ಟಿ20 ತಂಡ ಪ್ರಕಟ, ಕೋಚ್ಗಳ ರಾಜೀನಾಮೆ: ನಿವೃತ್ತಿ ಹಿಂಪಡೆದ ಪಾಕ್ ವೇಗಿ ಅಮೀರ್
Mohammad Amir: 29 ವರ್ಷದ ಅಮೀರ್ ಪಾಕಿಸ್ತಾನದ ಪರ 36 ಟೆಸ್ಟ್, 61 ಏಕದಿನ ಮತ್ತು 50 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 259 ವಿಕೆಟ್ ಪಡೆದಿದ್ದಾರೆ.
ಪಾಕಿಸ್ತಾನ್ (Pakistan) ತಂಡದ ಎಡಗೈ ವೇಗದ ಬೌಲರ್ ಮೊಹಮ್ಮದ್ ಅಮೀರ್ (Mohammad Amir) ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗುವ ನಿರ್ಧಾರವನ್ನು ಹಿಂಪಡೆದಿದ್ದಾರೆ. ಪಾಕಿಸ್ತಾನ ತಂಡದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಮತ್ತು ಬೌಲಿಂಗ್ ಕೋಚ್ ವಕಾರ್ ಯೂನಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ, ಅಮೀರ್ ತನ್ನ ನಿವೃತ್ತಿ ಹಿಂಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ. ಅತ್ತ ಟಿ20 ವಿಶ್ವಕಪ್ಗೆ (T20 World Cup 2021) ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು, ನಿವೃತ್ತಿ ಘೋಷಿಸಿದ್ದ ಹಿನ್ನೆಲೆಯಲ್ಲಿ ಅಮೀರ್ಗೆ ಸ್ಥಾನ ನೀಡಲಾಗಿರಲಿಲ್ಲ. ಇನ್ನು ಪಾಕ್ ವಿಶ್ವಕಪ್ ತಂಡ ಘೋಷಣೆಯಾದ ಬೆನ್ನಲ್ಲೇ ಕೋಚ್ಗಳು ರಾಜೀನಾಮೆ ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಇದೀಗ ಈ ಅಚ್ಚರಿಗಳ ನಡುವೆ ಅಮೀರ್ ತಾನು ಕೂಡ ಪಾಕ್ ತಂಡಕ್ಕೆ ಹಿಂತಿರುಗುವುದಾಗಿ ತಿಳಿಸಿದ್ದಾರೆ.
ಡೈಲಿ ನ್ಯೂಸ್ ವರದಿಯ ಪ್ರಕಾರ, ಇವರಿಬ್ಬರು ರಾಜೀನಾಮೆ ನೀಡಿದ ನಂತರ, ಅಮೀರ್ ಅವರು ಮಾಧ್ಯಮವೊಂದಕ್ಕೆ ತಾನು ತಂಡಕ್ಕೆ ಲಭ್ಯವಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ ತಂಡಕ್ಕೆ ಹೊಸ ಮ್ಯಾನೇಜ್‌ಮೆಂಟ್ ಬಂದರೆ ತಾನು ರಾಷ್ಟ್ರೀಯ ಕ್ರಿಕೆಟ್ಗೆ ಮರಳುವುದಾಗಿ ತಿಳಿಸಿದ್ದರು. ಇದಾಗ್ಯೂ ದಿಢೀರ್ ನಿವೃತ್ತಿಗೆ ಯಾರು ಕಾರಣ ಎಂಬುದನ್ನು ಮಾತ್ರ ಸ್ಪಷ್ಟಪಡಿಸಿರಲಿಲ್ಲ. ಇದೀಗ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಮತ್ತು ಬೌಲಿಂಗ್ ಕೋಚ್ ವಕಾರ್ ಯೂನಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ, ಅಮೀರ್ ತಂಡಕ್ಕೆ ಮರಳುವುದಾಗಿ ತಿಳಿಸಿದ್ದಾರೆ.
29 ವರ್ಷದ ಅಮೀರ್ ಪಾಕಿಸ್ತಾನದ ಪರ 36 ಟೆಸ್ಟ್, 61 ಏಕದಿನ ಮತ್ತು 50 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 259 ವಿಕೆಟ್ ಪಡೆದಿದ್ದಾರೆ. 2010 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪ ಸಾಬೀತಾದ ನಂತರ ಅಮೀರ್ ಐದು ವರ್ಷಗಳ ಕಾಲ ನಿಷೇಧಕ್ಕೊಳಗಾದರು. ಆದಾಗ್ಯೂ, ಬಳಿಕ ಕಂಬ್ಯಾಕ್ ಮಾಡಿದ ಎಡಗೈ 2017 ರಲ್ಲಿ ಟೀಮ್ ಇಂಡಿಯಾ ವಿರುದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2019 ರಲ್ಲಿ ಕೊನೆಯ ಅಂತರಾಷ್ಟ್ರೀಯ ಟೆಸ್ಟ್ ಮತ್ತು ಏಕದಿನ ಪಂದ್ಯವನ್ನು ಆಡಿದ್ದ ಅಮೀರ್, 2020ರ ತನಕ ಪಾಕ್ ಟಿ20 ತಂಡದ ಭಾಗವಾಗಿದ್ದರು. ಇದೀಗ ನಿವೃತ್ತಿಯನ್ನು ಹಿಂಪಡೆದಿರುವುದರಿಂದ ಅವರನ್ನು ಟಿ20 ವಿಶ್ವಕಪ್ಗೆ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: ಕುಡುಕರ ಗಮನಕ್ಕೆ: ಪ್ರತಿದಿನ ಬಿಯರ್ ಕುಡಿಯುವುದು ಒಳ್ಳೆದಂತೆ
ಇದನ್ನೂ ಓದಿ: ಒಂದೇ ಒಂದು ರನ್ ನೀಡಲಿಲ್ಲ: 10 ಓವರ್ ಮೇಡನ್ ಮಾಡಿ ದಾಖಲೆ ಬರೆದ ಸ್ಪಿನ್ನರ್
ಇದನ್ನೂ ಓದಿ: ಮೊಬೈಲ್ ಬಳಕೆದಾರರ ಗಮನಕ್ಕೆ: ಇನ್ಮುಂದೆ ಈ ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ
(Pakistan pacer Mohd Amir takes U-turn after retirement)