ದ್ರಾವಿಡ್​ ಕರೆ ಮಾಡಿದ ಬಳಿಕ ಗಂಗೂಲಿ ಯೂ ಟರ್ನ್​: ಟಿ20 ವಿಶ್ವಕಪ್​ ಆಡಲು ತೆರೆಮರೆಯಲ್ಲೇ ಪಯತ್ನ ಮಾಡಿದ್ದ ದಾದಾ

ಮೊದಲ ಟಿ20 ವಿಶ್ವಕಪ್‌ನಲ್ಲಿ ಭಾರತದ ನಾಲ್ವರು ಹಿರಿಯ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ಜಹೀರ್ ಖಾನ್ ಆಡಲಿಲ್ಲ. ಟಿ20 ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎಂದು ಹಿರಿಯ ಆಟಗಾರರು ಸ್ವತಃ ನಿರ್ಧರಿಸಿದ್ದಾರೆ ಮತ್ತು ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಹೇಳಲಾಗಿತ್ತು.

ದ್ರಾವಿಡ್​ ಕರೆ ಮಾಡಿದ ಬಳಿಕ ಗಂಗೂಲಿ ಯೂ ಟರ್ನ್​: ಟಿ20 ವಿಶ್ವಕಪ್​ ಆಡಲು ತೆರೆಮರೆಯಲ್ಲೇ ಪಯತ್ನ ಮಾಡಿದ್ದ ದಾದಾ
Dravid-Ganguly
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 05, 2022 | 3:00 PM

ಟೀಮ್ ಇಂಡಿಯಾ ಮಾಜಿ ನಾಯಕ ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಳೆದ ಒಂದೂವರೆ ತಿಂಗಳಿಂದ ಸುದ್ದಿಯಲ್ಲಿದ್ದಾರೆ. ವಿರಾಟ್ ಕೊಹ್ಲಿಯ ನಾಯಕತ್ವದ ವಿಚಾರದಿಂದ ಪಾರಂಭವಾದ ಗಂಗೂಲಿ ಚರ್ಚೆ ಈಗಲೂ ಮುಂದುವರೆದಿದೆ. ಕೊಹ್ಲಿ ಹಾಗೂ ಬಿಸಿಸಿಐ ನಡುವಣ ಭಿನ್ನಾಭಿಪ್ರಾಯದಿಂದ ಚರ್ಚೆಗಳು ಮರೆಯಾಗುವ ಮುನ್ನವೇ ಇದೀಗ ಸೌರವ್ ಗಂಗೂಲಿಗೆ ಸಂಬಂಧಿಸಿದ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿರುವುದು ಇದೇ ಮೊದಲಲ್ಲ ಎಂಬುದು ಇದೀಗ ಮತ್ತೊಮ್ಮೆ ಬಹಿರಂಗವಾಗಿದೆ. ಅವರು ನಾಯಕರಾಗಿದ್ದಾಗಲೂ ಇದೇ ರೀತಿಯ ಘಟನೆ ನಡೆದಿತ್ತು. ಆ ಬಳಿಕ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಆ ವೇಳೆ ಕೂಡ ಸಾಕಷ್ಟು ವಿವಾದ ಉಂಟಾಗಿತ್ತು. ಇದೀಗ ಬಿಸಿಸಿಐ ಮಾಜಿ ಜನರಲ್ ಮ್ಯಾನೇಜರ್ ಹಾಗೂ ಟೀಮ್ ಇಂಡಿಯಾದ ಮಾಜಿ ಮ್ಯಾನೇಜರ್ ರತ್ನಾಕರ್ ಶೆಟ್ಟಿ ಗಂಗೂಲಿ ಬಗ್ಗೆಗಿನ ಕೆಲ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅದು ಕೂಡ 2007ರ ಟಿ20 ವಿಶ್ವಕಪ್‌ಗೆ ಸಂಬಂಧಿಸಿದ ವಿಷಯ ಎಂಬುದು ವಿಶೇಷ.

ರತ್ನಾಕರ್ ಶೆಟ್ಟಿ ಅವರು ತಮ್ಮ ‘ ಆನ್ ಬೋರ್ಡ್: ಮೈ ಇಯರ್ಸ್ ಇನ್ ಬಿಸಿಸಿಐ ‘ ಪುಸ್ತಕದಲ್ಲಿ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರು 2007 ರ ಟಿ 20 ವಿಶ್ವಕಪ್‌ನಲ್ಲಿ ಆಡುವ ಅಥವಾ ಆಡದಿರುವ ವಿಷಯದ ಬಗ್ಗೆ ಒಮ್ಮತ ಹೊಂದಿರಲಿಲ್ಲ ಎಂದು ಬರೆದಿದ್ದಾರೆ. ಪುಸ್ತಕದ ಪ್ರಕಾರ, ‘ಆಯ್ಕೆಗಾರರ ​​ಸಭೆಗೆ ಒಂದು ದಿನ ಮೊದಲು, ನನಗೆ ರಾಹುಲ್ ಅವರಿಂದ ಕರೆ ಬಂದಿತು. ಸಚಿನ್ ಮತ್ತು ಸೌರವ್ ಅವರೊಂದಿಗೆ ಮಾತನಾಡಿದ್ದೇನೆ . ಟಿ20 ಯುವಕರ ಆಟ ಎಂದು ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು. ಅದರಂತೆ, ಐಸಿಸಿ ವಿಶ್ವ ಟಿ20ಗೆ ಮೂವರೂ ಅಲಭ್ಯರಾಗಿದ್ದಾರೆ ಎಂದು ಆಯ್ಕೆದಾರರಿಗೆ ತಿಳಿಸಬೇಕೆಂದು ಅವರು ವಿನಂತಿಸಿದರು.

ದಿಲೀಪ್ ( ದಿಲೀಪ್ ವೆಂಗ್‌ಸರ್ಕರ್) ಮತ್ತು ಅಯ್ಕೆ ಸಮಿತಿ ಸದಸ್ಯರು 30 ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದರು. ಈ ಪಟ್ಟಿಯಲ್ಲಿ ಸಚಿನ್, ದ್ರಾವಿಡ್ ಹಾಗೂ ಗಂಗೂಲಿಯನ್ನು ಪರಿಗಣಿಸಿರಲಿಲ್ಲ. ಇದಾದ ಬಳಿಕ ದಿಲೀಪ್ ವೆಂಗ್‌ಸರ್ಕರ್ ಅವರು ನನಗೆ ಸೌರವ್ ಅವರಿಂದ ಕರೆ ಬಂದಿದೆ ಎಂದು ಹೇಳಿದರು. ಈ ವೇಳೆ ಗಂಗೂಲಿ ತಾನು ಆಯ್ಕೆಗೆ ಲಭ್ಯನಿದ್ದು, ತಮಗೆ ನೀಡಿರುವ ಮಾಹಿತಿ ತಪ್ಪು ಎಂದು ಹೇಳಿದ್ದರು ಎಂದು ವೆಂಗ್‌ಸರ್ಕರ್ ತಿಳಿಸಿದ್ದರು. ಅಂತಿಮ ಕ್ಷಣದಲ್ಲಿ ಗಂಗೂಲಿ ತೆಗೆದುಕೊಂಡ ನಿರ್ಧಾರ ನಮಗೆಲ್ಲಾ ಅಚ್ಚರಿ ಮೂಡಿಸಿತ್ತು. ಅದರಲ್ಲೂ ದ್ರಾವಿಡ್ ಹೇಳಿದ ಬಳಿಕ ಗಂಗೂಲಿ ಕರೆ ಮಾಡಿದ್ದರಿಂದ ಗೊಂದಲ ಉಂಟಾಗಿತ್ತು ಎಂದು ಬಿಸಿಸಿಐ ಮಾಜಿ ಜನರಲ್ ಮ್ಯಾನೇಜರ್ ರತ್ನಾಕರ್ ಶೆಟ್ಟಿ ತಿಳಿಸಿದ್ದಾರೆ.

ಧೋನಿಗೆ ನಾಯಕನ ಪಟ್ಟ: ಮೊದಲ ಟಿ20 ವಿಶ್ವಕಪ್‌ನಲ್ಲಿ ಭಾರತದ ನಾಲ್ವರು ಹಿರಿಯ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ಜಹೀರ್ ಖಾನ್ ಆಡಲಿಲ್ಲ. ಟಿ20 ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎಂದು ಹಿರಿಯ ಆಟಗಾರರು ಸ್ವತಃ ನಿರ್ಧರಿಸಿದ್ದಾರೆ ಮತ್ತು ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಹೇಳಲಾಗಿತ್ತು. ಈ ಕಾರಣಕ್ಕಾಗಿ ಎಂಎಸ್ ಧೋನಿ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಆದರೆ ಈ ವೇಳೆ ಕೂಡ ಸೌರವ್ ಗಂಗೂಲಿ ಟಿ20 ತಂಡದಲ್ಲಿ ಸ್ಥಾನ ಪಡೆಯಲು ಬಯಸಿದ್ದರು ಎಂಬುದು ಇದೀಗ ರತ್ನಾಕರ ಶೆಟ್ಟಿ ಅವರ ಪುಸ್ತಕದಿಂದ ಬಹಿರಂಗವಾಗಿದೆ. ಅಷ್ಟೇ ಅಲ್ಲದೆ ಈ ಪುಸ್ತಕದಿಂದ ಟೀಮ್ ಇಂಡಿಯಾದ ಮತ್ತಷ್ಟು ಮಾಹಿತಿಗಳು ಹೊರಬೀಳುವ ಸಾಧ್ಯತೆಯಿದೆ.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ

ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್

(Ratnakar Shetty Memoir On Board my years in bcci Sourav Ganguly 2007 world t20)

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ