
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ 32ನೇ ಪಂದ್ಯದಲ್ಲಿ ರಣರೋಚಕ ಹೋರಾಟ ಕಂಡು ಬಂದಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಆರ್ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್ ಡೆಲ್ಲಿ ಪಡೆಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಫಿಟಲ್ಸ್ ತಂಡವು ನಿಗದಿತ 20 ಒವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 188 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕೊನೆಯ ಓವರ್‌ನಲ್ಲಿ ಗೆಲ್ಲಲು 9 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಬಿಗಿ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್ ಕೇವಲ 8 ರನ್ ಮಾತ್ರ ನೀಡಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವನ್ನು 188 ರನ್ಗಳಿಗೆ ನಿಯಂತ್ರಿಸಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ವಿಯಾಯಿತು.
ಸೂಪರ್ ಓವರ್ನತ್ತ ಸಾಗಿದ ಪಂದ್ಯದಲ್ಲಿ ಮೊದಲು ರಾಜಸ್ಥಾನ್ ರಾಯಲ್ಸ್ ಬ್ಯಾಟ್ ಮಾಡಿದ್ದರು. ಅದರಂತೆ ಮೊದಲ 5 ಎಸೆತಗಳಲ್ಲಿ 11 ರನ್ಗಳಿಸುವಷ್ಟರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ರಿಯಾನ್ ಪರಾಗ್ ಹಾಗೂ ಯಶಸ್ವಿ ಜೈಸ್ವಾಲ್ ರನೌಟ್ ಆದರು. ಇದರೊಂದಿಗೆ ಆರ್ಆರ್ ಸೂಪರ್ ಓವರ್ ಇನಿಂಗ್ಸ್ 11 ರನ್ಗಳೊಂದಿಗೆ ಅಂತ್ಯಗೊಂಡಿತು. 12 ರನ್ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಎಸೆತಗಳಲ್ಲಿ 13 ರನ್ ಸಿಡಿಸಿ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೂಪರ್ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಸಂಜು ಸ್ಯಾಮ್ಸನ್ ತೆಗೆದುಕೊಂಡ ನಿರ್ಧಾರ ದುಬಾರಿಯಾಯಿತು. ಏಕೆಂದರೆ ಈ ಪಂದ್ಯದಲ್ಲಿ ಆರ್ಆರ್ ಪರ ಅತ್ಯುತ್ತಮ ದಾಳಿ ಸಂಘಟಿಸಿದ್ದು ಜೋಫ್ರಾ ಆರ್ಚರ್.
ಪವರ್ಪ್ಲೇನಲ್ಲಿ ಸೇರಿದಂತೆ ಒಟ್ಟು 4 ಓವರ್ಗಳನ್ನು ಎಸೆದಿದ್ದ ಜೋಫ್ರಾ ಆರ್ಚರ್ 32 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಇದಾಗ್ಯೂ ಸೂಪರ್ ಓವರ್‌ನಲ್ಲಿ ಸಂದೀಪ್ ಶರ್ಮಾ ಅವರಿಂದ ಬೌಲಿಂಗ್ ಮಾಡಿಸಲು ನಿರ್ಧರಿಸಲಾಯಿತು. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕೆಎಲ್ ರಾಹುಲ್ ಕಣಕ್ಕಿಳಿದಿದ್ದರು.
ಅತ್ಯುತ್ತಮ ಟೈಮಿಂಗ್ ಹೊಂದಿರುವ ರಾಹುಲ್ಗೆ ಸಂದೀಪ್ ಶರ್ಮಾ ಅವರನ್ನು ಎದುರಿಸುವುದು ಕಷ್ವವಾಗಿರಲಿಲ್ಲ. ಮತ್ತೊಂದೆಡೆ ಸ್ಲೋ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಸಾಮರ್ಥ್ಯವಿರುವ ಟ್ರಿಸ್ಟನ್ ಸ್ಟಬ್ಸ್ ಕೂಡ ಮತ್ತೊಂದು ತುದಿಯಲ್ಲಿ ಕಣಕ್ಕಿಳಿದಿದ್ದರು.
ಇತ್ತ ಜೋಫ್ರಾ ಆರ್ಚರ್ ಅವರಂತಹ ಬೌಲರ್ ತಂಡದಲ್ಲಿದ್ದರೂ ರಾಜಸ್ಥಾನ್ ರಾಯಲ್ಸ್ ತೋರಿದ ಭಂಢ ದೈರ್ಯವು ಡೆಲ್ಲಿ ಕ್ಯಾಪಿಟಲ್ಸ್ ಪರ ಪಾಲಿಗೆ ವರವಾಯಿತು. ಸಂದೀಪ್ ಶರ್ಮಾ ಓವರ್‌ನಲ್ಲಿ ಕೆಎಲ್ ರಾಹುಲ್ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದರು. ಅಲ್ಲದೆ ಮೊದಲ 3 ಎಸೆತಗಳಲ್ಲಿ 7 ರನ್ ಕಲೆಹಾಕಿದರು.
ಇನ್ನು ಸಂದೀಪ್ ಶರ್ಮಾ ಎಸೆದ ಸ್ಲೋ ಎಸೆತವನ್ನು ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸುವ ಮೂಲಕ ಟ್ರಿಸ್ಟನ್ ಸ್ಟಬ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಜಯ ತಂದುಕೊಟ್ಟರು. ಒಂದು ವೇಳೆ ರಾಜಸ್ಥಾನ್ ರಾಯಲ್ಸ್ ತಂಡವು ಜೋಫ್ರಾ ಆರ್ಚರ್ ಕಡೆಯಿಂದ ಯಾರ್ಕರ್ ಎಸೆತಗಳ ಮೂಲಕ ತಂತ್ರ ರೂಪಿಸಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವು ಅಂದುಕೊಂಡಷ್ಟು ಸುಲಭವಾಗುತ್ತಿರಲಿಲ್ಲ.
ಇದನ್ನೂ ಓದಿ: VIDEO: ನೋ ಬಾಲ್, ಫ್ರೀ ಹಿಟ್, ರನೌಟ್: ಸೂಪರ್ ಓವರ್‌ನಲ್ಲಿ ಡೆಲ್ಲಿಗೆ ರೋಚಕ ಜಯ
ಆದರೆ ರಾಜಸ್ಥಾನ್ ರಾಯಲ್ಸ್ ತಂಡವು 20ನೇ ಓವರ್‌ನಲ್ಲಿ 19 ರನ್ ನೀಡಿದ್ದ ಸಂದೀಪ್ ಶರ್ಮಾ ಕೈಗೆ ಚೆಂಡು ನೀಡುವ ಮೂಲಕ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈ ಚೆಲ್ಲಿಕೊಂಡರು.
Published On - 7:35 am, Thu, 17 April 25