IND vs ENG 2nd T20 Highlights: ತಿಲಕ್ ವರ್ಮಾ ಏಕಾಂಗಿ ಹೋರಾಟಕ್ಕೆ ಒಲಿದ ಜಯ
India vs England 2nd T20I Highlights in Kannada: ಗೆಲುವಿಗೆ 166 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 2 ವಿಕೆಟ್ ಬಾಕಿ ಇರುವಂತೆಯೇ ಜಯದ ನಗೆ ಬೀರಿದೆ. ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ತಿಲಕ್ ವರ್ಮಾ 55 ಎಸೆತಗಳಲ್ಲಿ 72 ರನ್ ಗಳಿಸಿ ಅಜೇಯರಾಗಿ ಉಳಿದರು. ಅದೇ ಸಮಯದಲ್ಲಿ ವಾಷಿಂಗ್ಟನ್ ಸುಂದರ್ ಕೂಡ 26 ರನ್ ಕೊಡುಗೆ ನೀಡಿದರು. ರವಿ ಬಿಷ್ಣೋಯ್ ಕೂಡ 5 ಎಸೆತಗಳಲ್ಲಿ ಅಜೇಯ 9 ರನ್ ಗಳಿಸಿದ್ದು, ಈ ಗೆಲುವಿನಲ್ಲಿ ಬಹುಮುಖ್ಯವಾಗಿ ಪರಿಣಮಿಸಿತು.
ತಿಲಕ್ ವರ್ಮಾ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಭಾರತ ತಂಡವು ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎರಡು ವಿಕೆಟ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 165 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತವು 19.2 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 166 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ತಿಲಕ್ ಹೊರತುಪಡಿಸಿ, ವಾಷಿಂಗ್ಟನ್ ಸುಂದರ್ 19 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು. ಆದರೆ ಒಂಬತ್ತನೇ ಬ್ಯಾಟ್ಸ್‌ಮನ್ ಆಗಿ ಬಂದ ರವಿ ಬಿಷ್ಣೋಯ್ ಐದು ಎಸೆತಗಳಲ್ಲಿ ಒಂಬತ್ತು ರನ್ ಗಳಿಸಿ ಅಜೇಯರಾಗುಳಿದರು.
LIVE NEWS & UPDATES
-
IND vs ENG 2nd T20I Live: ಭಾರತಕ್ಕೆ ರೋಚಕ ಜಯ
ಗೆಲುವಿಗೆ 166 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 2 ವಿಕೆಟ್ ಬಾಕಿ ಇರುವಂತೆಯೇ ಜಯದ ನಗೆ ಬೀರಿದೆ. ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ತಿಲಕ್ ವರ್ಮಾ 55 ಎಸೆತಗಳಲ್ಲಿ 72 ರನ್ ಗಳಿಸಿ ಅಜೇಯರಾಗಿ ಉಳಿದರು. ಅದೇ ಸಮಯದಲ್ಲಿ ವಾಷಿಂಗ್ಟನ್ ಸುಂದರ್ ಕೂಡ 26 ರನ್ ಕೊಡುಗೆ ನೀಡಿದರು. ರವಿ ಬಿಷ್ಣೋಯ್ ಕೂಡ 5 ಎಸೆತಗಳಲ್ಲಿ ಅಜೇಯ 9 ರನ್ ಗಳಿಸಿದ್ದು, ಈ ಗೆಲುವಿನಲ್ಲಿ ಬಹುಮುಖ್ಯವಾಗಿ ಪರಿಣಮಿಸಿತು.
-
IND vs ENG 2nd T20I Live: 12 ಎಸೆತಗಳಲ್ಲಿ 13 ರನ್
ಈಗ ಕೊನೆಯ 2 ಓವರ್‌ಗಳ ಆಟ ಬಾಕಿ ಇದೆ. ಪಂದ್ಯ ಗೆಲ್ಲಲು ಟೀಂ ಇಂಡಿಯಾ 12 ಎಸೆತಗಳಲ್ಲಿ 13 ರನ್ ಗಳಿಸಬೇಕಿದೆ.
-
IND vs ENG 2nd T20I Live: 8ನೇ ವಿಕೆಟ್
ಅರ್ಷದೀಪ್ ಸಿಂಗ್ ರೂಪದಲ್ಲಿ ಟೀಂ ಇಂಡಿಯಾ 8ನೇ ವಿಕೆಟ್ ಕೂಡ ಕಳೆದುಕೊಂಡಿದೆ. ಭಾರತ ಗೆಲ್ಲಲು ಇನ್ನೂ 18 ಎಸೆತಗಳಲ್ಲಿ 20 ರನ್‌ಗಳ ಅಗತ್ಯವಿದೆ.
IND vs ENG 2nd T20I Live: ತಿಲಕ್ ವರ್ಮಾ ಅರ್ಧಶತಕ
ತಿಲಕ್ ವರ್ಮಾ ಒಂದು ತುದಿಯ ಜವಾಬ್ದಾರಿ ವಹಿಸಿಕೊಂಡಿದ್ದು 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.
IND vs ENG 2nd T20I Live: ಅಕ್ಷರ್ ಪಟೇಲ್ ಔಟ್
ಈ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತೊಮ್ಮೆ ಮೇಲುಗೈ ಸಾಧಿಸಿದೆ. ಟೀಂ ಇಂಡಿಯಾ 126 ರನ್ ಗಳಿಗೆ 7ನೇ ವಿಕೆಟ್ ಕಳೆದುಕೊಂಡಿದೆ. ಅಕ್ಷರ್ ಪಟೇಲ್ 2 ರನ್ ಗಳಿಸಿ ಔಟಾದರು.
IND vs ENG 2nd T20I Live: ಭಾರತದ ಶತಕ ಪೂರ್ಣ
13 ಓವರ್‌ಗಳ ಬಳಿಕ ಭಾರತ ತಂಡ 5 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿದೆ. ತಿಲಕ್ ವರ್ಮಾ ಮತ್ತು ವಾಷಿಂಗ್ಟನ್ ಸುಂದರ್ ನಡುವೆ ಉತ್ತಮ ಜೊತೆಯಾಟ ನಡೆಯುತ್ತಿದೆ. ಇನ್ನು ಕೊನೆಯ 7 ಓವರ್‌ಗಳಲ್ಲಿ ಟೀಂ ಇಂಡಿಯಾ ಗೆಲುವಿಗೆ 53 ರನ್‌ಗಳ ಅಗತ್ಯವಿದೆ.
IND vs ENG 2nd T20I Live: 11 ಓವರ್ ಅಂತ್ಯ
ಭಾರತ ತಂಡ 11 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿದೆ. ಪ್ರಸ್ತುತ ತಿಲಕ್ ವರ್ಮಾ 35 ರನ್ ಹಾಗೂ ವಾಷಿಂಗ್ಟನ್ ಸುಂದರ್ 3 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
IND vs ENG 2nd T20I Live: ಸಂಕಷ್ಟದಲ್ಲಿ ಟೀಂ ಇಂಡಿಯಾ
ಟೀಂ ಇಂಡಿಯಾ 78 ರನ್ ಗಳಿಸುವಷ್ಟರಲ್ಲಿ 5ನೇ ವಿಕೆಟ್ ಕಳೆದುಕೊಂಡಿದೆ. ಹಾರ್ದಿಕ್ ಪಾಂಡ್ಯ 6 ಎಸೆತಗಳಲ್ಲಿ 7 ರನ್ ಗಳಿಸಿ ಔಟಾದರು. ಪಂದ್ಯ ಗೆಲ್ಲಲು ಭಾರತ ತಂಡಕ್ಕೆ ಇನ್ನೂ 65 ಎಸೆತಗಳಲ್ಲಿ 88 ರನ್‌ಗಳ ಅಗತ್ಯವಿದೆ.
IND vs ENG 2nd T20I Live: ಧ್ರುವ್ ಜುರೆಲ್ ಔಟ್
ಭಾರತ ತಂಡ 66 ರನ್‌ಗಳಿಗೆ ಧ್ರುವ್ ಜುರೆಲ್ ರೂಪದಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಇದೀಗ ಹಾರ್ದಿಕ್ ಪಾಂಡ್ಯ ಕ್ರೀಸ್ ಗೆ ಬಂದಿದ್ದಾರೆ.
IND vs ENG 2nd T20I Live: ಸೂರ್ಯ ಔಟ್
58 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ಮೂರನೇ ವಿಕೆಟ್ ಕಳೆದುಕೊಂಡಿದೆ. ಸೂರ್ಯಕುಮಾರ್ ಯಾದವ್ 7 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು.
IND vs ENG 2nd T20I Live: ಸಂಜು ಕೂಡ ಔಟ್
ಟೀಮ್ ಇಂಡಿಯಾ ಅತ್ಯಂತ ಕೆಟ್ಟ ಆರಂಭವನ್ನು ಹೊಂದಿದೆ. ಆರಂಭಿಕರಿಬ್ಬರೂ 19 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಸಂಜು ಸ್ಯಾಮ್ಸನ್ 5 ಎಸೆತಗಳಲ್ಲಿ 7 ರನ್ ಗಳಿಸಿ ಜೋಫ್ರಾ ಆರ್ಚರ್‌ಗೆ ಬಲಿಯಾದರು.
IND vs ENG 2nd T20I Live: ಅಭಿಷೇಕ್ ಶರ್ಮಾ ಔಟ್
ಭಾರತ ತಂಡ ಎರಡನೇ ಓವರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದ ಸ್ಟಾರ್ ಆಗಿದ್ದ ಅಭಿಷೇಕ್ ಶರ್ಮಾ ಎರಡನೇ ಓವರ್ ನಲ್ಲಿ ಮಾರ್ಕ್ ವುಡ್ ಅವರ ವೇಗದ ಎಸೆತದಲ್ಲಿ ಎಲ್ ಬಿಡಬ್ಲ್ಯೂ ಆಗಿ ಔಟಾದರು.
IND vs ENG 2nd T20I Live: ಟೀಂ ಇಂಡಿಯಾ ಬ್ಯಾಟಿಂಗ್ ಶುರು
ಟೀಂ ಇಂಡಿಯಾದ ಬ್ಯಾಟಿಂಗ್ ಶುರುವಾಗಿದ್ದು, ಮತ್ತೊಮ್ಮೆ ಸಂಜು ಸ್ಯಾಮ್ಸನ್-ಅಭಿಷೇಕ್ ಶರ್ಮಾ ಜೋಡಿ ಓಪನಿಂಗ್ ಆಗಿದೆ. ಟೀಂ ಇಂಡಿಯಾಗೆ 166 ರನ್‌ಗಳ ಗುರಿ ಇದೆ. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಬೌಲಿಂಗ್ ಆರಂಭಿಸಿದ್ದಾರೆ.
IND vs ENG 2nd T20I Live: ಭಾರತಕ್ಕೆ 166 ರನ್‌ಗಳ ಗುರಿ
ಇಂಗ್ಲೆಂಡ್ ಇನ್ನಿಂಗ್ಸ್ ಪೂರ್ಣಗೊಂಡಿದೆ. ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 165 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಸ್ಪಿನ್ನರ್‌ಗಳು ಮತ್ತೊಮ್ಮೆ ಪ್ರಾಬಲ್ಯ ಮೆರೆದರು. ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು. ಅದೇ ಸಮಯದಲ್ಲಿ ಅಭಿಷೇಕ್ ಶರ್ಮಾ ಮತ್ತು ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು. ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ, ಜೋಸ್ ಬಟ್ಲರ್ ಇಂಗ್ಲೆಂಡ್ ಪರ ಗರಿಷ್ಠ 45 ರನ್ ಗಳಿಸಿದರೆ, ಬ್ರೇಡೆನ್ ಕಾರ್ಸ್ ಕೂಡ 31 ರನ್ ಕೊಡುಗೆ ನೀಡಿದರು.
IND vs ENG 2nd T20I Live: 9ನೇ ವಿಕೆಟ್
ಇಂಗ್ಲೆಂಡ್ ಕೂಡ 157 ರನ್ ಗಳಿಸುವಷ್ಟರಲ್ಲಿ 9ನೇ ವಿಕೆಟ್ ಕಳೆದುಕೊಂಡಿತು. ಹಾರ್ದಿಕ್ ಪಾಂಡ್ಯ ಆದಿಲ್ ರಶೀದ್ ಅವರನ್ನು ಔಟ್ ಮಾಡಿದ್ದಾರೆ.
IND vs ENG 2nd T20I Live: 7ನೇ ವಿಕೆಟ್
ವರುಣ್ ಚಕ್ರವರ್ತಿ ಮತ್ತೊಂದು ವಿಕೆಟ್ ಪಡೆದರು. ಈ ಬಾರಿ ಅವರು ಜೇಮಿ ಓವರ್ಟನ್ ಅವರನ್ನು ವಜಾ ಮಾಡಿದ್ದಾರೆ. ಇದರೊಂದಿಗೆ ಇಂಗ್ಲೆಂಡ್ 136 ರನ್ ಗಳಿಗೆ 7ನೇ ವಿಕೆಟ್ ಕಳೆದುಕೊಂಡಿದೆ.
IND vs ENG 2nd T20I Live: ಆರನೇ ವಿಕೆಟ್
ಇಂಗ್ಲೆಂಡ್ 104 ರನ್ ಗಳಿಸುವಷ್ಟರಲ್ಲಿ ಆರನೇ ವಿಕೆಟ್ ಕಳೆದುಕೊಂಡಿತು. ಜೇಮಿ ಸ್ಮಿತ್ 12 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರು. ಅವರ ವಿಕೆಟ್ ಅನ್ನು ಅಭಿಷೇಕ್ ಶರ್ಮಾ ಪಡೆದರು.
IND vs ENG 2nd T20I Live: ಲಿವಿಂಗ್‌ಸ್ಟನ್ ಕೂಡ ಔಟ್
ಇಂಗ್ಲೆಂಡ್ ತಂಡದ ಅರ್ಧದಷ್ಟು ಆಟಗಾರರು 90 ರನ್ ಆಗುವಷ್ಟರಲ್ಲಿ ಪೆವಿಲಿಯನ್‌ಗೆ ಮರಳಿದ್ದಾರೆ. 14 ಎಸೆತಗಳಲ್ಲಿ 13 ರನ್ ಗಳಿಸಿ ಅಕ್ಷರ್ ಪಟೇಲ್‌ಗೆ ಬಲಿಯಾದ ಲಿಯಾಮ್ ಲಿವಿಂಗ್‌ಸ್ಟನ್ ರೂಪದಲ್ಲಿ ಇಂಗ್ಲೆಂಡ್ ಐದನೇ ಹೊಡೆತವನ್ನು ಅನುಭವಿಸಿದೆ.
IND vs ENG 2nd T20I Live: ಬಟ್ಲರ್ ಔಟ್
ಇಂಗ್ಲೆಂಡ್ ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ. 77 ರನ್ ಗಳಿಸಿದ್ದಾಗ ನಾಯಕ ಜೋಸ್ ಬಟ್ಲರ್ ಅವರ ವಿಕೆಟ್ ಕಳೆದುಕೊಂಡಿದೆ. ಜೋಸ್ ಬಟ್ಲರ್ 30 ಎಸೆತಗಳಲ್ಲಿ 45 ರನ್ ಗಳಿಸಿ ಔಟಾದರು. ಅಕ್ಷರ್ ಪಟೇಲ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.
IND vs ENG 2nd T20I Live: ವರುಣ್ಗೆ ವಿಕೆಟ್
ವರುಣ್ ಚಕ್ರವರ್ತಿ, ಹ್ಯಾರಿ ಬ್ರೂಕ್ ರೂಪದಲ್ಲಿ ಇಂಗ್ಲೆಂಡ್‌ಗೆ ಮೂರನೇ ಹೊಡೆತ ನೀಡಿದ್ದಾರೆ. ಇಂಗ್ಲೆಂಡ್ 59 ರನ್ ಗಳಿಗೆ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು. ಹ್ಯಾರಿ ಬ್ರೂಕ್ ಮತ್ತೊಮ್ಮೆ ವಿಫಲರಾಗಿ ಕೇವಲ 13 ರನ್ ಗಳಿಸಿದರು.
IND vs ENG 2nd T20I Live: ಅರ್ಧಶತಕ ಪೂರ್ಣ
ಇಂಗ್ಲೆಂಡ್ ತಂಡ 5.1 ಓವರ್‌ಗಳಲ್ಲಿ 50 ರನ್‌ಗಳ ಗಡಿ ದಾಟಿದೆ. ನಾಯಕ ಜೋಸ್ ಬಟ್ಲರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.
IND vs ENG 2nd T20I Live: ಡಕೆಟ್ ಔಟ್
ಇಂಗ್ಲೆಂಡ್ 26 ರನ್ ಗಳಿಸುವಷ್ಟರಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿದೆ. ಈ ಬಾರಿ ವಾಷಿಂಗ್ಟನ್ ಸುಂದರ್ ಬೆನ್ ಡಕೆಟ್ ಅವರನ್ನು ಬಲಿಪಶು ಮಾಡಿದ್ದಾರೆ. 6 ಎಸೆತಗಳಲ್ಲಿ 3 ರನ್ ಗಳಿಸಿ ಡಕೆಟ್ ಔಟಾದರು.
IND vs ENG 2nd T20I Live: 2 ಓವರ್ ಮುಕ್ತಾಯ
ಇಂಗ್ಲೆಂಡ್ ತಂಡ ಮೊದಲ 2 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 10 ರನ್ ಗಳಿಸಿದೆ. ಭಾರತದ ಬೌಲರ್‌ಗಳಿಂದ ಉತ್ತಮ ಬೌಲಿಂಗ್ ಕಾಣುತ್ತಿದೆ.
IND vs ENG 2nd T20I Live: ಸಾಲ್ಟ್ ಮತ್ತೆ ವಿಫಲ
ಇಂಗ್ಲೆಂಡ್ ತಂಡ ಮೊದಲ ಓವರ್ನಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಅರ್ಷದೀಪ್ ಸಿಂಗ್ ಫಿಲ್ ಸಾಲ್ಟ್ ಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. 4 ರನ್ ಗಳಿಸಿ ಸಾಲ್ಟ್ ಔಟಾದರು.
IND vs ENG 2nd T20I Live: ಇಂಗ್ಲೆಂಡ್
ಬೆನ್ ಡಕೆಟ್, ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ಸ್ಟನ್, ಜೇಮೀ ಸ್ಮಿತ್, ಜೇಮೀ ಓವರ್ಟನ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
IND vs ENG 2nd T20I Live: ಟೀಮ್ ಇಂಡಿಯಾ
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
IND vs ENG 2nd T20I Live: ಟಾಸ್ ಗೆದ್ದ ಟೀಂ ಇಂಡಿಯಾ
ಚೆನ್ನೈ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದಿದೆ. ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - Jan 25,2025 7:03 PM