India vs South Africa 3rd Test: ಕ್ಯಾಚ್ ಬಿಟ್ಟು 5 ರನ್ ನೀಡಿದ ಪೂಜಾರಾ..!
India vs South Africa: ಶಾರ್ದೂಲ್ ಠಾಕೂರ್ ಎಸೆದ ಚೆಂಡು ತೆಂಬಾ ಬಾವುಮಾ ಅವರ ಬ್ಯಾಟ್ ಅನ್ನು ಸವರಿ ಬಾಲ್ ಸ್ಲಿಪ್ನತ್ತ ಸಾಗಿತು. ಚೆಂಡು ನೇರವಾಗಿ ಸ್ಲಿಪ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ಚೇತೇಶ್ವರ ಪೂಜಾರಾ ಕಡೆಗೆ ಚಿಮ್ಮಿತು.
ಕೇಪ್ ಟೌನ್ನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ (India vs South Africa 3rd Test) ನಡುವಣ ಕೊನೆಯ ಟೆಸ್ಟ್ ಪಂದ್ಯವು ಕುತೂಹಲದತ್ತ ಸಾಗುತ್ತಿದೆ. ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ (Team India) ಕಲೆಹಾಕಿದ 223 ರನ್ಗಳಿಗೆ ಉತ್ತರವಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 2ನೇ ದಿನದಾಟದಲ್ಲೇ 210 ರನ್ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) 2 ಕ್ಯಾಚ್ಗಳನ್ನು ಹಿಡಿಯುವ ಮೂಲಕ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ 100 ಕ್ಯಾಚ್ಗಳನ್ನು ಹಿಡಿದ 6ನೇ ಆಟಗಾರ ಎನಿಸಿಕೊಂಡರು. ಮತ್ತೊಂದೆಡೆ ಚೇತೇಶ್ವರ ಪೂಜಾರ ಕ್ಯಾಚ್ ಡ್ರಾಪ್ ಮಾಡುವ ಮೂಲಕ 5 ರನ್‌ಗಳನ್ನು ಬಿಟ್ಟುಕೊಟ್ಟರು.
ದಕ್ಷಿಣ ಆಫ್ರಿಕಾದ 50ನೇ ಓವರ್ನಲ್ಲಿ ಶಾರ್ದೂಲ್ ಠಾಕೂರ್ ಎಸೆದ ಚೆಂಡು ತೆಂಬಾ ಬಾವುಮಾ ಅವರ ಬ್ಯಾಟ್ ಅನ್ನು ಸವರಿ ಬಾಲ್ ಸ್ಲಿಪ್ನತ್ತ ಸಾಗಿತು. ಚೆಂಡು ನೇರವಾಗಿ ಸ್ಲಿಪ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ಚೇತೇಶ್ವರ ಪೂಜಾರಾ ಕಡೆಗೆ ಚಿಮ್ಮಿತು. ಆದರೆ ಚೆಂಡನ್ನು ಸ್ಪಷ್ಟವಾಗಿ ಗುರುತಿಸಲು ಎಡವಿದ ಪೂಜಾರ ಕ್ಯಾಚ್ ಹಿಡಿಯಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೆ ಚೆಂಡು ನೇರವಾಗಿ ವಿಕೆಟ್ ಕೀಪರ್ ಮೈದಾನದಲ್ಲಿಟ್ಟಿದ್ದ ಹೆಲ್ಮೆಟ್ಗೆ ಹೋಗಿ ಬಡಿಯಿತು.
ಐಸಿಸಿ ನಿಯಮಗಳ ಪ್ರಕಾರ, ಫೀಲ್ಡಿಂಗ್ ತಂಡ ಮೈದಾನದಲ್ಲಿ ಇಟ್ಟಿರುವ ಹೆಲ್ಮೆಟ್ಗೆ ಚೆಂಡು ತಾಗಿದರೆ ಐದು ಪೆನಾಲ್ಟಿ ರನ್‌ಗಳನ್ನು ನೀಡಬೇಕಾಗುತ್ತದೆ. ಅದರಂತೆ ತೆಂಬಾ ಬವುಮಾ ಜೀವನದಾನದೊಂದಿಗೆ 5 ರನ್‌ಗಳನ್ನು ಕೂಡ ಪಡೆದುಕೊಂಡರು. ಸದ್ಯ ಭಾರತ-ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ ಮುಗಿಸಿದ್ದು, ಇದೀಗ ಟೀಮ್ ಇಂಡಿಯಾ 2ನೇ ಇನಿಂಗ್ಸ್ ಆಡುತ್ತಿದೆ. 21 ಓವರ್ ಮುಕ್ತಾಯದ ವೇಳೆ ಭಾರತ ತಂಡವು 4 ವಿಕೆಟ್ ಕಳೆದುಕೊಂಡು 60 ರನ್ಗಳಿಸಿದೆ. ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಬ್ಯಾಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Pujara’s dropped catch results in 5-run penalty for India)