ಸೂಪರ್-8 ತಲುಪಲು ಪಾಕಿಸ್ತಾನಕ್ಕೆ ಬೇಕು ಭಾರತದ ಸಹಾಯ: ಬಾಬರ್ ಪಡೆಯ ಭವಿಷ್ಯ ಇಲ್ಲಿದೆ ನೋಡಿ
ಭಾರತ ಮತ್ತು ಅಮೆರಿಕ ಈವರೆಗೆ ಆಡಿರುವ ಎರಡು ಪಂದ್ಯಗಳಲ್ಲಿ ಎರಡನ್ನೂ ಗೆದ್ದು 4 ಅಂಕಗಳನ್ನು ಹೊಂದಿವೆ. ಪಾಕಿಸ್ತಾನ ತನ್ನ ಮುಂದಿನ ಎರಡು ಪಂದ್ಯಗಳನ್ನು ಗೆದ್ದರೂ ಕೇವಲ 4 ಅಂಕಗಳ ವರೆಗೆ ತಲುಪುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಬಾಬರ್ ಪಡೆ ಮೊದಲು ತಮ್ಮ ಎರಡೂ ಪಂದ್ಯಗಳಲ್ಲಿ ಕೆನಡಾ ಮತ್ತು ಐರ್ಲೆಂಡ್ ಅನ್ನು ಸೋಲಿಸಬೇಕಾಗುತ್ತದೆ. ಇದರೊಂದಿಗೆ ಅಮೆರಿಕ ಮುಂದಿನ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಬೇಕು. ಭಾರತವು ಅಮೆರಿಕ ಮತ್ತು ಕೆನಡಾವನ್ನು ಎದುರಿಸಲಿದೆ.
2024ರ ಟಿ20 ವಿಶ್ವಕಪ್‌ನ ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ತೋರಿ ಸೋತಿದೆ. ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋಲು ಕಂಡಿದ್ದ ಪಾಕಿಸ್ತಾನ, ಎರಡನೇ ಪಂದ್ಯದಲ್ಲಿ ಭಾರತ ವಿರುದ್ಧ ಕೂಡ ಗೆಲುವು ಕಾಣಲು ಸಾಧ್ಯವಾಗಲಿಲ್ಲ. ಎ ಗುಂಪಿನಲ್ಲಿ ಪಾಕಿಸ್ತಾನ ಇನ್ನೆರಡು ಪಂದ್ಯಗಳನ್ನು ಆಡಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಸೂಪರ್-8 ತಲುಪುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆದಾಗ್ಯೂ, ಪಾಕಿಸ್ತಾನ ತಂಡವು ಮುಂದಿನ ಸುತ್ತನ್ನು ತಲುಪುವ ಅವಕಾಶ ಹೊಂದಿದೆ. ಆದರೆ, ಇದಕ್ಕಾಗಿ ಅವರಿಗೆ ಭಾರತ ಹಾಗೂ ಐರ್ಲೆಂಡ್‌ನ ನೆರವು ಬೇಕಾಗುತ್ತದೆ.
ಟಿ20 ವಿಶ್ವಕಪ್ 2024 ರಲ್ಲಿ A ಗುಂಪಿನ ಉಳಿದ ಪಂದ್ಯಗಳು
- ಪಾಕಿಸ್ತಾನ vs ಕೆನಡಾ – ಜೂನ್ 11
- ಅಮೆರಿಕ vs ಭಾರತ – ಜೂನ್ 12
- ಅಮೆರಿಕ vs ಐರ್ಲೆಂಡ್ – ಜೂನ್ 14
- ಭಾರತ vs ಕೆನಡಾ – ಜೂನ್ 15
- ಪಾಕಿಸ್ತಾನ vs ಐರ್ಲೆಂಡ್ – ಜೂನ್ 16
ಭಾರತ ಮತ್ತು ಅಮೆರಿಕ ಈವರೆಗೆ ಆಡಿರುವ ಎರಡು ಪಂದ್ಯಗಳಲ್ಲಿ ಎರಡನ್ನೂ ಗೆದ್ದು 4 ಅಂಕಗಳನ್ನು ಹೊಂದಿವೆ. ಪಾಕಿಸ್ತಾನ ತನ್ನ ಮುಂದಿನ ಎರಡು ಪಂದ್ಯಗಳನ್ನು ಗೆದ್ದರೂ ಕೇವಲ 4 ಅಂಕಗಳ ವರೆಗೆ ತಲುಪುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಬಾಬರ್ ಪಡೆ ಮೊದಲು ತಮ್ಮ ಎರಡೂ ಪಂದ್ಯಗಳಲ್ಲಿ ಕೆನಡಾ ಮತ್ತು ಐರ್ಲೆಂಡ್ ಅನ್ನು ಸೋಲಿಸಬೇಕಾಗುತ್ತದೆ. ಇದರೊಂದಿಗೆ ಅಮೆರಿಕ ಮುಂದಿನ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಬೇಕು. ಭಾರತವು ಅಮೆರಿಕ ಮತ್ತು ಕೆನಡಾವನ್ನು ಎದುರಿಸಲಿದೆ. ಭಾರತ ಕೂಡ ತನ್ನ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕು. ಜೊತೆಗೆ ಪಾಕಿಸ್ತಾನ ಉತ್ತಮ ರನ್ರೇಟ್ ಕಾಪಾಡಿಕೊಂಡರೆ ಸೂಪರ್-8 ಹಾದಿ ತೆರೆದುಕೊಳ್ಳಲಿದೆ.
ಭಾರತದ ಸಹಾಯ ಬೇಕೇ ಬೇಕು:
ಮುಂದಿನ ಸುತ್ತಿಗೆ ಹೋಗಲು ಪಾಕಿಸ್ತಾನಕ್ಕೆ ಭಾರತದ ನೆರವು ಬೇಕೇಬೇಕು. ಪಾಕಿಸ್ತಾನದ ನಿವ್ವಳ ರನ್ ರೇಟ್ ಮೈನಸ್‌ನಲ್ಲಿದ್ದರೆ ಅಮೆರಿಕ ಪ್ಲಸ್‌ನಲ್ಲಿದೆ. ಪಾಕ್ ಮುಂದಿನ ಎರಡು ಪಂದ್ಯ ಗೆದ್ದು 4 ಅಂಕಗಳನ್ನು ತಲುಪುವುದಲ್ಲದೆ, ಅಮೆರಿಕಕ್ಕಿಂತ ಉತ್ತಮ ರನ್ ರೇಟ್ ಅನ್ನು ಹೊಂದಿರಬೇಕು. ಇದಕ್ಕಾಗಿ ಭಾರತವು ಅಮೆರಿಕವನ್ನು ದೊಡ್ಡ ಅಂತರದಿಂದ ಸೋಲಿಸಬೇಕು. ಅಮೆರಿಕದ ನೆಟ್ ರನ್ ರೇಟ್ ಕಡಿಮೆಯಾದರೆ, ಪಾಕಿಸ್ತಾನಕ್ಕೆ ಲಾಭವಾಗಲಿದೆ. ಇದರೊಂದಿಗೆ ಐರ್ಲೆಂಡ್ ಕೂಡ ಅಮೆರಿಕವನ್ನು ಸೋಲಿಸಿದರೆ ಪಾಕ್ಗೆ ಮತ್ತಷ್ಟು ಲಾಭವಾಗಲಿದೆ.
ಇದನ್ನೂ ಓದಿ: ಮತ್ತೊಂದು ರೋಚಕ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಮಣಿಸಿದ ಆಫ್ರಿಕಾ
ಪಾಕಿಸ್ತಾನಕ್ಕೆ ಮಳೆಯ ಭೀತಿ:
ಪಾಕಿಸ್ತಾನ ಇಂದು ಕೆನಡಾ ವಿರುದ್ಧ ನ್ಯೂಯಾರ್ಕ್‌ನ ನಸ್ಸೌ ಕ್ರೀಡಾಂಗಣದಲ್ಲಿ ಮಾಡು ಇಲ್ಲವೇ ಮಡಿ ಪಂದ್ಯವನ್ನು ಆಡಲಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಪಾಕ್ ಪಡೆ ಲೀಗ್ನಿಂದ ಹೊರಬೀಳಲಿದೆ. ನ್ಯೂಯಾರ್ಕ್‌ನಲ್ಲಿ ಜೂನ್ 11ರ ಹವಾಮಾನ ಮುನ್ಸೂಚನೆಯ ಪ್ರಕಾರ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಶೇ.15ರಿಂದ 25ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಈ ಪಂದ್ಯ ನ್ಯೂಯಾರ್ಕ್‌ನಲ್ಲಿ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ಹೀಗಾಗಿ ಇಂದಿನ ಪಂದ್ಯ ಮಳೆಗೆ ಆಹುತಿಯಾದರೆ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳುವುದು ಖಚಿತ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ