
ಪಾಕಿಸ್ತಾನ್ ತಂಡದ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಆ್ಯಕ್ಷನ್ ಬಗೆಗಿನ ಚರ್ಚೆ ಮುಂದುವರೆದಿದೆ. ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಉಸ್ಮಾನ್ ತಾರಿಖ್ ಎಸೆತದಲ್ಲಿ ಆಸ್ಟ್ರೇಲಿಯಾ ದಾಂಡಿಗ ಕ್ಯಾಮರೋನ್ ಗ್ರೀನ್ ಔಟಾಗಿದ್ದರು. ಹೀಗೆ ಔಟಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದ ಗ್ರೀನ್ ಪಾಕ್ ಸ್ಪಿನ್ನರ್ನ ಬೌಲಿಂಗ್ ಆ್ಯಕ್ಷನ್ ಬಗ್ಗೆ ಪ್ರಶ್ನೆಗಳೆನ್ನೆತ್ತಿದ್ದರು. ಇದೀಗ ಟಿ20 ವಿಶ್ವಕಪ್ನಲ್ಲೂ ಉಸ್ಮಾನ್ ತಾರಿಖ್ ತನ್ನ ವಿಳಂಬ ರೀತಿಯ ಬೌಲಿಂಗ್ಗೆ ಶೈಲಿಯನ್ನು ಮುಂದುವರೆಸಿದ್ದಾರೆ. ಇದನ್ನೇ ಭಾರತೀಯ ಕ್ರಿಕೆಟಿಗ ಶ್ರೀವಾಸ್ತವ್ ಗೋಸ್ವಾಮಿ ಪ್ರಶ್ನಿಸಿದ್ದಾರೆ.
“ಫುಟ್ಬಾಲ್ ಆಟಗಾರರಿಗೆ ಪೆನಾಲ್ಟಿ ರನ್-ಅಪ್ ಸಮಯದಲ್ಲಿ ನಿಲ್ಲಲು ಅವಕಾಶ ನೀಡುವುದಿಲ್ಲ. ಇದು ಹೇಗೆ ಸರಿ? ಆಕ್ಷನ್ – ಎಲ್ಲವೂ ಒಳ್ಳೆಯದು. ಆದರೆ ಈ ವಿರಾಮ? ಅದು ಕೂಡ ಚೆಂಡೆಸೆಯುವ ಮುನ್ನ. ಇದು ಗಂಭೀರ ವಿಷಯ, ಇದನ್ನೆಲ್ಲಾ ಮುಂದುವರೆಸಲು ಅನುಮತಿಸಬಾರದು!” ಎಂಬಾರ್ಥದಲ್ಲಿ ಶ್ರೀವಾಸ್ತವ್ ಗೋಸ್ವಾಮಿ X ನಲ್ಲಿ ಟ್ವೀಟ್ ಮಾಡಿದ್ದಾರೆ.
Even football doesn’t allow players to pause during a penalty run-up anymore.
How is this ok? Action – all good. But pause ? That too while loading to deliver. This can’t be continued seriously ! #WorldCup2026 pic.twitter.com/gIgsjV7RlX— Shreevats goswami (@shreevats1) February 10, 2026
ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ರವಿಚಂದ್ರನ್ ಅಶ್ವಿನ್, “ಫುಟ್ಬಾಲ್ನಲ್ಲಿ ಇದನ್ನು ಅನುಮತಿಸುವುದಿಲ್ಲ ಎಂಬುದನ್ನು ಒಪ್ಪಿಕೊತ್ತೇನೆ! ಆದರೆ ಬ್ಯಾಟರ್ ತನ್ನ ಸ್ಟಾನ್ಸ್ ತೆಗೆದುಕೊಂಡ ನಂತರ, ಅಂಪೈರ್ ಅಥವಾ ಬೌಲರ್‌ಗೆ ತಿಳಿಸದೆ ಸ್ವಿಚ್ ಹಿಟ್ ಅಥವಾ ರಿವರ್ಸ್ ಶಾಟ್ ಹೊಡೆಯಲು ಅನುಮತಿಸಲಾಗುತ್ತದೆ.
ಬ್ಯಾಟರ್ಗೆ ಹೀಗೆ ಅನುಮತಿಸಬಹುದಾದರೆ, ನಿರ್ಬಂಧಗಳು ಬೌಲರ್‌ಗೆ ಮಾತ್ರ ಏಕೆ ಸೀಮಿತವಾಗಿವೆ?. ವಾಸ್ತವವಾಗಿ ಬೌಲರ್ ಅಂಪೈರ್‌ಗೆ ತಿಳಿಸದೆ ತಾನು ಬೌಲ್ ಮಾಡುವ ತೋಳನ್ನು ಬದಲಾಯಿಸಲು ಅನುಮತಿಸಲಾಗುವುದಿಲ್ಲ! ಮೊದಲು ಆ ನಿಯಮವನ್ನು ಬದಲಾಯಿಸಬೇಕು” ಎಂದು ಅಶ್ವಿನ್ ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಪಾಕಿಸ್ತಾನ್ ಸ್ಪಿನ್ನರ್ನ ಲೇಟ್ ಎಸೆತಗಳನ್ನು ರವಿಚಂದ್ರನ್ ಅಶ್ವಿನ್ ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಅಂದರೆ ಇಲ್ಲಿ ಬ್ಯಾಟರ್ಗಳು ಚೆಂಡೆಸೆದ ಬಳಿಕ ಯಾವುದೇ ರೀತಿಯಲ್ಲೂ ಬೇಕಿದ್ದರೂ ಬ್ಯಾಟ್ ಬೀಸಬಹುದು. ಉದಾಹರಣೆಗೆ ರೈಟ್ ಹ್ಯಾಂಡ್ ಬ್ಯಾಟರ್, ಚೆಂಡು ಬರುವಾಗ ಲೆಫ್ಟ್ ಹ್ಯಾಂಡ್ ಆಗಿ ಬ್ಯಾಟ್ ಬೀಸಲು ಅವಕಾಶವಿದೆ.
ಆದರೆ ಬೌಲರ್ಗಳಿಗೆ ಇಂತಹ ಯಾವುದೇ ಆಯ್ಕೆ ಇಲ್ಲ. ಒಂದು ವೇಳೆ ಬೌಲರ್ ಬಲಗೈ ಬದಲು ಎಡಗೈನಲ್ಲಿ ಚೆಂಡೆಸೆಯಲು ಮುಂದಾದರೆ ಅಂಪೈರ್‌ಗೆ ತಿಳಿಸಬೇಕು. ಅದೇ ಬ್ಯಾಟರ್ ಸ್ವಿಚ್ ಹಿಟ್ ಅಥವಾ ರಿವರ್ಸ್ ಸ್ವೀಪ್ ಮಾಡುತ್ತೇನೆ ಎಂಬುದನ್ನು ಅಂಪೈರ್‌ಗೆ ತಿಳಿಸುವ ಅವಶ್ಯಕತೆಯಿಲ್ಲ. ಅಂದರೆ ಇಲ್ಲಿ ಬ್ಯಾಟರ್ ಕೂಡ ತನ್ನ ಬ್ಯಾಟಿಂಗ್ ಶೈಲಿಯನ್ನು ಬದಲಿಸುವುದಲ್ಲವೇ? ಇದಾಗ್ಯೂ ಎಲ್ಲಾ ನಿಯಮಗಳು ಬೌಲರ್ಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ.
ಇತ್ತ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಉಸ್ಮಾನ್ ತಾರಿಖ್ ಈಗಾಗಲೇ ಸಂಚಲನ ಸೃಷ್ಟಿಸಿದ್ದಾರೆ. ಅದರಲ್ಲೂ ಲೇಟ್ ಎಸೆತಗಳ ಮೂಲಕ ಬ್ಯಾಟರ್ನ ಮೂವ್ಮೆಂಟ್ ಗ್ರಹಿಸುತ್ತಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಇದನ್ನೆ ಶ್ರೀವಾಸ್ತವ್ ಗೋಸ್ವಾಮಿ ಪ್ರಶ್ನಿಸಿದ್ದಾರೆ.
ಆದರೆ ಉಸ್ಮಾನ್ ತಾರಿಖ್ಗೂ ಮುನ್ನವೇ ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಅಂಗಳದಲ್ಲಿ ಇಂತಹ ಲೇಟ್ ಎಸೆತಗಳನ್ನು ಎಸೆದಿದ್ದರು ಎಂಬುದೇ ಸತ್ಯ. 2013 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಇಂಗ್ಲೆಂಡ್ ತಂಡಕ್ಕೆ 6 ರನ್ ಬೇಕಿದ್ದಾಗ ಅಶ್ವಿನ್ ಲೇಟ್ ಎಸೆತದ ಮೂಲಕ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
Ravichandran Ashwin is backing Usman Tariq by saying that a brief pause in the run-up or action can be legal, because Ashwin himself sometimes slows down or hesitates before releasing the ball.
See this video 👇 https://t.co/glmomkIiBO pic.twitter.com/7TmS3jQCeG
— Indian First (@MaheshJain68174) February 11, 2026
ಇದೀಗ ಉಸ್ಮಾನ್ ತಾರಿಖ್ಗೆ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ಅಶ್ವಿನ್ ಅವರ ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.