AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ajinkya Rahane: 175 ಸ್ಟ್ರೈಕ್ ರೇಟ್‌ನಲ್ಲಿ 95 ರನ್ ಚಚ್ಚಿದ ಶತಕ ವಂಚಿತ ಅಜಿಂಕ್ಯ ರಹಾನೆ

Ajinkya Rahane: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡವು ಆಂಧ್ರಪ್ರದೇಶವನ್ನು ಸೋಲಿಸಿದೆ. ಅಜಿಂಕ್ಯ ರಹಾನೆ ಅವರ 95 ರನ್‌ಗಳ ಅದ್ಭುತ ಇನ್ನಿಂಗ್ಸ್ ಈ ಗೆಲುವಿಗೆ ಪ್ರಮುಖ ಕಾರಣ. 230 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈಗೆ ರಹಾನೆ ಮತ್ತು ಪೃಥ್ವಿ ಶಾ ಉತ್ತಮ ಆರಂಭ ನೀಡಿದರು. ರಹಾನೆ 9 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

Ajinkya Rahane: 175 ಸ್ಟ್ರೈಕ್ ರೇಟ್‌ನಲ್ಲಿ 95 ರನ್ ಚಚ್ಚಿದ ಶತಕ ವಂಚಿತ ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ
ಪೃಥ್ವಿಶಂಕರ
|

Updated on: Dec 05, 2024 | 11:01 PM

Share

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಅವರ ಅದ್ಭುತ ಪ್ರದರ್ಶನ ಮುಂದುವರಿದಿದೆ. ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ಮಾಡಿದ ರಹಾನೆ ಕೇವಲ ಐದೇ ಐದು ರನ್​ಗಳಿಂದ ಶತಕವಂಚಿತರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಆಂಧ್ರಪ್ರದೇಶ ನೀಡಿದ 230 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಮುಂಬೈ ಪರ ಸ್ಫೋಟಕ ಬ್ಯಾಟಿಂಗ್‌ ಮಾಡಿದ ರಹಾನೆ 9 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಿತ 95 ರನ್​ ಸಿಡಿಸಿದರು.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಂಧ್ರಪ್ರದೇಶ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 229 ರನ್ ಗಳಿಸಿತು. ತಂಡದ ಪರವಾಗಿ ಶ್ರೀಕರ್ ಭರತ್ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿ 53 ಎಸೆತಗಳಲ್ಲಿ 93 ರನ್​ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಭರತ್ ಜೊತೆಗೆ ನಾಯಕ ರಿಕಿ ಭುಯಿ ಕೂಡ 219 ಸ್ಟ್ರೈಕ್ ರೇಟ್‌ನಲ್ಲಿ 31 ಎಸೆತಗಳಲ್ಲಿ 68 ರನ್ ಗಳಿಸಿದರು.

ರಹಾನೆ ಸ್ಫೋಟಕ ಬ್ಯಾಟಿಂಗ್‌

230 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ತಂಡಕ್ಕೆ ಅಜಿಂಕ್ಯ ರಹಾನೆ ಮತ್ತು ಪೃಥ್ವಿ ಶಾ ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 51 ರನ್ ಸೇರಿಸಿದರು. ಶಾ ಕೇವಲ 15 ಎಸೆತಗಳನ್ನು ಎದುರಿಸಿ 34 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿದರು. ಶಾ ಪೆವಿಲಿಯನ್‌ಗೆ ಮರಳಿದ ನಂತರ ರಹಾನೆಗೆ ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಸಾಥ್ ನೀಡಿದರು. ಅಯ್ಯರ್ ಔಟಾಗುವ ಮೊದಲು 11 ಎಸೆತಗಳಲ್ಲಿ 25 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ ಕೇವಲ ನಾಲ್ಕು ರನ್​ಗಳಿಗೆ ಸುಸ್ತಾದರು.

ಆದರೆ, ರಹಾನೆ ಒಂದು ತುದಿಯಲ್ಲಿ ನಿಂತು ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಹಾನೆ, 175 ಸ್ಟ್ರೈಕ್ ರೇಟ್‌ನಲ್ಲಿ 54 ಎಸೆತಗಳನ್ನು ಎದುರಿಸಿ 95 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 9 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು.

 ಕ್ವಾರ್ಟರ್ ಫೈನಲ್‌ಗೆ ಮುಂಬೈ

ಮುಂಬೈ ಪರ ರಹಾನೆ ಹೊರತುಪಡಿಸಿ, ಶಿವಂ ದುಬೆ ಕೂಡ ಕೇವಲ 18 ಎಸೆತಗಳಲ್ಲಿ 34 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅದೇ ಸಮಯದಲ್ಲಿ, ಕೊನೆಯ ಓವರ್‌ಗಳಲ್ಲಿ ಸೂರ್ಯಾಂಶ್ ಶೆಡ್ಗೆ ಕೇವಲ 8 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿ ಮುಂಬೈಗೆ 4 ವಿಕೆಟ್‌ಗಳ ಜಯ ತಂದರು. ಈ ಗೆಲುವಿನೊಂದಿಗೆ ಮುಂಬೈ ಕ್ವಾರ್ಟರ್ ಫೈನಲ್‌ಗೆ ಟಿಕೆಟ್ ಕಾಯ್ದಿರಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ