PAK vs NZ: ಪಾಕ್ ತಂಡದಿಂದ ರಿಜ್ವಾನ್ ಔಟ್! 4 ವರ್ಷಗಳ ಬಳಿಕ ತಂಡಕ್ಕೆ ಎಂಟ್ರಿಕೊಟ್ಟ ಮಾಜಿ ನಾಯಕ
PAK vs NZ: ಕಿವೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಸರ್ಫರಾಜ್ ಅಹ್ಮದ್ ಸುಮಾರು 4 ವರ್ಷಗಳ ನಂತರ ಪಾಕಿಸ್ತಾನದ ಟೆಸ್ಟ್ ತಂಡಕ್ಕೆ ಮರಳುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತವರಿನಲ್ಲಿಯೇ ವೈಟ್ವಾಶ್ ಮುಖಭಂಗ ಅನುಭವಿಸಿದ್ದ ಪಾಕಿಸ್ತಾನ ತಂಡ ಇದೀಗ ನ್ಯೂಜಿಲೆಂಡ್ (Pakistan vs Newzealand) ವಿರುದ್ಧ ಟೆಸ್ಟ್ ಸರಣಿ ಆರಂಭಿಸಿದ್ದು, ಇಂದಿನಿಂದ ಕರಾಚಿಯಲ್ಲಿ ಮೊದಲ ಟೆಸ್ಟ್ ಆರಂಭವಾಗಿದೆ. ಟಾಸ್ ಬಳಿಕ ಪಾಕ್ ನಾಯಕ ಬಾಬರ್ ಅಜಮ್ (Babar Azam) ತಮ್ಮ ತಂಡವನ್ನು ಪ್ರಕಟಿಸಿದ್ದು, ಅದರಲ್ಲಿ ಕೆಲವು ಅಚ್ಚರಿಯ ಆಯ್ಕೆಗಳು ಕಂಡುಬಂದಿವೆ. ಪಾಕ್ ತಂಡದಲ್ಲಿ ಆಗಿರುವ ಒಂದು ದೊಡ್ಡ ಬದಲಾವಣೆ ಎಂದರೆ ಅದು ಮೊಹಮ್ಮದ್ ರಿಜ್ವಾನ್ರನ್ನು (Mohammad Rizwan) ತಂಡದಿಂದ ಕೈಬಿಟ್ಟಿರುವುದಾಗಿದೆ. ಅಲ್ಲದೆ ಅವರ ಸ್ಥಾನದಲ್ಲಿ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸರ್ಫರಾಜ್ ಅಹ್ಮದ್ (Sarfaraz Ahmed) ಆಯ್ಕೆಯಾಗಿದ್ದಾರೆ.
ವಾಸ್ತವವಾಗಿ ಮೊಹಮ್ಮದ್ ರಿಜ್ವಾನ್ ಅವರನ್ನು ಪಾಕ್ ತಂಡದ ಭವಿಷ್ಯದ ನಾಯಕ ಎಂತಲೇ ಹೇಳಲಾಗುತ್ತಿತ್ತು. ಅಲ್ಲದೆ ಪಾಕ್ ತಂಡದಲ್ಲಿ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಅವರ ಯುಗ ಅಂತ್ಯವಾಗಿದೆ ಎಂತಲೇ ಹೇಳಲಾಗಿತ್ತು. ಆದರೀಗ ಪಾಕ್ ಕ್ರಿಕೆಟ್ ಮಂಡಳಿಯಲ್ಲಿ ಆಗುತ್ತಿರುವ ಬದಲಾವಣೆಗಳೊಂದಿಗೆ ತಂಡದಲ್ಲೂ ಕೆಲವು ಬದಲಾವಣೆಗಳು ಕಂಡುಬರುತ್ತಿವೆ.
Boxing Day Test: ಇಂದಿನಿಂದ ಬಾಕ್ಸಿಂಗ್ ಡೇ ಟೆಸ್ಟ್ ಆರಂಭ; ಏನಿದರ ಇತಿಹಾಸ? ಇಲ್ಲಿದೆ ಪೂರ್ಣ ವಿವರ
4 ವರ್ಷಗಳ ನಂತರ ಸರ್ಫರಾಜ್ ಅಹ್ಮದ್ ತಂಡಕ್ಕೆ ಎಂಟ್ರಿ
ಕಿವೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಸರ್ಫರಾಜ್ ಅಹ್ಮದ್ ಸುಮಾರು 4 ವರ್ಷಗಳ ನಂತರ ಪಾಕಿಸ್ತಾನದ ಟೆಸ್ಟ್ ತಂಡಕ್ಕೆ ಮರಳುತ್ತಿದ್ದಾರೆ. ಜನವರಿ 2019 ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದ ಸರ್ಫರಾಜ್, ಆ ಪಂದ್ಯದಲ್ಲಿ 10 ಕ್ಯಾಚ್‌ಗಳನ್ನು ಹಿಡಿದಿದಲ್ಲದೆ, ಅರ್ಧ ಶತಕವನ್ನು ಸಹ ಬಾರಿಸಿದ್ದರು. ಆದರೆ ಆ ನಂತರ ಸರ್ಫರಾಜ್ ಪಾಕ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಈಗ ತಂಡಕ್ಕೆ ರೀ ಎಂಟ್ರಿಕೊಟ್ಟಿರುವ ಪಾಕಿಸ್ತಾನದ ಹಿರಿಯ ಆಟಗಾರ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಮೀರ್ ಹಮ್ಜಾಗೂ ಅವಕಾಶ
ಸರ್ಫರಾಜ್ ಹೊರತುಪಡಿಸಿ, ಮಿರ್ ಹಮ್ಜಾ ಕೂಡ ಪಾಕಿಸ್ತಾನ ತಂಡಕ್ಕೆ ಮರಳಿದ್ದಾರೆ. ಗಾಯಗೊಂಡಿರುವ ನಸೀಮ್ ಶಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಮಿರ್ ಹಮ್ಜಾ, ಕೊನೆಯ ಬಾರಿಗೆ 2018 ರಲ್ಲಿ ಪಾಕಿಸ್ತಾನ ಪರ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.
ಈ ಎರಡು ದೊಡ್ಡ ಬದಲಾವಣೆಗಳನ್ನು ಹೊರತುಪಡಿಸಿ, ಪಾಕಿಸ್ತಾನ ತಂಡದಲ್ಲಿ ಉಳಿದ ಆಟಗಾರರು ಈ ಹಿಂದೆ ಇಂಗ್ಲೆಂಡ್ ವಿರುದ್ಧ ಆಡಿದ ಆಟಗಾರರೇ ಆಗಿದ್ದಾರೆ. ಈ ಪಂದ್ಯದಲ್ಲಿ ಪಾಕ್ ಪರ ಆರಂಭಿಕರಾಗಿ ಇಮಾಮ್-ಉಲ್-ಹಕ್ ಹಾಗೂ ಅಬ್ದುಲ್ಲಾ ಶಫೀಕ್ ಕಣಕ್ಕಿಳಿದರೆ, ಶಾನ್ ಮಸೂದ್, ಬಾಬರ್ ಅಜಮ್, ಸೌದ್ ಶಕೀಲ್ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಬಲಪಡಿಸುತ್ತಿದ್ದಾರೆ.
ತಂಡದ ವೇಗದ ಬೌಲಿಂಗ್ ಜಹಾನ್ ಹಮ್ಜಾ ಮತ್ತು ಮೊಹಮ್ಮದ್ ವಾಸಿಮ್ ಮೇಲೆ ಅವಲಂಬಿತವಾಗಿದೆ. ಅದೇ ಸಮಯದಲ್ಲಿ, ಸ್ಪಿನ್ ವಿಭಾಗದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಂಚಲನ ಮೂಡಿಸಿದ್ದ ಅಬ್ರಾರ್ ಅಹ್ಮದ್ ಇಲ್ಲಿಯೂ ತಮ್ಮ ಮ್ಯಾಜಿಕ್ ಕೆಲಸ ಮಾಡಲಿದ್ದಾರೆ.
Our team for the first Test ??#PAKvNZ | #TayyariKiwiHai pic.twitter.com/gGCZ38yuMe
— Pakistan Cricket (@TheRealPCB) December 26, 2022
ಕಿವೀಸ್ ವಿರುದ್ಧ ಪಾಕ್ ತಂಡ ಹೀಗಿದೆ
ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಶಾನ್ ಮಸೂದ್, ಬಾಬರ್ ಆಜಮ್ (ನಾಯಕ), ಸೌದ್ ಶಕೀಲ್, ಸರ್ಫರಾಜ್ ಅಹ್ಮದ್, ಅಘಾ ಸಲ್ಮಾನ್, ನೌಮನ್ ಅಲಿ, ಮೊಹಮ್ಮದ್ ವಾಸಿಂ, ಮೀರ್ ಹಮ್ಜಾ, ಅಬ್ರಾರ್ ಅಹ್ಮದ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:23 am, Mon, 26 December 22