Rajat Patidar: ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ ರಜತ್ ಪಾಟಿದಾರ್

India A vs England Lions: ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡಕ್ಕೆ ಅಭಿಮನ್ಯು ಈಶ್ವರನ್ ಹಾಗೂ ರಜತ್ ಪಾಟಿದಾರ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 73 ರನ್ ಪೇರಿಸಿ ಅಭಿಮನ್ಯು ಈಶ್ವರನ್ (32) ಔಟಾದರು. ಮತ್ತೊಂದೆಡೆ ಅದ್ಭುತ ಇನಿಂಗ್ಸ್ ಆಡಿದ ರಜತ್ ಪಾಟಿದಾರ್ ಇಂಗ್ಲೆಂಡ್ ಲಯನ್ಸ್ ಬೌಲರ್​ಗಳ ಬೆಂಡೆತ್ತಿದರು.

Rajat Patidar: ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ ರಜತ್ ಪಾಟಿದಾರ್
Rajat Patidar
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 13, 2024 | 11:57 AM

ಅಹದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಬಿ ಗ್ರೌಂಡ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಲಯನ್ಸ್​ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡದ ಬ್ಯಾಟರ್ ರಜತ್ ಪಾಟಿದಾರ್ (Rajat Patidar) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಎರಡು ದಿನಗಳ ಈ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಲಯನ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಯನ್ಸ್ ಪರ ಡಾನ್ ಮೌಸ್ಲಿ (60) ಅರ್ಧಶತಕ ಬಾರಿಸಿದರು.

ಈ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ಲಯನ್ಸ್ ತಂಡವು ಮೊದಲ ಇನಿಂಗ್ಸ್​ನಲ್ಲಿ 233 ರನ್​ಗಳಿಸಿ ಆಲೌಟ್ ಆಯಿತು. ಭಾರತ ಎ ಪರ ಮಾನವ್ ಸುತಾರ್ 3 ವಿಕೆಟ್ ಕಬಳಿಸಿದರೆ, ಆಕಾಶ್ ದೀಪ್ 2 ವಿಕೆಟ್ ಪಡೆದರು. ಇನ್ನು ವಿಧ್ವತ್ ಕಾವೇರಪ್ಪ, ತುಷಾರ್ ದೇಶಪಾಂಡೆ, ಪುಲ್ಕಿತ್ ನಾರಂಗ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

ಇದಾದ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡಕ್ಕೆ ಅಭಿಮನ್ಯು ಈಶ್ವರನ್ ಹಾಗೂ ರಜತ್ ಪಾಟಿದಾರ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 73 ರನ್ ಪೇರಿಸಿ ಅಭಿಮನ್ಯು ಈಶ್ವರನ್ (32) ಔಟಾದರು. ಮತ್ತೊಂದೆಡೆ ಅದ್ಭುತ ಇನಿಂಗ್ಸ್ ಆಡಿದ ರಜತ್ ಪಾಟಿದಾರ್ ಇಂಗ್ಲೆಂಡ್ ಲಯನ್ಸ್ ಬೌಲರ್​ಗಳ ಬೆಂಡೆತ್ತಿದರು. ಅಲ್ಲದೆ 131 ಎಸೆತಗಳಲ್ಲಿ ಪೂರೈಸಿದರು. ಶತಕದ ಬಳಿಕ ಬಿರುಸಿನ ಬ್ಯಾಟಿಂಗ್​ಗೆ ಮುಂದಾದ ರಜತ್ ಪಾಟಿದಾರ್ 141 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 18 ಫೋರ್​ಗಳೊಂದಿಗೆ 111 ರನ್ ಬಾರಿಸಿ ಔಟಾದರು.

ರಜತ್ ಪಾಟಿದಾರ್ ಅವರ ಈ ಭರ್ಜರಿ ಶತಕದ ನೆರವಿನಿಂದ ಭಾರತ ಎ ತಂಡವು 54 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 257 ರನ್ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ಸರ್ಫರಾಝ್ ಖಾನ್ (71) ಹಾಗೂ ಕೆಎಸ್ ಭರತ್ (25) ಬ್ಯಾಟಿಂಗ್ ಮಾಡುತ್ತಿದ್ದಾರೆ.

ಭಾರತ ಎ ತಂಡ: ಅಭಿಮನ್ಯು ಈಶ್ವರನ್ (ನಾಯಕ) , ಸಾಯಿ ಸುದರ್ಶನ್ , ರಜತ್ ಪಾಟಿದಾರ್ , ಪ್ರದೋಶ್ ಪಾಲ್ , ಸರ್ಫರಾಜ್ ಖಾನ್ , ಶ್ರೀಕರ್ ಭರತ್ , ಧ್ರುವ್ ಜುರೆಲ್ (​ವಿಕೆಟ್ ಕೀಪರ್) , ಮಾನವ್ ಸುತಾರ್ , ತುಷಾರ್ ದೇಶಪಾಂಡೆ , ನವದೀಪ್ ಸೈನಿ , ಆಕಾಶ್ ದೀಪ್ , ಪುಲ್ಕಿತ್ ನಾರಂಗ್ , ವಿಧ್ವತ್ ಕಾವೇರಪ್ಪ.

ಇದನ್ನೂ ಓದಿ: Babar Azam: ಬಾಬರ್ ಅಬ್ಬರಕ್ಕೆ ರೋಹಿತ್ ಶರ್ಮಾರ ದಾಖಲೆ ಬ್ರೇಕ್

ಇಂಗ್ಲೆಂಡ್ ಲಯನ್ಸ್ ತಂಡ: ಕೀಟನ್ ಜೆನ್ನಿಂಗ್ಸ್ , ಅಲೆಕ್ಸ್ ಲೀಸ್ , ಜೋಶ್ ಬೊಹಾನನ್ (ನಾಯಕ) , ಡ್ಯಾನ್ ಮೌಸ್ಲಿ , ಆಲಿವರ್ ಪ್ರೈಸ್ , ಜೇಮ್ಸ್ ರೆವ್ (ವಿಕೆಟ್ ಕೀಪರ್) , ಕೇಸಿ ಆಲ್ಡ್ರಿಡ್ಜ್ , ಟಾಮ್ ಲಾವ್ಸ್ , ಬ್ರೈಡನ್ ಕಾರ್ಸೆ , ಜೇಮ್ಸ್ ಕೋಲ್ಸ್ , ಜ್ಯಾಕ್ ಕಾರ್ಸನ್ , ಮ್ಯಾಥ್ಯೂ ಫಿಶರ್ , ಕ್ಯಾಲಮ್ ಪಾರ್ಕಿನ್ಸನ್, ಮ್ಯಾಥ್ಯೂ ಪೊಟ್ಸ್​, ಒಲಿವರ್ ರಾಬಿನ್ಸನ್.

ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ