2024 ರ ವರ್ಷದ ಟಿ20 ತಂಡ ಪ್ರಕಟ: ಭಾರತೀಯರದ್ದೇ ಪಾರುಪತ್ಯ
ICC Mens T20I Team of the Year 2024: ಐಸಿಸಿ, 2024ರ ಪುರುಷರ ಟಿ20 ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾಗೆ ಈ ತಂಡದ ನಾಯಕತ್ವ ನೀಡಲಾಗಿದೆ. ಈ ತಂಡದಲ್ಲಿ ಭಾರತದ 4 ಆಟಗಾರರಿಗೆ ಅವಕಾಶ ನೀಡಲಾಗಿದೆ. ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದ ಆಟಗಾರರು ವಿವಿಧ ದೇಶಗಳಿಂದ ಆಯ್ಕೆಯಾಗಿದ್ದಾರೆ.
ಐಸಿಸಿ, 2024 ರ ವರ್ಷದ ಪುರುಷರ ಟಿ20 ತಂಡವನ್ನು ಪ್ರಕಟಿಸಿದೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದಿದ್ದ ರೋಹಿತ್ ಶರ್ಮಾ ಅವರನ್ನು ಈ 11 ಆಟಗಾರರ ತಂಡಕ್ಕೆ ನಾಯಕರನ್ನಾಗಿ ಮಾಡಲಾಗಿದೆ. ಇವರಲ್ಲದೆ ಭಾರತದ ಇನ್ನೂ ಮೂವರು ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗೆ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರ ಹೆಸರುಗಳು ಸೇರಿವೆ. ಈ ಐಸಿಸಿ ತಂಡದಲ್ಲಿ ಗರಿಷ್ಠ 4 ಭಾರತೀಯ ಆಟಗಾರರಿದ್ದರೆ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದ ತಲಾ 1 ಆಟಗಾರನಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಭಾರತೀಯ ಆಟಗಾರರ ಪ್ರಾಬಲ್ಯ
2024 ರಲ್ಲಿನ ಪ್ರದರ್ಶನದ ಆಧಾರದ ಮೇಲೆ ಐಸಿಸಿ ತನ್ನ ತಂಡವನ್ನು ಮಾಡಿದೆ. ಕಳೆದ ವರ್ಷ ಭಾರತ ತಂಡದ ಆಟಗಾರರಿಗೆ ಉತ್ತಮ ವರ್ಷವಾಗಿತ್ತು. ಟೀಂ ಇಂಡಿಯಾ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಇದರಲ್ಲಿ ಅನೇಕ ಆಟಗಾರರು ಪ್ರಮುಖ ಪಾತ್ರ ವಹಿಸಿದ್ದರು. ಅದಕ್ಕಾಗಿಯೇ ರೋಹಿತ್ ನಾಯಕರಾಗಿರುವ ಐಸಿಸಿ ತಂಡದಲ್ಲಿ ಹೆಚ್ಚಿನ ಭಾರತೀಯರು ಕಾಣಿಸಿಕೊಂಡಿದ್ದಾರೆ.
ರೋಹಿತ್ 2024 ರಲ್ಲಿ 11 ಪಂದ್ಯಗಳಲ್ಲಿ 42 ರ ಸರಾಸರಿ ಮತ್ತು 160 ಸ್ಟ್ರೈಕ್ ರೇಟ್‌ನಲ್ಲಿ 378 ರನ್ ಗಳಿಸಿದ್ದರು. ಹಾರ್ದಿಕ್ 17 ಪಂದ್ಯಗಳಲ್ಲಿ 352 ರನ್ ಮತ್ತು 16 ವಿಕೆಟ್‌ಗಳನ್ನು ಸಹ ಪಡೆದಿದ್ದರು. ಮತ್ತೊಂದೆಡೆ, ಜಸ್ಪ್ರೀತ್ ಬುಮ್ರಾ 8 ಪಂದ್ಯಗಳಲ್ಲಿ ಕೇವಲ 8.26 ಸರಾಸರಿಯಲ್ಲಿ 15 ವಿಕೆಟ್ ಮತ್ತು ಅರ್ಷದೀಪ್ ಸಿಂಗ್ 18 ಪಂದ್ಯಗಳಲ್ಲಿ 36 ವಿಕೆಟ್ ಉರುಳಿಸಿದ್ದರು.
Congratulations to the elite players selected for the ICC Men’s T20I Team of the Year 2024 🙌 pic.twitter.com/VaPaV6m1bT
— ICC (@ICC) January 25, 2025
ಈ ಆಟಗಾರರಿಗೂ ಸ್ಥಾನ ಸಿಕ್ಕಿದೆ
ರೋಹಿತ್ ಶರ್ಮಾ ಜೊತೆಗೆ ಟ್ರಾವಿಸ್ ಹೆಡ್ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ. ಹೆಡ್ 2024 ರಲ್ಲಿ ಆಡಿದ 15 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 38.50 ಸರಾಸರಿ ಮತ್ತು 178 ಸ್ಟ್ರೈಕ್ ರೇಟ್‌ನಲ್ಲಿ 539 ರನ್ ಗಳಿಸಿದ್ದರು. ಇದರಲ್ಲಿ 4 ಅರ್ಧಶತಕಗಳು ಸೇರಿದ್ದವು. ಅದೇ ಸಮಯದಲ್ಲಿ, ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಮತ್ತು ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ನಾಯಕರಾಗಿದ್ದ ಬಾಬರ್ ಆಝಂ ಕೂಡ ಬ್ಯಾಟ್ಸ್‌ಮನ್‌ಗಳಾಗಿ ಆಯ್ಕೆಯಾಗಿದ್ದಾರೆ.
ಸಾಲ್ಟ್ ಕಳೆದ ವರ್ಷ ಆಡಿದ 17 ಟಿ20 ಪಂದ್ಯಗಳಲ್ಲಿ 467 ರನ್ ಮತ್ತು ಬಾಬರ್ 23 ಪಂದ್ಯಗಳಲ್ಲಿ 738 ರನ್ ಗಳಿಸಿದ್ದರು. 2024 ರಲ್ಲಿ ಆಡಿದ 21 ಪಂದ್ಯಗಳಲ್ಲಿ 464 ರನ್ ಗಳಿಸಿದ್ದ ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ ಅವರು ತಂಡದ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಜಿಂಬಾಬ್ವೆಯ ಸಿಕಂದರ್ ರಾಝಾ ಸ್ಪಿನ್ ಆಲ್ ರೌಂಡರ್ ಮತ್ತು ಅಫ್ಘಾನಿಸ್ತಾನ ಟಿ20 ತಂಡದ ನಾಯಕ ರಶೀದ್ ಅವರನ್ನು ಮುಖ್ಯ ಸ್ಪಿನ್ನರ್ ಆಗಿ ಆಯ್ಕೆ ಮಾಡಲಾಗಿದೆ. ಶ್ರೀಲಂಕಾದ ವನಿಂದು ಹಸರಂಗಾ ತಂಡದ ಎರಡನೇ ಪ್ರಮುಖ ಸ್ಪಿನ್ನರ್ ಆಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ