AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rivaba Jadeja: ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ರವೀಂದ್ರ ಜಡೇಜಾ ಪತ್ನಿ

Ravindra Jadeja's Wife Rivaba Becomes Gujarat Minister: ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಗುಜರಾತ್ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ರಜಪೂತ ಕರ್ಣಿ ಸೇನೆಯಲ್ಲಿದ್ದ ಇವರು, 2019ರಲ್ಲಿ ಬಿಜೆಪಿ ಸೇರಿ 2022ರಲ್ಲಿ ಶಾಸಕಿಯಾಗಿ ಆಯ್ಕೆಯಾದರು. ಮಾತೃಶಕ್ತಿ ಟ್ರಸ್ಟ್ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವ ರಿವಾಬಾ, ಚಿಕ್ಕ ವಯಸ್ಸಿನಲ್ಲೇ ಈ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ.

Rivaba Jadeja: ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ರವೀಂದ್ರ ಜಡೇಜಾ ಪತ್ನಿ
Rivaba Jadeja
ಪೃಥ್ವಿಶಂಕರ
|

Updated on:Oct 17, 2025 | 7:43 PM

Share

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರವೀಂದ್ರ ಜಡೇಜಾ (Ravindra Jadeja) ಅವರಿಗೆ ಶುಕ್ರದೆಸೆ ಶುರುವಾಗಿದೆ. ಏಕೆಂದರೆ ವಿದಾಯದ ಅಂಚಿನಲ್ಲಿರುವ ರವೀಂದ್ರ ಜಡೇಜಾ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ಉಪನಾಯಕತ್ವವಹಿಸಿಕೊಂಡಿದ್ದರು. ತಮಗೆ ಸಿಕ್ಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದ ಜಡೇಜಾ, ತಂಡ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಅವರ ಪತ್ನಿ ರಿವಾಬಾ ಸೋಲಂಕಿ ಜಡೇಜಾ (Rivaba Jadeja) ಅವರು ರಾಜಕೀಯ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಸಾಧಿಸಿದ್ದು, ಗುಜರಾತ್ ರಾಜ್ಯದ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಿವಾಬಾ ಜಡೇಜಾಗೆ ಸಚಿವೆ ಸ್ಥಾನ

ವಾಸ್ತವವಾಗಿ ಅಕ್ಟೋಬರ್ 17 ರಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೊರತುಪಡಿಸಿ ಎಲ್ಲಾ ಸಚಿವರು ಗುರುವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಹೀಗಾಗಿ ಸಂಪುಟ ಪುನರ್ರಚನೆ ಮಾಡಲಾಯಿತು. ಆ ಪ್ರಕಾರ ರವೀಂದ್ರ ಜಡೇಜಾ ಅವರ ಮಡದಿ ರಿವಾಬಾ ಜಡೇಜಾ ಅವರಿಗೂ ಸಚಿವ ಸಂಪುಟದಲ್ಲಿ ಅವಕಾಶ ನೀಡಲಾಗಿದೆ.

ರಾಜಕೀಯಕ್ಕೆ ಬರುವ ಮೊದಲು ರಜಪೂತ ಕರ್ಣಿ ಸೇನೆಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ರಿವಾಬಾ, 2019 ರ ಲೋಕಸಭಾ ಚುನಾವಣೆಗೂ ಮೊದಲು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಆ ಬಳಿಕ2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಿವಾಬಾ ಗೆಲುವು ಸಾಧಿಸುವಲ್ಲು ಯಶಸ್ವಿಯಾಗಿದ್ದರು. ಮಾತೃಶಕ್ತಿ ಎಂಬ ಚಾರಿಟಬಲ್ ಟ್ರಸ್ಟ್ ಮೂಲಕ, ಅವರು ಮಹಿಳಾ ಸಬಲೀಕರಣ ಮತ್ತು ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದೀಗ ಜಡ್ಡು ಅವರ ಪತ್ನಿಯಾಗಿ ಮಾತ್ರವಲ್ಲದೆ, ಚಿಕ್ಕ ವಯಸ್ಸಿನಲ್ಲಿಯೇ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕವೂ ರಿವಾಬಾ ಗಮನಾರ್ಹ ಸಾಧನೆ ಮಾಡಿದ್ದಾರೆ.

ಜಾಮ್​​ನಗರ ಉತ್ತರ ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು; ಮೊದಲ ಚುನಾವಣೆಯಲ್ಲೇ ಗೆದ್ದ ರಿವಾಬಾ ಜಡೇಜಾ

ಜಡೇಜಾ, ರಿವಾಬಾ ವೈವಾಹಿಕ ಬದುಕು

ನವೆಂಬರ್ 2, 1990 ರಂದು ಜನಿಸಿದ ರಿವಾಬಾ ಅವರ ತಂದೆ ಹರ್ದೇವ್ ಸಿಂಗ್ ಸೋಲಂಕಿ ಒಬ್ಬ ಉದ್ಯಮಿ ಮತ್ತು ತಾಯಿ ಪ್ರಫುಲ್ಲಾ ಸೋಲಂಕಿ ಭಾರತೀಯ ರೈಲ್ವೆಯ ಉದ್ಯೋಗಿಯಾಗಿದ್ದರು. ರಾಜ್‌ಕೋಟ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆದ ರಿವಾಬಾ, ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ರಿವಾಬಾ ರವೀಂದ್ರ ಜಡೇಜಾ ಅವರ ಸಹೋದರಿ ನೈನಾಳ ಸ್ನೇಹಿತೆ. ಒಂದು ಪಾರ್ಟಿಯಲ್ಲಿ, ನೈನಾ ರಿವಾಬಾರನ್ನು ತನ್ನ ಸಹೋದರ ರವೀಂದ್ರ ಜಡೇಜಾಗೆ ಪರಿಚಯಿಸಿದರು. ಆ ಬಳಿಕ ಇವರಿಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತು. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಈ ಪ್ರಣಯ ಪಕ್ಷಿಗಳು 2016 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:40 pm, Fri, 17 October 25