DC vs RR Super Over: ಸೂಪರ್ ಓವರ್‌ನಲ್ಲಿ ಸೋತ ನಂತರ ತಾಳ್ಮೆ ಕಳೆದುಕೊಂಡ ಸಂಜು ಸ್ಯಾಮ್ಸನ್: ಪೋಸ್ಟ್ ಮ್ಯಾಚ್ನಲ್ಲಿ ಏನಂದ್ರು ನೋಡಿ
Sanju Samson Post Match Presentation: ಸೂಪರ್ ಓವರ್‌ನಲ್ಲಿ ರಾಜಸ್ಥಾನ 11 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ದೆಹಲಿ ತಂಡವು ನಾಲ್ಕನೇ ಎಸೆತದಲ್ಲಿ 13 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ದೆಹಲಿ ವಿರುದ್ಧದ ಈ ನಿರಾಶಾದಾಯಕ ಸೋಲಿನ ನಂತರ, ನಾಯಕ ಸಂಜು ಸ್ಯಾಮ್ಸನ್ ಇದು ಖಂಡಿತವಾಗಿಯೂ ಗುರಿ ಮುಟ್ಟಬಹುದಾಗ ಟಾರ್ಗೆಟ್ ಎಂದು ಬ್ಯಾಟಿಂಗ್ ವಿಭಾಗದ ಬಗ್ಗೆ ಕೆಂಡಕಾರಿದ್ದಾರೆ.

ಬೆಂಗಳೂರು (ಏ. 17): ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೂಪರ್ ಓವರ್ ಸೋಲಿನ ನಂತರ ರಾಜಸ್ಥಾನ್ ರಾಯಲ್ಸ್ (Delhi Capitals vs Rajasthan Royals) ನಾಯಕ ಸಂಜು ಸ್ಯಾಮ್ಸನ್ ನಿರಾಶೆಗೊಂಡಿದ್ದಾರೆ. ಗಾಯದ ಕಾರಣದಿಂದಾಗಿ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ತಮ್ಮ ಪೂರ್ಣ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಈ ಪಂದ್ಯವು ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ 5 ವಿಕೆಟ್‌ಗೆ 180 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ, ರಾಜಸ್ಥಾನ್ ರಾಯಲ್ಸ್ ಕೂಢ 20 ಓವರ್ಗಳ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 180 ರನ್‌ಗಳನ್ನು ಗಳಿಸಿತು. ಇದರಿಂದಾಗಿ ಪಂದ್ಯವು ಟೈ ಆಯಿತು.
ಸೂಪರ್ ಓವರ್‌ನಲ್ಲಿ ಗಾಯದ ಕಾರಣ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡಲು ಬರಲಿಲ್ಲ. ಸೂಪರ್ ಓವರ್‌ನಲ್ಲಿ ರಾಜಸ್ಥಾನ 11 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ದೆಹಲಿ ತಂಡವು ನಾಲ್ಕನೇ ಎಸೆತದಲ್ಲಿ 13 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ದೆಹಲಿ ವಿರುದ್ಧದ ಈ ನಿರಾಶಾದಾಯಕ ಸೋಲಿನ ನಂತರ, ನಾಯಕ ಸಂಜು ಸ್ಯಾಮ್ಸನ್ ಇದು ಖಂಡಿತವಾಗಿಯೂ ಗುರಿ ಮುಟ್ಟಬಹುದಾಗ ಟಾರ್ಗೆಟ್ ಎಂದು ಹೇಳಿ ಬ್ಯಾಟಿಂಗ್ ವಿಭಾಗದ ಬಗ್ಗೆ ಕೆಂಡಕಾರಿದ್ದಾರೆ.
‘‘ನಮ್ಮ ಬ್ಯಾಟಿಂಗ್ ಲೈನ್‌ಅಪ್‌ಗೆ ಈ ಸ್ಕೋರ್ ಅನ್ನು ಬೆನ್ನಟ್ಟುವುದು ಸುಲಭ ಎಂದು ನಾನು ಭಾವಿಸಿದೆ. ಪವರ್‌ಪ್ಲೇನಲ್ಲಿ ನಮಗೆ ಉತ್ತಮ ಆರಂಭ ಸಿಕ್ಕಿತು. ಇದು ಖಂಡಿತವಾಗಿಯೂ ಗುರಿ ಮುಟ್ಟಬಹುದಾಗ ಟಾರ್ಗೆಟ್ ಎಂದು ನಾನು ಭಾವಿಸಿದೆ. ಆದರೆ, ಮಿಚೆಲ್ ಸ್ಟಾರ್ಕ್ ದೆಹಲಿ ಪರ ಅದ್ಭುತ ಬೌಲಿಂಗ್ ಮಾಡಿ ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು’’ ಎಂದು ಹೇಳಿಕೊಂಡಿದ್ದಾರೆ.
IPL 2025: Wd,Wd,Wd,Wd,Nb,4,6; ಕೊನೆಯ ಓವರ್‌ನಲ್ಲಿ ಎಡವಿದ ಸಂದೀಪ್ ಶರ್ಮಾ
ಗೆಲುವಿನ ಶ್ರೇಯಸ್ಸು ಮಿಚೆಲ್ ಸ್ಟಾರ್ಕ್ ಗೆ ಸಲ್ಲಬೇಕು:
ಮಾತು ಮುಂದೆವರೆಸಿದ ಸಂಜು ಸ್ಯಾಮ್ಸನ್, ‘‘ನಾವು ಬ್ಯಾಟಿಂಗ್‌ನಲ್ಲಿ ಖಂಡಿತವಾಗಿಯೂ ಹಿಂದುಳಿದಿದ್ದೇವೆ. ನಾವೆಲ್ಲರೂ ಮಿಚೆಲ್ ಸ್ಟಾರ್ಕ್ ಅವರ ಅದ್ಭುತ ಬೌಲಿಂಗ್ ಅನ್ನು ನೋಡಿದ್ದೇವೆ. ದೆಹಲಿಯ ಗೆಲುವಿನ ಸಂಪೂರ್ಣ ಕ್ರೆಡಿಟ್ ಅನ್ನು ನಾನು ಮಿಚೆಲ್ ಸ್ಟಾರ್ಕ್‌ಗೆ ನೀಡುತ್ತೇನೆ. 20 ನೇ ಓವರ್‌ನಲ್ಲಿ ಅವರು ಬೌಲಿಂಗ್ ಮಾಡಿದ ರೀತಿ, ಅವರು ಅಲ್ಲಿಯೇ ಪಂದ್ಯವನ್ನು ಗೆದ್ದರು. ನಾವು ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದೆವು. ನಮ್ಮ ಬೌಲರ್‌ಗಳು ಮತ್ತು ಫೀಲ್ಡರ್‌ಗಳಿಗೆ ನಾನು ಕ್ರೆಡಿಟ್ ನೀಡಲು ಬಯಸುತ್ತೇನೆ. ಮೈದಾನದಲ್ಲಿ ನಮ್ಮ ಬೌಲಿಂಗ್ ಪಡೆ ಉತ್ತಮ ಆಟ ಆಡಿದೆ’’ ಎಂದು ಹೇಳಿದರು.
ಸೂಪರ್ ಓವರ್‌ನಲ್ಲಿ ಸಂದೀಪ್ ಬೌಲಿಂಗ್ ಮಾಡಿದ ಬಗ್ಗೆ ಮಾತನಾಡಿದ ಸಂಜು, ‘‘ಕಳೆದ ಕೆಲವು ಬಾರಿ ಸಂದೀಪ್ ನಮಗಾಗಿ ಹಲವು ಕಷ್ಟಕರ ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ ಮತ್ತು ಅವರು ಯಶಸ್ಸನ್ನು ಸಹ ಪಡೆದರು, ಆದರೆ ಈ ಪಂದ್ಯದಲ್ಲಿ ಅವರು ಪರಿಣಾಮಕಾರಿಯಾಗಿರಲಿಲ್ಲ. ಕ್ರಿಕೆಟ್‌ನಲ್ಲಿ ಇದು ಸಂಭವಿಸುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಕಠಿಣ ಓವರ್‌ಗಳಲ್ಲಿ ಮಿಚೆಲ್ ಸ್ಟಾರ್ಕ್ ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು’’ ಎಂದು ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:54 am, Thu, 17 April 25