Ranji Trophy 2024: ಕರ್ನಾಟಕ ಬೌಲರ್ಗಳ ಪರಾಕ್ರಮ: ಮೊದಲ ದಿನವೇ ಗುಜರಾತ್ ಆಲೌಟ್
Ranji Trophy 2024: ಪ್ರಿಯಾಂಕ್ ಪಾಂಚಾಲ್ರನ್ನು 24 ರನ್ಗಳಿಗೆ ಔಟ್ ಮಾಡುವ ಮೂಲಕ ವಿಜಯಕುಮಾರ್ ವೈಶಾಕ್ 3ನೇ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಪ್ರಸಿದ್ಧ್ ಕೃಷ್ಣ ಮತ್ತೊಂದು ವಿಕೆಟ್ ಕಬಳಿಸಿದರು. ಕೇವಲ 45 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಗುಜರಾತ್ ತಂಡಕ್ಕೆ ಈ ಹಂತದಲ್ಲಿ ಕ್ಷಿತಿಜ್ ಪಟೇಲ್ ಹಾಗೂ ಉಮಾಂಗ್ ಕುಮಾರ್ ಆಸರೆಯಾದರು.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ (Ranji Trophy 2024) ಪಂದ್ಯದಲ್ಲಿ ಕರ್ನಾಟಕ ತಂಡ ಭರ್ಜರಿ ಬೌಲಿಂಗ್ ಪ್ರದರ್ಶಿಸಿದೆ. ಗುಜರಾತ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ವಾಸುಕಿ ಕೌಶಿಕ್ ಯಶಸ್ವಿಯಾದರು. 2ನೇ ಓವರ್ನ ಕೊನೆಯ ಎಸೆತದಲ್ಲಿ ಹೆಟ್ ಪಟೇಲ್ (4) ವಿಕೆಟ್ ಕಬಳಿಸಿದ ವಾಸುಕಿ, 3ನೇ ಓವರ್ನ ಮೊದಲ ಎಸೆತದಲ್ಲೇ ಮತ್ತೊಂದು ವಿಕೆಟ್ ಪಡೆದರು.
ಇನ್ನು ಪ್ರಿಯಾಂಕ್ ಪಾಂಚಾಲ್ರನ್ನು 24 ರನ್ಗಳಿಗೆ ಔಟ್ ಮಾಡುವ ಮೂಲಕ ವಿಜಯಕುಮಾರ್ ವೈಶಾಕ್ 3ನೇ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಪ್ರಸಿದ್ಧ್ ಕೃಷ್ಣ ಮತ್ತೊಂದು ವಿಕೆಟ್ ಕಬಳಿಸಿದರು. ಕೇವಲ 45 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಗುಜರಾತ್ ತಂಡಕ್ಕೆ ಈ ಹಂತದಲ್ಲಿ ಕ್ಷಿತಿಜ್ ಪಟೇಲ್ ಹಾಗೂ ಉಮಾಂಗ್ ಕುಮಾರ್ ಆಸರೆಯಾದರು.
5ನೇ ವಿಕೆಟ್ಗೆ 157 ರನ್ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ವಿಜಯ್ ಕುಮಾರ್ ವಿಶಾಕ್ ಯಶಸ್ವಿಯಾದರು. 161 ಎಸೆತಗಳಲ್ಲಿ 95 ರನ್ ಬಾರಿಸಿದ ಕ್ಷಿತಿಜ್ ಪಟೇಲ್ ಔಟಾದ ಬೆನ್ನಲ್ಲೇ ಉಮಾಂಗ್ ಕುಮಾರ್ (72) ಕೂಡ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕರ್ನಾಟಕ ಬೌಲರ್ ಕೆಳ ಕ್ರಮಾಂಕದ ಬ್ಯಾಟರ್ಗಳನ್ನು ಬ್ಯಾಕ್ ಟು ಬ್ಯಾಕ್ ಔಟ್ ಮಾಡಿದುರ. ಅದರಂತೆ ಮೊದಲ ದಿನದಾಟದ ಮುಕ್ತಾಯಕ್ಕೂ ಮುನ್ನ 264 ರನ್ಗಳಿಗೆ ಗುಜರಾತ್ ತಂಡವನ್ನು ಆಲೌಟ್ ಮಾಡಿ ಕರ್ನಾಟಕ ತಂಡ ಮೇಲುಗೈ ಸಾಧಿಸಿದೆ.
ಕರ್ನಾಟಕ ಪರ ವಾಸುಕಿ ಕೌಶಿಕ್ 4 ವಿಕೆಟ್ ಕಬಳಿಸಿದರೆ, ವಿಜಯಕುಮಾರ್ ವೈಶಾಕ್, ಪ್ರಸಿದ್ಧ್ ಕೃಷ್ಣ ಹಾಗೂ ರೋಹಿತ್ ಕುಮಾರ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಗುಜರಾತ್ ಪ್ಲೇಯಿಂಗ್ 11: ಪ್ರಿಯಾಂಕ್ ಪಾಂಚಾಲ್ , ಹೆಟ್ ಪಟೇಲ್ (ವಿಕೆಟ್ ಕೀಪರ್) , ಸನ್‌ಪ್ರೀತ್‌ಸಿಂಗ್ ಬಗ್ಗಾ , ಮನನ್ ಹಿಂಗ್ರಾಜಿಯಾ , ಕ್ಷಿತಿಜ್ ಪಟೇಲ್ , ಉಮಂಗ್ ಕುಮಾರ್ , ಚಿಂತನ್ ಗಜ (ನಾಯಕ) , ರಿಪಾಲ್ ಪಟೇಲ್ , ಸಿದ್ಧಾರ್ಥ್ ದೇಸಾಯಿ , ಅರ್ಜನ್ ನಾಗವಾಸ್ವಾಲ್ಲಾ , ರಿಂಕೇಶ್ ವಘೇಲಾ
ಇದನ್ನೂ ಓದಿ: Rohit Sharma: ಧೋನಿ, ಕೊಹ್ಲಿಯ ಬೇಡದ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ
ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ನಿಕಿನ್ ಜೋಸ್ , ಸುಜಯ್ ಸಾತೇರಿ (ವಿಕೆಟ್ ಕೀಪರ್) , ದೇವದತ್ ಪಡಿಕ್ಕಲ್ , ಮನೀಶ್ ಪಾಂಡೆ , ಶುಭಾಂಗ್ ಹೆಗ್ಡೆ , ರೋಹಿತ್ ಕುಮಾರ್ , ಪ್ರಸಿದ್ಧ್ ಕೃಷ್ಣ , ವಿಜಯ್ ಕುಮಾರ್ ವೈಶಾಕ್ , ವಾಸುಕಿ ಕೌಶಿಕ್ , ರವಿಕುಮಾರ್ ಸಮರ್ಥ್.