Ranji Trophy 2024: ಯಶ್ ಭರ್ಜರಿ ಸೆಂಚುರಿ: ಮಧ್ಯ ಪ್ರದೇಶಕ್ಕೆ 321 ರನ್ಗಳ ಗುರಿ
Ranji Trophy 2024: ರಣಜಿ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು 70 ರನ್ಗಳಿಂದ ಸೋಲಿಸಿ ಮುಂಬೈ ತಂಡವು ಫೈನಲ್ಗೆ ಪ್ರವೇಶಿಸಿದೆ. ಇದೀಗ ವಿದರ್ಭ ಮತ್ತು ಮಧ್ಯ ಪ್ರದೇಶ್ ತಂಡಗಳ ನಡುವೆ ಸೆಮಿಫೈನಲ್ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಮುಂಬೈ ತಂಡವನ್ನು ಎದುರಿಸಲಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ (Ranji Trophy 2024) ಮೊದಲ ಸೆಮಿಫೈನಲ್ ಪಂದ್ಯವು ಮುಕ್ತಾಯದ ಹಂತದತ್ತ ಸಾಗುತ್ತಿದೆ. ಮಧ್ಯ ಪ್ರದೇಶ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಅಥರ್ವ ತೈಡೆ 39 ರನ್ ಬಾರಿಸಿದರೆ, ಕರುಣ್ ನಾಯರ್ (63) ಅರ್ಧಶತಕ ಸಿಡಿಸಿದರು. ಆದರೆ ಮಧ್ಯ ಪ್ರದೇಶ್ ಪರ ಕರಾರುವಾಕ್ ದಾಳಿ ಸಂಘಟಿಸಿದ ಅವೇಶ್ ಖಾನ್ 4 ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ಮೊದಲ ಇನಿಂಗ್ಸ್ನಲ್ಲಿ ವಿದರ್ಭ ತಂಡವು 170 ರನ್ಗಳಿಗೆ ಆಲೌಟ್ ಆಯಿತು.
ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಮಧ್ಯ ಪ್ರದೇಶ್ ಪರ ಆರಂಭಿಕ ಆಟಗಾರ ಹಿಮಾಂಶು ಮಂತ್ರಿ (126) ಭರ್ಜರಿ ಶತಕ ಸಿಡಿಸಿದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದರೊಂದಿಗೆ 252 ರನ್ಗಳಿಗೆ ಮಧ್ಯ ಪ್ರದೇಶ್ ತಂಡದ ಮೊದಲ ಇನಿಂಗ್ಸ್ ಅಂತ್ಯಗೊಂಡಿತು.
ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ವಿದರ್ಭ ಪರ ಯಶ್ ರಾಥೋಡ್ 200 ಎಸೆತಗಳಲ್ಲಿ 18 ಫೋರ್ ಹಾಗೂ 2 ಸಿಕ್ಸ್ಗಳೊಂದಿಗೆ 141 ರನ್ ಬಾರಿಸಿದರು. ಮತ್ತೊಂದೆಡೆ ಅಕ್ಷಯ್ ವಾಡ್ಕರ್ 77 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ವಿದರ್ಭ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 402 ರನ್ ಕಲೆಹಾಕಿತು.
ಮೊದಲ ಇನಿಂಗ್ಸ್ನ 82 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 321 ರನ್ಗಳ ಗುರಿ ಪಡೆದಿರುವ ಮಧ್ಯ ಪ್ರದೇಶ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. 20 ಓವರ್ಗಳ ಮುಕ್ತಾಯದ ವೇಳೆ 1 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿದೆ. ಇನ್ನು 226 ರನ್ಗಳ ಅವಶ್ಯಕತೆಯಿದ್ದು, ಕ್ರೀಸ್ನಲ್ಲಿ ಯಶ್ ದುಬೆ (39) ಹಾಗೂ ಹರ್ಷ್ ಗೌಳಿ (48) ಬ್ಯಾಟಿಂಗ್ ಮಾಡುತ್ತಿದ್ದಾರೆ.
ವಿದರ್ಭ ಪ್ಲೇಯಿಂಗ್ 11: ಅಥರ್ವ ತೈಡೆ , ಧ್ರುವ ಶೋರೆ , ಯಶ್ ರಾಥೋಡ್ , ಕರುಣ್ ನಾಯರ್ , ಅಕ್ಷಯ್ ವಾಡ್ಕರ್ (ನಾಯಕ) , ಆದಿತ್ಯ ಸರ್ವತೆ , ಯಶ್ ಠಾಕೂರ್ , ಉಮೇಶ್ ಯಾದವ್ , ಆದಿತ್ಯ ಠಾಕರೆ , ಅಕ್ಷಯ್ ವಾಖರೆ , ಅಮನ್ ಮೊಖಾಡೆ.
ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ
ಮಧ್ಯ ಪ್ರದೇಶ್ ಪ್ಲೇಯಿಂಗ್ 11: ಯಶ್ ದುಬೆ , ಹಿಮಾಂಶು ಮಂತ್ರಿ, ಹರ್ಷ್ ಗಾವ್ಲಿ , ಶುಭಂ ಎಸ್ ಶರ್ಮಾ (ನಾಯಕ) , ವೆಂಕಟೇಶ್ ಅಯ್ಯರ್ , ಸರನ್ಶ್ ಜೈನ್ , ಅನುಭವ್ ಅಗರ್ವಾಲ್ , ಕುಮಾರ್ ಕಾರ್ತಿಕೇಯ , ಅವೇಶ್ ಖಾನ್ , ಕುಲ್ವಂತ್ ಖೇಜ್ರೋಲಿಯಾ , ಸಾಗರ್ ಸೋಲಂಕಿ.