PAK vs WI: ‘ನಮ್ಮನ್ನು ಅವಮಾನಿಸಬೇಡಿ’; ಪತ್ರಕರ್ತರ ಪ್ರಶ್ನೆಗೆ ಸಿಟ್ಟಾದ ಪಾಕ್ ನಾಯಕ
PAK vs WI: ಮೊದಲ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಪಾಕಿಸ್ತಾನ ಎರಡನೇ ಟೆಸ್ಟ್ ನಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಯಿತು. ವೆಸ್ಟ್ ಇಂಡೀಸ್ 35 ವರ್ಷಗಳ ನಂತರ ಪಾಕಿಸ್ತಾನವನ್ನು ಅವರ ನೆಲದಲ್ಲಿಯೇ ಮಣಿಸಿತು. ಸೋಲಿನ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಪಾಕಿಸ್ತಾನದ ನಾಯಕ ಶಾನ್ ಮಸೂದ್, ಪತ್ರಕರ್ತರ ಪ್ರಶ್ನೆಗೆ ಕೋಪಗೊಂಡಿದಲ್ಲದೆ ನಮ್ಮನ್ನು ಅವಮಾನಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಮುಲ್ತಾನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವು ಸಾಧಿಸಿದೆ. ಈ ಟೆಸ್ಟ್‌ನಲ್ಲಿ ಕೆರಿಬಿಯನ್ ತಂಡ ಪಾಕಿಸ್ತಾನವನ್ನು 120 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ವೆಸ್ಟ್ ಇಂಡೀಸ್ ಈ ಟೆಸ್ಟ್ ಪಂದ್ಯವನ್ನು ಗೆದ್ದಿದ್ದಲ್ಲದೆ, ಸರಣಿಯನ್ನು ಗೆಲ್ಲುವ ಪಾಕಿಸ್ತಾನದ ಕನಸನ್ನು ಭಗ್ನಗೊಳಿಸಿದೆ. ಇದರ ಜೊತೆಗೆ ಮುಲ್ತಾನ್ ಸುಲ್ತಾನ್ ಆಗುವ ಮೂಲಕ 35 ವರ್ಷಗಳ ನಂತರ ಪಾಕಿಸ್ತಾನವನ್ನು ತನ್ನ ಸ್ವಂತ ಮನೆಯಲ್ಲಿಯೇ ಮುಜುಗರಕ್ಕೀಡು ಮಾಡಿದೆ. ಇದೇ ಅವಮಾನದೊಂದಿಗೆ ಪತ್ರಿಕಾಗೋಷ್ಠಿಯನ್ನು ಎದುರಿಸಿದ ಪಾಕ್ ನಾಯಕ ಶಾನ್ ಮಸೂದ್, ಪತ್ರಕರ್ತರ ಪ್ರಶ್ನೆಗೆ ಸಿಟ್ಟಾಗಿದ್ದು, ನಮ್ಮನ್ನು ಅವಮಾನಿಸಬೇಡಿ ಎಂದು ಕೇಳಿಕೊಂಡಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಮಸೂದ್ ಗರಂ
35 ವರ್ಷಗಳ ನಂತರ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯವನ್ನು ಸೋತ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾನ್ ಮಸೂದ್, ಪತ್ರಕರ್ತರ ಯಾವ ಪ್ರಶ್ನೆಗೂ ಸರಿಯಾದ ಉತ್ತರ ನೀಡಲಿಲ್ಲ. ಅಲ್ಲದೆ ಪತ್ರಕರ್ತರ ಪ್ರಶ್ನೆಗೆ ಸಿಟ್ಟಾದ ಶಾನ್ ಮಸೂದ್, ನಮ್ಮನ್ನು ಅವಮಾನಿಸಬೇಡಿ, ನಾವೂ ನಿಮ್ಮ ಜನ. ನಿಮ್ಮ ಆಟಗಾರರನ್ನು ನೀವು ಗೌರವಿಸಬೇಕು ಎಂದು ಕೇಳಿಕೊಂಡಿದ್ದಾರೆ.
ವಾಸ್ತವವಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸೋತ ನಂತರ, ಶಾನ್ ಮಸೂದ್ ಪತ್ರಕರ್ತರಿಂದ ತೀಕ್ಷ್ಣವಾದ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಈ ವೇಳೆ ಪತ್ರಕರ್ತರೊಬ್ಬರು, ‘ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ನಾವು 6ನೇ ಸ್ಥಾನದಲ್ಲಿದ್ದೇವು. ಎರಡನೇ ಆವೃತ್ತಿಯಲ್ಲಿ 6ನೇ ಸ್ಥಾನ, ಇದೀಗ ನಾವು ಮೂರನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದೇವೆ. ಹೀಗಾಗಿ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ನೀವೇ ತೆಗೆದುಕೊಳ್ಳುತ್ತೀರಾ ಅಥವಾ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ನಿಮ್ಮನ್ನು ಕೆಳಗಿಳಿಸುವವರೆಗೂ ಕಾಯುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯಿಂದ ಆಘಾತಕ್ಕೊಳಗಾದ ಶಾನ್ ಮಸೂದ್ ಯಾವುದೇ ಪ್ರತಿಕ್ರಿಯೆ ನೀಡದೆ, ‘ಮುಂದಿನ ಪ್ರಶ್ನೆ’ ಎಂದರು.
Ye gussa ground main dikhao to zada acha lagy ga shan masood#PAKvsWI #WIvsPAK #PakistanCricket pic.twitter.com/oHOaY5E59L
— Urooj Jawed🇵🇰 (@uroojjawed12) January 27, 2025
ನಮ್ಮನ್ನು ಅವಮಾನಿಸಬೇಡಿ
ಆದಾರೂ ಅದೇ ಪತ್ರಕರ್ತ ಪದೇ ಪದೇ ಪ್ರಶ್ನೆಗಳನ್ನು ಕೇಳಲು ಮುಂದಾದಾಗ ಪ್ರತಿಕ್ರಿಸಿದ ಶಾನ್ ಮಸೂದ್, ‘ಕಳೆದ ಸರಣಿಯ ಬಗ್ಗೆ ನೀವು ಮಾತನಾಡಿದ ರೀತಿಗೆ ನಾನು ಯಾವುದೇ ಉತ್ತರವನ್ನು ನೀಡಲು ಸಾಧ್ಯವಿಲ್ಲ. ನಿಮ್ಮ ಮಾಹಿತಿಯು ಸಂಪೂರ್ಣವಾಗಿ ತಪ್ಪಾಗಿದೆ. ತಂಡವನ್ನು ಘೋಷಿಸುವುದರಿಂದ ಅಥವಾ ಮಾಡದಿರುವುದರಿಂದ ವಿಷಯಗಳು ಬದಲಾಗುವುದಿಲ್ಲ. ಇದೀಗ ಆರಂಭವಾದ ಎರಡನೇ ಟೆಸ್ಟ್‌ನಲ್ಲಿ ನಾವು ಅಭ್ಯಾಸ ಮಾಡದ ಕಾರಣ ತಂಡವನ್ನು ಪ್ರಕಟಿಸಲಿಲ್ಲ. ನಾನು ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ ಆದರೆ ನೀವು ನಿಮ್ಮ ಆಟಗಾರರನ್ನು ಗೌರವಿಸಬೇಕು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ನಾವೂ ನಿಮ್ಮ ಜನ. ಯಾರನ್ನಾದರೂ ಈ ರೀತಿ ಅವಮಾನಿಸುವುದನ್ನು ಯಾರೂ ಸಹಿಸುವುದಿಲ್ಲ. ನೀವು ಯಾರನ್ನಾದರೂ ಕೆಟ್ಟದಾಗಿ ಬಿಂಭಿಸಬೇಕೆಂದರೆ ನೀವು ಅದನ್ನು ಮಾಡಬಹುದು ಎಂದಿದ್ದಾರೆ.
120 ರನ್‌ಗಳಿಂದ ಸೋತ ಪಾಕಿಸ್ತಾನ
ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ಗೆದ್ದಿತ್ತು. ಆದರೆ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 120 ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 163 ರನ್‌ಗಳಿಗೆ ಆಲೌಟ್ ಮಾಡಿದ ಪಾಕಿಸ್ತಾನ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ 154 ರನ್‌ಗಳಿಗೆ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ 244 ರನ್ ಕಲೆಹಾಕಿದರೆ, ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ 133ರನ್‌ಗಳಿಂದ ಸೋಲು ಕಂಡಿತು. ವೆಸ್ಟ್ ಇಂಡೀಸ್ ಗೆಲುವಿನ ಹೀರೋ ಆಗಿದ್ದು ಜೋಮೆಲ್ ವಾರಿಕಾನ್. ಎರಡೂ ಇನ್ನಿಂಗ್ಸ್‌ಗಳಲ್ಲಿ 9 ವಿಕೆಟ್‌ಗಳನ್ನು ಕಬಳಿಸುವುದರ ಜೊತೆಗೆ, ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ 54 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Mon, 27 January 25