Ranji Trophy 2025: ಪಂಜಾಬ್ ವಿರುದ್ಧ ಕರ್ನಾಟಕ ತಂಡಕ್ಕೆ ಅಮೋಘ ಜಯ

Ranji Trophy 2025: Karnataka vs Punjab: ಶುಭ್​ಮನ್ ಗಿಲ್ ನಾಯಕತ್ವದ ಪಂಜಾಬ್ ತಂಡದ ವಿರುದ್ಧ ಮಯಾಂಕ್ ಅಗರ್ವಾಲ್ ಮುಂದಾಳತ್ವದ ಕರ್ನಾಟಕ ತಂಡವು ಇನಿಂಗ್ಸ್ ಮತ್ತು 207 ರನ್​ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಪ್ರಥಮ ಇನಿಂಗ್ಸ್​ನಲ್ಲಿ ಕರ್ನಾಟಕ ತಂಡವು 475 ರನ್​ಗಳ ಬೃಹತ್ ಮೊತ್ತ ಪೇರಿಸಿದ್ದರಿಂದ​ ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟ್ ಮಾಡುವ ಅವಕಶ್ಯತೆಯೇ ಬರಲಿಲ್ಲ.

Ranji Trophy 2025: ಪಂಜಾಬ್ ವಿರುದ್ಧ ಕರ್ನಾಟಕ ತಂಡಕ್ಕೆ ಅಮೋಘ ಜಯ
Karnataka
Follow us
ಝಾಹಿರ್ ಯೂಸುಫ್
|

Updated on: Jan 25, 2025 | 2:41 PM

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕರ್ನಾಟಕ ತಂಡ ಅಮೋಘ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ವೇಗದ ದಾಳಿ ಸಂಘಟಿಸಿದ ವಾಸುಕಿ ಕೌಶಿಕ್ 4 ವಿಕೆಟ್ ಪಡೆದರೆ, ಅಭಿಲಾಷ್ ಶೆಟ್ಟಿ 3 ವಿಕೆಟ್ ಕಬಳಿಸಿದರು. ಪರಿಣಾಮ ಪಂಜಾಬ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 55 ರನ್​ಗಳಿಗೆ ಆಲೌಟ್ ಆಯಿತು.

ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಆಡಿದ ಕರ್ನಾಟಕ ಪರ ಸ್ಮರಣ್ ರವಿಚಂದ್ರನ್ ಚೊಚ್ಚಲ ದ್ವಿಶತಕ ಸಿಡಿಸಿದರು. 277 ಎಸೆತಗಳನ್ನು ಎದುರಿಸಿದ ಸ್ಮರಣ್ 3 ಸಿಕ್ಸ್ ಹಾಗೂ 25 ಫೋರ್​ಗಳೊಂದಿಗೆ 203 ರನ್​ ಬಾರಿಸಿದರು. ಈ ಡಬಲ್ ಸೆಂಚುರಿ ನೆರವಿನಿಂದ ಕರ್ನಾಟಕ ತಂಡವು ಮೊದಲ ಇನಿಂಗ್ಸ್​ನಲ್ಲಿ 475 ರನ್​ಗಳಿಸಿ ಆಲೌಟ್ ಆಯಿತು.

ದ್ವಿತೀಯ ಇನಿಂಗ್ಸ್​:

420 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಂಜಾಬ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಆಟಗಾರ ಪ್ರಭ್​ಸಿಮ್ರಾನ್ ಸಿಂಗ್ 1 ರನ್​ಗಳಿಸಿ ಔಟಾದರೆ,  ಆ ಬಳಿಕ ಬಂದ ಅನ್​ಮೋಲ್​ಪ್ರೀತ್ ಸಿಂಗ್ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇದಾಗ್ಯೂ ಒಂದೆಡೆ ಕ್ರೀಸ್ ಕಚ್ಚಿ ಆಡಿದ ಶುಭ್​ಮನ್ ಗಿಲ್ ಆಕರ್ಷಕ ಹೊಡೆತಗಳೊಂದಿಗೆ ಗಮನ ಸೆಳೆದರು. ಅಲ್ಲದೆ ತಂಡದ ಪರ ಏಕಾಂಗಿ ಹೋರಾಟ ನಡೆಸಿ ಸ್ಕೋರ್ ಅನ್ನು 150ರ ಗಡಿದಾಟಿಸಿದರು.

ಇದರ ನಡುವೆ 171 ಎಸೆತಗಳನ್ನು ಎದುರಿಸಿದ ಶುಭ್​​ಮನ್ ಗಿಲ್ 3 ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 102 ರನ್ ಬಾರಿಸಿದರು. ಶತಕ ಬೆನ್ನಲ್ಲೇ ಗಿಲ್ ಅವರನ್ನು ಎಲ್​ಬಿಡಬ್ಲ್ಯೂ ಮಾಡುವಲ್ಲಿ ಶ್ರೇಯಸ್ ಗೋಪಾಲ್ ಯಶಸ್ವಿಯಾದರು.

ಶುಭ್​ಮನ್ ಗಿಲ್ ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕರ್ನಾಟಕ ಬೌಲರ್​ಗಳು, ಅಂತಿಮವಾಗಿ ಪಂಜಾಬ್ ತಂಡವನ್ನು 213 ರನ್​ಗಳಿಗೆ ಆಲೌಟ್ ಮಾಡಿದರು. ಈ ಮೂಲಕ ಕರ್ನಾಟಕ ತಂಡವು ಇನಿಂಗ್ಸ್ ಹಾಗೂ 207 ರನ್​ಗಳ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಕರ್ನಾಟಕ ತಂಡ ಗ್ರೂಪ್-ಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಈ ಪಾಯಿಂಟ್ ಟೇಬಲ್​ನಲ್ಲಿ ಮೊದಲ ಸ್ಥಾನದಲ್ಲಿ ಹರ್ಯಾಣ ತಂಡವಿದ್ದು, ದ್ವಿತೀಯ ಸ್ಥಾನದಲ್ಲಿ ಕೇರಳ ತಂಡವಿದೆ. ಇನ್ನು ಬಂಗಾಳ ತಂಡ ಮೂರನೇ ಸ್ಥಾನದಲ್ಲಿದ್ದರೆ, 12 ಅಂಕಗಳೊಂದಿಗೆ ಕರ್ನಾಟಕ 4ನೇ ಸ್ಥಾನ ಅಲಂಕರಿಸಿದೆ.

ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರವಾಲ್ (ನಾಯಕ) , ದೇವದತ್ ಪಡಿಕ್ಕಲ್ , ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್) , ಅನೀಶ್ ಕೆ ವಿ , ಸ್ಮರಣ್ ರವಿಚಂದ್ರನ್ , ಅಭಿನವ್ ಮನೋಹರ್ , ಶ್ರೇಯಸ್ ಗೋಪಾಲ್ , ಯಶೋವರ್ಧನ್ ಪರಂತಪ್ , ಪ್ರಸಿದ್ಧ್ ಕೃಷ್ಣ , ವಾಸುಕಿ ಕೌಶಿಕ್ , ಅಭಿಲಾಷ್ ಶೆಟ್ಟಿ.

ಇದನ್ನೂ ಓದಿ: ಟೀಮ್ ಇಂಡಿಯಾ ಆರ್ಭಟಕ್ಕೆ ಪಾಕಿಸ್ತಾನ್ ತಂಡದ ದಾಖಲೆ ಉಡೀಸ್

ಪಂಜಾಬ್ ಪ್ಲೇಯಿಂಗ್ 11: ಶುಭ್​ಮನ್ ಗಿಲ್ (ನಾಯಕ) , ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್) , ಅನ್ಮೋಲ್ಪ್ರೀತ್ ಸಿಂಗ್ , ಪುಖ್ರಾಜ್ ಮನ್ , ಸನ್ವಿರ್ ಸಿಂಗ್ , ರಮಣದೀಪ್ ಸಿಂಗ್ , ಜಸಿಂದರ್ ಸಿಂಗ್ , ಸುಖದೀಪ್ ಬಾಜ್ವಾ , ಆರಾಧ್ಯ ಶುಕ್ಲಾ , ಮಯಾಂಕ್ ಮಾರ್ಕಾಂಡೆ , ಗುರ್ನೂರ್ ಬ್ರಾರ್.

ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ರೈಲಿನಡಿ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ