PAK vs CAN: ಪಾಕ್- ಕೆನಡಾ ಕಾಳಗಕ್ಕೆ ಮಳೆ ಆತಂಕ; ಪಂದ್ಯ ರದ್ದಾದರೆ ಬಾಬರ್ ಪಡೆ ಲೀಗ್ನಿಂದ ಔಟ್..!
PAK vs CAN New York Weather report: ವಾಸ್ತವವಾಗಿ, ಪಾಕಿಸ್ತಾನ ತಂಡದ ಮುಂದಿನ ಪಂದ್ಯವು ಕೆನಡಾ ವಿರುದ್ಧ ನ್ಯೂಯಾರ್ಕ್‌ನ ನಸ್ಸೌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ವೇಳೆ ಮಳೆಯಾಗುವ ನಿರೀಕ್ಷೆಯಿದೆ. ನ್ಯೂಯಾರ್ಕ್‌ನಲ್ಲಿ ಜೂನ್ 11ರ ಹವಾಮಾನ ಮುನ್ಸೂಚನೆಯ ಪ್ರಕಾರ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಶೇ.15ರಿಂದ 25ರಷ್ಟು ಮಳೆಯಾಗುವ ಸಾಧ್ಯತೆ ಇದೆ.
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ (T20 World Cup 2024) ಕಪ್ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿ ಅಖಾಡಕ್ಕಿಳಿದಿದ್ದ ಪಾಕಿಸ್ತಾನ ತಂಡ (Pakistan Cricket Team) ಕೇವಲ ಎರಡೇ ಎರಡು ಪಂದ್ಯಗಳ ಬಳಿಕ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೂಪರ್ ಓವರ್ನಲ್ಲಿ ಸೋತಿದ್ದ ಪಾಕಿಸ್ತಾನ ತಂಡ, ನಿನ್ನೆ ನಡೆದ ಟೀಂ ಇಂಡಿಯಾ ವಿರುದ್ಧ ಪಂದ್ಯದಲ್ಲಿ 6 ರನ್‌ಗಳಿಂದ ಸೋಲು ಕಂಡಿತ್ತು. ಹೀಗಾಗಿ ಪಾಕಿಸ್ತಾನ ತಂಡ ಈಗ ಶೂನ್ಯ ಅಂಕ ಮತ್ತು -0.150 ನೆಟ್ ರನ್ ರೇಟ್ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹೀಗಿರುವಾಗ ಬಾಬರ್ ಪಡೆ, ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಉಳಿದಿರುವ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಆದರೆ, ನಾಳೆ ನಡೆಯಲ್ಲಿರುವ ಕೆನಡಾ ವಿರುದ್ಧದ (PAK vs CAN) ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಪಾಕ್ ಪಡೆ ಲೀಗ್ನಿಂದ ಹೊರಬೀಳಲಿದೆ.
ಮಳೆ ಸಾಧ್ಯತೆ
ವಾಸ್ತವವಾಗಿ, ಪಾಕಿಸ್ತಾನ ತಂಡದ ಮುಂದಿನ ಪಂದ್ಯವು ಕೆನಡಾ ವಿರುದ್ಧ ನ್ಯೂಯಾರ್ಕ್‌ನ ನಸ್ಸೌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ವೇಳೆ ಮಳೆಯಾಗುವ ನಿರೀಕ್ಷೆಯಿದೆ. ನ್ಯೂಯಾರ್ಕ್‌ನಲ್ಲಿ ಜೂನ್ 11ರ ಹವಾಮಾನ ಮುನ್ಸೂಚನೆಯ ಪ್ರಕಾರ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಶೇ.15ರಿಂದ 25ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಈ ಪಂದ್ಯ ನ್ಯೂಯಾರ್ಕ್‌ನಲ್ಲಿ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ಈ ಅವಧಿಯಲ್ಲಿ ಆರ್ದ್ರತೆಯು ಸುಮಾರು 40-60% ಎಂದು ನಿರೀಕ್ಷಿಸಲಾಗಿದೆ.
IND vs PAK: ‘ಟೀಂ ಇಂಡಿಯಾವನ್ನು ನೋಡಿ ಕಲಿಯಿರಿ’; ಪಿಸಿಬಿ ವಿರುದ್ಧ ಕೆರಳಿ ಕೆಂಡವಾದ ಪಾಕ್ ಮಾಧ್ಯಮಗಳು
ಲೀಗ್ನಿಂದ ಪಾಕ್ಗೆ ಗೇಟ್ಪಾಸ್
ಒಂದು ವೇಳೆ ಪಂದ್ಯ ಮಳೆಯಿಂದಾಗಿ ಪೂರ್ಣಗೊಳ್ಳದೆ ರದ್ದಾಗಬೇಕಾದರೆ ಪಾಕಿಸ್ತಾನ ಮತ್ತು ಕೆನಡಾ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುವುದು. ಇದು ಕೆನಡಾಗೆ ಸ್ವಲ್ಪ ಲಾಭವನ್ನು ನೀಡುತ್ತದೆ. ಏಕೆಂದರೆ ಅದು ಒಟ್ಟು 3 ಅಂಕಗಳನ್ನು ಗಳಿಸಿದ್ದಂತ್ತಾಗುತ್ತದೆ. ಆದರೆ ಪಾಕಿಸ್ತಾನ ತಂಡಕ್ಕೆ ಈ ಪಂದ್ಯ ರದ್ದಾದರೆ ಅದು ಟೂರ್ನಿಯಿಂದ ಹೊರಹೋಗಲು ಅಧಿಕೃತವಾಗಿ ಬಾಗಿಲು ತೆರೆದಂತ್ತಾಗುತ್ತದೆ. ಏಕೆಂದರೆ ಪಾಕ್ ತಂಡ ಸೂಪರ್ 8 ಹಂತಕ್ಕೇರಬೇಕಾದರೆ, ಉಳಿದಿರುವ ಎರಡು ಪಂದ್ಯಗಳನ್ನು ಗೆಲ್ಲುವುದಲ್ಲದೆ, ಅತ್ಯಧಿಕ ರನ್ ರೇಟ್ನಿಂದ ಗೆಲ್ಲಬೇಕಾಗಿದೆ.
ಒಂದು ವೇಳೆ ನಾಳಿನ ಪಂದ್ಯ ಮಳೆಯಿಂದ ರದ್ದಾದರೆ, ಪಾಕ್ ತಂಡಕ್ಕೆ ಕೇವಲ 1 ಅಂಕ ಸಿಗಲಿದೆ. ಕೊನೆಗೆ ಉಳಿಯುವ ಏಕೈಕ ಪಂದ್ಯದಲ್ಲಿ ಪಾಕ್ ಗೆದ್ದರೆ ಅದಕ್ಕೆ ಲಭಿಸುವುದು ಕೇವಲ 3 ಅಂಕ ಮಾತ್ರ. ಅಂತಿಮವಾಗಿ ಪಾಕ್ ತಂಡದಲ್ಲಿ ಒಟ್ಟಾರೆಯಾಗಿ 3 ಅಂಕ ಮಾತ್ರ ಇದ್ದಂತ್ತಾಗುತ್ತದೆ. ಆದರೆ ಎ ಗುಂಪಿನಲ್ಲಿ ಈಗಾಗಲೇ ಮೊದಲ ಎರಡು ಸ್ಥಾನಗಳಲ್ಲಿರುವ ಭಾರತ ಹಾಗೂ ಅಮೆರಿಕ ಬಳಿಕ 4 ಅಂಕಗಳಿವೆ. ಹೀಗಾಗಿ ನಾಳಿನ ಪಂದ್ಯ ನಡೆಯದಿದ್ದರೆ, ಪಾಕ್ ತಂಡಕ್ಕೆ ಸೂಪರ್ 8 ಸುತ್ತಿನ ಬಾಗಿಲು ಅಧಿಕೃತವಾಗಿ ಮುಚ್ಚಲಿದೆ.
ಹೆಡ್ ಟು ಹೆಡ್ ರೆಕಾರ್ಡ್
ಕೆನಡಾ ಮತ್ತು ಪಾಕಿಸ್ತಾನ ನಡುವಿನ ಟಿ20 ಮುಖಾಮುಖಿಯಲ್ಲಿ ಪಾಕಿಸ್ತಾನದ ಮೇಲುಗೈ ಸಾಧಿಸಿದೆ. 2008 ರಲ್ಲಿ, ಕಿಂಗ್ ಸಿಟಿಯ ಮ್ಯಾಪಲ್ ಲೀಫ್ ನಾರ್ತ್-ವೆಸ್ಟ್ ಗ್ರೌಂಡ್‌ನಲ್ಲಿ ನಡೆದ ಏಕೈಕ ಪಂದ್ಯದಲ್ಲಿ ಪಾಕಿಸ್ತಾನವು ಕೆನಡಾವನ್ನು ಸೋಲಿಸಿತು. ಶೋಯೆಬ್ ಮಲಿಕ್ ನೇತೃತ್ವದ ತಂಡ 137 ರನ್‌ಗಳನ್ನು ಡಿಫೆಂಡ್ ಮಾಡಿ, ಕೆನಡಾವನ್ನು 102 ರನ್‌ಗಳಿಗೆ ಆಲೌಟ್ ಮಾಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ