರಂದು ನಡೆಯುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ, ಅದರ ಅಂತಿಮ ಪಂದ್ಯವು ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.

ಅಕ್ಟೋಬರ್ 15 ರಂದು ಭಾರತ- ಪಾಕ್ ಮುಖಾಮುಖಿ

ಇನ್ನು ಬಿಸಿಸಿಐ ಸಲ್ಲಿಸಿರುವ ಕರಡು ವೇಳಾಪಟ್ಟಿಯಲ್ಲಿ ಭಾರತದ ವೇಳಾಪಟ್ಟಿ ಹೇಗಿದೆ ಎಂಬುದನ್ನು ನೋಡುವುದಾದರೆ.. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ ಆಡಲಿದೆ. ಇದಾದ ನಂತರ ಅಕ್ಟೋಬರ್ 11 ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 15 ರಂದು ಅಹಮದಾಬಾದ್ ಮೈದಾನದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಇದರರ್ಥ ಪಾಕಿಸ್ತಾನ ವಿರುದ್ಧದ ಪಂದ್ಯವು ಟೂರ್ನಿಯೊಳಗೆ ಭಾರತಕ್ಕೆ ಮೂರನೇ ಪಂದ್ಯವಾಗಿದ್ದು, ಪಾಕ್ ತಂಡವನ್ನು ಎದುರಿಸುವುದಕ್ಕೂ ಮುನ್ನ ಭಾರತ ಎರಡು ಪಂದ್ಯಗಳನ್ನು ಆಡಿರಲಿದೆ.

ಪಾಕಿಸ್ತಾನದೊಂದಿಗೆ ಸೆಣಸಾಡಿದ ನಂತರ ಭಾರತ ತನ್ನ ನೆರೆಯ ಬಾಂಗ್ಲಾದೇಶವನ್ನು ಎದುರಿಸಲಿದೆ. ಅಕ್ಟೋಬರ್ 19 ರಂದು ಪುಣೆಯಲ್ಲಿ ಈ ಪಂದ್ಯ ನಡೆಯಲಿದೆ. ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ. ಭಾರತ ತನ್ನ ಆರನೇ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಅಕ್ಟೋಬರ್ 29 ರಂದು ಲಕ್ನೋದಲ್ಲಿ ಆಡಲಿದೆ.

ಇದಾದ ನಂತರ ನವೆಂಬರ್ 2 ರಂದು ಮುಂಬೈನಲ್ಲಿ ಅರ್ಹತಾ ಸುತ್ತಿನಲ್ಲಿ ಗೆದ್ದು ವಿಶ್ವಕಪ್​ಗೆ ಎಂಟ್ರಿಕೊಡುವ ತಂಡದ ವಿರುದ್ಧ ಟೀಂ ಇಂಡಿಯಾ ಪಂದ್ಯವನ್ನು ಆಡಲಿದೆ. ಬಳಿಕ ನವೆಂಬರ್ 5 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ . ನವೆಂಬರ್ 11 ರಂದು ಟೀಂ ಇಂಡಿಯಾ ತನ್ನ ಕೊನೆಯ ಲೀಗ್ ಪಂದ್ಯವನ್ನು ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಎರಡನೇ ತಂಡದೊಂದಿಗೆ ಬೆಂಗಳೂರಿನಲ್ಲಿ ಆಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:40 am, Mon, 12 June 23